Ettinhole yojane: Another guarantee announced by CM Siddaramaiah

Ettinhole yojane: ಮತ್ತೊಂದು ಗ್ಯಾರಂಟಿ ಘೋಷಿಸಿದ ಸಿಎಂ ಸಿದ್ದರಾಮಯ್ಯ‌..!

Ettinhole yojane: ಮತ್ತೊಂದು ಗ್ಯಾರಂಟಿ ಘೋಷಿಸಿದ ಸಿಎಂ ಸಿದ್ದರಾಮಯ್ಯ‌..!

ಹಾಸನ: ಎತ್ತಿನಹೊಳೆ (Ettinholr yojane) ಎರಡನೆ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರು ಭರವಸೆಯಿಂದ ನೀಡಿದರು.

ಇನ್ನಷ್ಟು ‌ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ‌ಚಾನೆಲ್ ಗೆ ಸೇರಿ: https://t.me/dcgkannada

ಎತ್ತಿನಹೊಳೆ (Ettinhole yojane) ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದ ಬಳಿಕ, ಹೆಬ್ಬಹಳ್ಳಿಯ 4 ನೇ ವಿತರಣಾ ತೊಟ್ಟಿ ಬಳಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಇದು ಎರಡು ಹಂತದ ಯೋಜನೆ. ಮೊದಲ ಹಂತ ಉದ್ಘಾಟನೆಯಾಗಿದೆ. ಎರಡನೇ ಹಂತ 2027 ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆಎಂದು ಸ್ಪಷ್ಟ ಭರವಸೆ ನೀಡಿದರು.

ಹೀಗಿದ್ದರೂ ಕೆಲವರು, ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಕೆಲವರು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ ಎಂದು ಕರೆ ನೀಡಿದರು.

ಎತ್ತಿನಹೊಳೆಗೆ ನನ್ನ ಕಾಲದಲ್ಲೇ ಭೂಮಿಪೂಜೆ ಆಗಿತ್ತು. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀವಿ. ಕೆರೆಗಳನ್ನು ತುಂಬಿಸಿಯೇ ತೀರುವುದೂ ಶತಸಿದ್ಧ ಎಂದು ಗ್ಯಾರಂಟಿ ಮಾತುಗಳನ್ನಾಡಿದರು.

ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಇದೇ ಸಂದರ್ಭದಲ್ಲಿ ಸ್ಪಷ್ಟ ಸೂಚನೆ ನೀಡಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಉಪನ್ಯಾಸಕಿ ಸೇರಿ ಮೂವರ ದುರ್ಮರಣ

ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿ ಐದು ತಾಲ್ಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ