ಉಜ್ಜಯಿನಿ: ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ಭಿಕ್ಷುಕಿ ಮೇಲೆ ಕುಡುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಈ ಘಟನೆಯು ದೇವಸ್ಥಾನಗಳ ನಾಡು ಎಂದೇ ಕರೆಯಲಾಗುವ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಆರೋಪಿಯನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಅತ್ಯಂತ ಚಟುವಟಿಕೆಯ ಪ್ರದೇಶಗಳಲ್ಲಿ ಒಂದಾದ ಕೋಯ್ಲಾ ಪಾಠಕ್ ಸ್ಥಳದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಇದನ್ನೂ ಓದಿ: Ettinhole yojane: ಮತ್ತೊಂದು ಗ್ಯಾರಂಟಿ ಘೋಷಿಸಿದ ಸಿಎಂ ಸಿದ್ದರಾಮಯ್ಯ..!
ದುರಂತವೆಂದರೆ ಸ್ಥಳದಲ್ಲಿದ್ದ ಜನ ಮಧ್ಯಪ್ರವೇಶಿಸಿ ಕುಡುಕನಿಂದ ಆಕೆಯನ್ನು ಕಾಪಾಡುವ ಬದಲು, ಹೇಯ ಕೃತ್ಯದ ವಿಡಿಯೋವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ದುರಂತ.