ಯಾದಗಿರಿ/ ರಾಯಚೂರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಹಾಗೂ ರಾಯಚೂರು ಜಿಲ್ಲಾಧ್ಯಕ್ಷ ಹನಮಂತ ಅವರ ಉಪಸ್ಥಿತಿಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಡಿಸಿಜಿ ಕನ್ನಡ ವರದಿಗಾರ ಡಾ. ಶಿವು ರಾಠೋಡ್ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
Join Out Telegram: https://t.me/dcgkannada
ಲಿಂಗಸಗೂರು ತಾಲ್ಲೂಕಿನ ಮಲ್ಲಿಕಾರ್ಜುನ ರಾಂಪುರ ಹಾಗೂ ಹಟ್ಟಿ ಚಿನ್ನದ ಗಣಿಯ ಗ್ರಾಮದ ಕಾ.ನಿ.ಪ.ಧ್ವನಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕಡೇಚೂರು ಆಯ್ಕೆ ಆದರು.
ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಗೆಸ್ಟ್ ಹೌಸನಲ್ಲಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ ರಾಂಪುರ್, ಮಲ್ಲಿಕಾರ್ಜುನ ಅಲಬನೂರ್ ಮತ್ತು ಜಲಾಲುದ್ದಿನ್ ಸೇರಿದಂತೆ ಒಟ್ಟು 3 ಅಭ್ಯರ್ಥಿಗಳ ಕಣದಲ್ಲಿದ್ದರು. ಇದರಲ್ಲಿ ಮಲ್ಲಿಕರ್ಜುನ ರಾಂಪುರ್ ಜಯಶಾಲಿ ಆದರು. ಇದೊಂದಿಗೆ ಇತರೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶವನ್ನು ಹೊರಡಿಸಲಾಯಿತು.