
ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ತಹಸೀಲ್ದಾರ್ ಬಲರಾಮ ಕಟ್ಟೀಮನಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜದ ಅಧ್ಯಕ್ಷ ದಾನಯ್ಯ ಹಿರೇಮಠ, ಸಮಾಜದ ಪ್ರಮುಖರಾದ ಮುಪ್ಪಯ್ಯ ಮುಪ್ಪಯ್ಯನಮಠ, ಕೆ.ಪಿ.ಹಿರೇಮಠ, ಮುತ್ತು ಗಣಾಚಾರಿ, ಶರಣು ಹಿರೇಮಠ, ಚಂದ್ರಶೇಖರ ಶಿವಯೋಗಿಮಠ, ಸಂಗಯ್ಯ ಆಲೂರ, ಸಿದ್ದಯ್ಯ ಕಲ್ಯಾಣಮಠ, ಮಹಾಂತೇಶ ಬೂದಿಹಾಳಮಠ,ಅರವಿಂದ ಲದ್ದಿಮಠ, ಕುಮಾರ ಶಿವಯೋಗಿಮಠ, ಗೌರಮ್ಮ ಶಿವಯೋಗಿಮಠ, ಮಹಾಂತೇಶ ಮಠಪತಿ, ರಾಚಯ್ಯ ಹಿರೇಮಠ, ಗುರಯ್ಯ ಮುದ್ನೂರಮಠ, ಸಿದ್ಧಯ್ಯ ಗಣಾಚಾರಿ ಮೊದಲಾದವರು ಇದ್ದರು.
ಪಟ್ಟಣದ ಎಂ.ಜಿ.ವಿ.ಸಿ ಕಾಲೇಜು ಬಳಿ ಇರುವ ರೇಣುಕಾಚಾರ್ಯ ವೃತ್ತದಲ್ಲೂ ಜಯಂತಿ ಆಚರಿಸಲಾಯಿತು.