ವಿದ್ಯುತ್ ಪ್ರವಹಿಸಿ ಹೊಲದಲ್ಲಿ ದಂಪತಿಗಳ ದಾರುಣ ಸಾವು!

ವಿದ್ಯುತ್ ಪ್ರವಹಿಸಿ ಹೊಲದಲ್ಲಿ ದಂಪತಿಗಳ ದಾರುಣ ಸಾವು!

ದಾವಣಗೆರೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ದಂಪತಿ ಸಾವನ್ನಪ್ಪಿರುವ ದಾರುಣ ದುರ್ಘಟನೆ ತಾಲೂಕಿನ ಕಾಟೀಹಳ್ಳಿ ಗ್ರಾಮದ ಜಮೀನಿನಲ್ಲಿ ಗುರುವಾರ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಲತಾ ಹಾಗೂ ನಾಗರಾಜ್ ದಂಪತಿ ಎಂದು ಗುರುತಿಸಲಾಗಿದೆ.

Join Our Telegram: https://t.me/dcgkannada

ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟ್ರಾನ್ಸ್‌ಫಾರ್ಮರ್​ನಿಂದ ವಿದ್ಯುತ್ ಗ್ರೌಂಡ್ ಆಗಿದ್ದನ್ನು ಗಮನಿಸದೆ ತೆರಳಿದ ಪರಿಣಾಮ ಶಾಕ್​ ತಗುಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Rain effect: ಧಾರಾಕಾರವಾಗಿ ಸುರಿದ ಮಳೆ.. ಹುನಗುಂದ ಮಾರುಕಟ್ಟೆ ಪ್ರದೇಶ ಜಲಾವೃತ..

ನಾಗರಾಜ್ ಹಾಗೂ ಲತಾ ದಂಪತಿ ರೈತರಾಗಿದ್ದು, ದಿನನಿತ್ಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ, ಮಳೆ ಹೆಚ್ಚಾಗಿದ್ದರಿಂದ ಮಳೆಯಿಂದ ಇಡೀ ಟ್ರಾನ್ಸ್‌ಫಾರ್ಮರ್ ಒದ್ದೆಯಾಗಿದೆ. ಇದರ ಪರಿಣಾಮವಾಗಿ ವಿದ್ಯುತ್ ಗ್ರೌಂಡ್ ಆಗಿದೆ‌. ಇದನ್ನು ಗಮನಿಸದ ಇಬ್ಬರೂ ಕೆಲಸ ಮಾಡುತ್ತಾ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು‌ ತಿಳಿದುಬಂದಿದೆ.

Latest News

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಪಟ್ಟಣದಲ್ಲಿ ಜ.11 ರಂದು ನಡೆಯಲಿರುವ ಹಿಂದೂ ಮಹಾ ಸಮ್ಮೇಳನ ಯಶಸ್ವಿಗೊಳಿಸುವಂತೆ ವೀರಶೈವ

ಜನಪರ ಸೇವೆಯಲ್ಲಿ ಅಸ್ಕಿ ಫೌಂಡೇಶನ್ ಸದಾ ಮುಂದೆ-ಸಿದ್ಧಲಿಂಗ ದೇವರು

ಜನಪರ ಸೇವೆಯಲ್ಲಿ ಅಸ್ಕಿ ಫೌಂಡೇಶನ್ ಸದಾ ಮುಂದೆ-ಸಿದ್ಧಲಿಂಗ ದೇವರು

ತಾಳಿಕೋಟಿ :  ಕೊಡುಗೈ ದಾನಿಗಳಲ್ಲಿ ಈ ಭಾಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಸಿ.ಬಿ.ಅಸ್ಕಿ ಅವರ

ಅಣ್ಣ-ತಂಗಿ ಲವ್ವಿಡವ್ವಿ.. ಸಾ*ವಿನಲ್ಲಿ ಅಂತ್ಯ

ಕಾಮದ ಮುಂದೆ ಈ ಕಾಲದಲ್ಲಿ ಸಂಬಂಧಕ್ಕೆ ಬೆಲೆನೆ ಇಲ್ಲವಾಗಿದೆ.. ಇಲ್ಲೊಂದು ಪ್ರೇಮದ ಕತೆಯೂ ಇದೆ

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮುದ್ದೇಬಿಹಾಳ ಘಟಕಕ್ಕೆ ನೂತನ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡು ಸೋಮವಾರ ಅಧಿಕಾರ ಸ್ವೀಕರಿಸಿದ ಅಶೋಕಕುಮಾರ ಭೋವಿ ಅವರನ್ನು ಬಿದರಕುಂದಿ ಆರ್‌ಎಂಎಸ್‌ಎ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಸದಸ್ಯ ಬಂದೇನವಾಜ್ ಕುಮಸಿ, ಮುಖ್ಯಗುರು ಅನೀಲಕುಮಾರ ರಾಠೋಡ, ಎಚ್.ಆರ್. ಬಾಗವಾನ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ ಮಾತನಾಡಿ, ಸಾರ್ವಜನಿಕ ಸಾರಿಗೆ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ;                                                                                          ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ; ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಈ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಿಂದ ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಎನ್ ಬಿರಾದಾರ ಭಾನುವಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಕಚೇರಿಯಲ್ಲಿ ಭಾನುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಆನಂದಗೌಡರ ಪ್ರತಿಸ್ಪರ್ಧಿ ಮೈಸೂರಿನ ಮಂಜೇಗೌಡ ಒಂದೂ ಮತಗಳನ್ನು ಪಡೆದುಕೊಳ್ಳದೇ ಠೇವಣಿ ನಷ್ಟ ಕಳೆದುಕೊಂಡರಲ್ಲದೇ