Running of Mahebuba Nagar-Bidarkundi Nagar Transport

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮುದ್ದೇಬಿಹಾಳ : ಸಾರ್ವಜನಿಕರ ಬೇಡಿಕೆಯೆ ಮೇರೆಗೆ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ನಗರದಲ್ಲಿ ಎರಡನೇ ಹಂತದ ಸಿಟಿ ಬಸ್ ಸಂಚಾರ ಗುರುವಾರದಿಂದ ಆರಂಭಿಸಲಾಯಿತು.

ಪಟ್ಟಣದ ಮಹೆಬೂಬ ನಗರದ ಉರ್ದು ಶಾಲೆಯ ಮುಂಭಾಗದಲ್ಲಿ ರಿಬ್ಬನ್ ಕತ್ತರಿಸಿ ನಗರ ಸಾರಿಗೆಗೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಚಾಲನೆ ನೀಡಿದರು.

ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ನಗರದ ಜನತೆಗೆ ಸಿಟಿ ಬಸ್‌ಗಳು ಒಳ್ಳೆಯ ಅನುಕೂಲತೆ ಕಲ್ಪಿಸಿದ್ದು ಖಾಸಗಿಯವರಿಗಿಂತ ಹೆಚ್ಚು ಉಪಯುಕ್ತವಾಗಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಕೆಯುಸಿ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಪೂಜಾರಿ, ಗ್ಯಾರಂಟಿ ಸಮಿತಿ ಸದಸ್ಯ ಸಂಗಣ್ಣ ಮೇಲಿನಮನಿ, ಅಲ್ಲಾಭಕ್ಷ್ಯ ಟಕ್ಕಳಕಿ, ಸಾಹೇಬಲಾಲ ದೇಸಾಯಿ, ಹುಸೇನ ಮುಲ್ಲಾ, ಗೋಪಿ ಮಡಿವಾಳರ, ಹುಸೇನಭಾಷಾ ಹುಣಸಗಿ, ಜಬ್ಬಾರ ಗೋಲಂದಾಜ, ರೋಷನ ಬೇಗ್, ಚಾಲಕ ಶೆಟ್ಟೆಪ್ಪ ಕಡಿ, ಕಂಟ್ರೋಲರ್ ಹಬೀಬ ಹಡಗಲಿ, ನಿರ್ವಾಹಕ ಅಮೋಘಸಿದ್ದ ಹಾದಿಮನಿ ಇದ್ದರು.

ಬಸ್ ಸಮಯ: ಬೆಳಗ್ಗೆ 7 ಗಂಟೆಯಿಂದ ನಾಲತವಾಡ ರಸ್ತೆಯ ಉರ್ದು ಶಾಲೆಯಿಂದ ಆರಂಭಗೊಳ್ಳುವ ನಗರ ಸಾರಿಗೆ ಸಂಚಾರ ಅರ್ಧಗಂಟೆಗೊಮ್ಮೆ ಬಿದರಕುಂದಿ ಗ್ರಾಮದವರೆಗಿನ ಕ್ರಾಸ್‌ವರೆಗೂ ಸಂಚರಿಸಲಿದೆ ಎಂದು ಸಾರಿಗೆ ಘಟಕದ ಮೂಲಗಳು ತಿಳಿಸಿವೆ.

Latest News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಸನ್

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎಂ.ಡಿ.ಮಾಗಿ(ಗೌರವ ಅಧ್ಯಕ್ಷ), ಎನ್.ಬಿ. ಪಿಂಜಾರ (ಅಧ್ಯಕ್ಷ), ಬಸವರಾಜ ಎಂ ಕಡಿ (ಪ್ರಧಾನ ಕಾರ್ಯದರ್ಶಿ),ಎಚ್. ಎಂ. ಕೊಣ್ಣೂರು (ಉಪಾಧ್ಯಕ್ಷ),ಬಸಯ್ಯ ಹಿರೇಮಠ (ರಾಜ್ಯ ಪರಿಷತ್ ಸದಸ್ಯ), ಎಲ್. ಎಸ್. ಸುಧಾಕರ(ಖಜಾಂಚಿ), ಆರ್. ಜಿ. ಗುಣಕಿ( ಸಹ ಕಾರ್ಯದರ್ಶಿ), ಬಿ. ಜಿ. ಬಿರಾದಾರ (ಸಂಘಟನಾ ಕಾರ್ಯದರ್ಶಿ), ದಯಾನಂದ ಪಾಟೀಲ, ಶಿವಾನಂದ ಮುತ್ತಗಿ, ಸಂಗಣ್ಣ ಹೂಗಾರ,

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಇದೇ 29 ನೇ ಭಾನುವಾರ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ದಿ ಗ್ರಾಂಡ್‌ ಕ್ಯಾಸಲ್‌, ಗೇಟ್‌ ಸಂಖ್ಯೆ 6 ರಲ್ಲಿ ಸಂಜೆ 5 ರಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿಶ್ವದ ಐವರು ಶ್ರೇಷ್ಠ ಯೋಗ ಸಾಧಕರಿಗೆ ಪ್ರಶಸ್ತಿ