ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.
ಪರೀಕ್ಷೆಗೆ ಕೂತಿದ್ದ 229 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅದರಲ್ಲಿ ಆಸೀಫಾ ಕಾಶೀಮ್ ಖತೀಬ ಶೇ.98ರಷ್ಟು ಅಂಕ ಪಡೆದು ಮುದ್ದೇಬಿಹಾಳ ನಗರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಇನ್ನುಳಿದAತೆ ಶೇ.97.83 ಅಂಕ ಪಡೆದ ಲಕ್ಷಿö್ಮÃ ಉಂಡಿ ದ್ವಿತೀಯ,ಶೇ.97.33 ಅಂಕ ಪಡೆದ ಸುಷ್ಮಿತಾ ದನ್ನೂರ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.ಉತ್ತೀರ್ಣರಾದ 229ರಲ್ಲಿ ಅದರಲ್ಲಿ 142 ಡಿಸ್ಟಿಂಕ್ಷನ್,76 ಪ್ರಥಮ,11 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಗಣಿತದಲ್ಲಿ 54,ಬಯೋಲಜಿ 48,ಫಿಸಿಕ್ಸ್ 32,ಕೆಮಿಸ್ಟಿç 6,ಕನ್ನಡದಲ್ಲಿ 8 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ,ಆಡಳಿತಾಧಿಕಾರಿ ಕಿರಣ ಮದರಿ,ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ,ಪ್ರಾಚಾರ್ಯ ಎಂ.ಎA.ಧನ್ನೂರ,ಮಾರ್ಗದರ್ಶಕರಾದ ರವಿ ಜಗಲಿ,ಬಸವರಾಜ ಗೂಡಲಮನಿ ಹಾಗೂ ಉಪನ್ಯಾಸಕರು,ಸಿಬ್ಬಂದಿ ಮೊದಲಾದವರು ಅಭಿನಂದಿಸಿದ್ದಾರೆ.
ಫಲಿತಾಂಶ ಖುಷಿ ತಂದಿದೆ :
ಪ್ರತಿಭಾವಂತರು ಶಿಕ್ಷಣದಿಂದ ವಂಚಿತರಾಗಬಾರದು-ಎಂ.ಎನ್.ಮದರಿ
ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಬಡ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಾಲ್ಲೂಕಿನ ಮೂರು ಕಡೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ.ಇಂದು ಮಕ್ಕಳು ಉತ್ತಮ ಫಲಿತಾಂಶ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಯು ಟಾಪರ್ಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.2016ರಲ್ಲಿ ಕಾಲೇಜಿಗೆ ಅನುಮತಿ ಪಡೆದುಕೊಂಡಿದ್ದೇವು.2017ರಲ್ಲಿ ಶೇ.60 ರಷ್ಟು ಮಾತ್ರ ಫಲಿತಾಂಶ ಕಾಲೇಜು ದಾಖಲಿಸಿತ್ತು.ಆದರೆ ಮುಂದಿನ ವರ್ಷಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದು ಜನರ ಪ್ರೀತಿಗೆ ಪಾತ್ರವಾಗಿದೆ.ಶೇ.98 ರಷ್ಟು ಅಂಕ ಪಡೆದು ಆಸೀಫಾ ಖತೀಬ್ ಮುದ್ದೇಬಿಹಾಳ ನಗರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಅವರ ಪಾಲಕರು ಕೂಲಿಕಾರ್ಮಿಕರಿದ್ದು ಅವರ ಸಾಧನೆ ಹೆಮ್ಮೆ ತರಿಸಿದೆ ಎಂದು ಹೇಳಿದರು.
ಪಿಯುಸಿ ಟಾಪರ್ ಆಸೀಫಾ ಖಾತೀಬ್ ಮಾತನಾಡಿ, ಬೆಳಗಿನ ಜಾವವೇ ನಾನು ಓದುತ್ತಿದ್ದೆ.ತಂದೆ ತಾಯಿ ಬೆಂಬಲದಿAದ ಹಾಗೂ ಸಂಸ್ಥೆಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಇನ್ನೋರ್ವ ವಿದ್ಯಾರ್ಥಿನಿ ಸುಷ್ಮಿತಾ ದನ್ನೂರ ಮಾತನಾಡಿ, ಹಾಸ್ಟೆಲ್ನಲ್ಲಿದ್ದು ಓದಿ ಶೇ.97.33ರಷ್ಟು ಅಂಕ ಪಡೆದುಕೊಂಡಿದ್ದೇನೆ.ಇದಕ್ಕೆ ನನ್ನ ಬಡತನ ಎಂದಿಗೂ ಅಡ್ಡಿಯಾಗಲಿಲ್ಲ.ಓದಬೇಕು ಎಂಬ ಛಲ ಈ ಸಾಧನೆ ಮಾಡಲು ಕಾರಣವಾಗಿದೆ ಎಂದು ತಿಳಿಸಿದರು.
ಆಡಳಿತಾಧಿಕಾರಿ ಕಿರಣ್ ಮದರಿ, ಕಾಲೇಜಿನ ಪ್ರಾಚಾರ್ಯ ಎಂ.ಎಂ.ಧನ್ನೂರ,ಪಾಲಕ ಪ್ರತಿನಿಧಿ ಕಾಶೀಮ ಖತೀಬ್ ಮಾತನಾಡಿದರು. ಮಾರ್ಗದರ್ಶಕ ರವಿ ಜಗಲಿ,ಬಸವರಾಜ ಗೂಡ್ಲಮನಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರು,ಮುಖ್ಯಗುರು ವಿರೇಶ ಹುಲಿಕೇರಿ, ಪ್ರೊ.ಗುರು,ಪ್ರಶಾಂತ ಬಿರಾದಾರ, ನಾಗರಾಜ,ನವೀನ,ರಂಗಸ್ವಾಮಿ ಇದ್ದರು.ವಿದ್ಯಾರ್ಥಿಗಳಿಗೆ ಇದೇ ವೇಳೆಸಂಸ್ಥೆಯಿoದ ಸನ್ಮಾನಿಸಿ ಸಿಹಿ ನೀಡಿ ಗೌರವಿಸಲಾಯಿತು.







