ಹುನಗುಂದ: ಪಟ್ಟಣದದಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರವಾಗಿ ಸುರಿದ ಮಳೆಯಿಂದ ಜನಜೀವನ ಕೆಲಕಾಲ (Rain effect) ಅಸ್ತವ್ಯಸ್ತಗೊಂಡಿತು.
Join Our Telegram: https://t.me/dcgkannada
ಪಟ್ಟಣದಲ್ಲಿ ಸಂಜೆ ಸುರಿದ ಮಳೆಯಿಂದಾಗಿ ತರಕಾರಿ ಮಾರುಕಟ್ಟೆ, ಕುಂಬಾರ ಓಣಿಯಲ್ಲಿ ಮನೆಗಳ ಮುಂದಿನ ಚರಂಡಿಗಳು ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕಂಡುಬಂತು.
ಗುಡುಗು ಸಹಿತ ಭಾರೀ ಮಳೆ ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಚರಂಡಿಯ ನೀರು ಹೊಳೆಯಂತೆ ಹರಿಯಿತು. ಇದರ ಪರಿಣಾಮ ತರಕಾರಿ ವ್ಯಾಪಾರಿಗಳು, ಪುಟ್ ಬಾತ್ ವ್ಯಾಪರಸ್ಥರು ಪರದಾಡಿದರು.
ಇದನ್ನೂ ಓದಿ: Sexual Abuse: ಇಬ್ಬರು ಹುಡಿಗೀಯರ ಜೊತೆಗೆ ಪತಿ ಸರಸ ಸಲ್ಲಾಪ.. ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ! (ವಿಡಿಯೋ ನೋಡಿ)
ಚರಂಡಿ ಸ್ವಚ್ಛತೆ ಇರದ ಕಾರಣ ಮಳೆಯ ನೀರು ಕೊಳಚೆ ನೀರಿನೊಂದಿಗೆ ಸೇರಿ ಸಂಪೂರ್ಣ ಮಾರುಕಟ್ಟೆ ತುಂಬಿಕೊಂಡಿತು. ಇದರಿಂದ ನೆಲದ ಮೇಲೆ ಮಾರಾಟಕ್ಕೆ ಹಚ್ಚಿದ್ದ ತರಕಾರಿ, ಹಣ್ಣುಗಳು ಕೆಲವು ನೀರು ಪಾಲಾದವು.
ತೆಗ್ಗು ಪ್ರದೇಶದ ಜನರು ತಮ್ಮ ಮನೆಗಳಲ್ಲಿ ನುಗ್ಗಿದ ನೀರು ಹೊರಹಾಕಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು.
ಒಟ್ಟಾರೆಯಾಗಿ ವರಮಾಹಲಕ್ಷ್ಮಿ ಹಬ್ಬದಂದು ರೈತರಿಗೆ ಖುಷಿಯ ಮಳೆ ಹನಿಗಳ ಸಿಂಚನವಾಗಿಯಿತು. ಇದರಿಂದ ತೊಗರಿ ಬೆಳೆಗೆ ಉಪಯೋಗವಾಗುತ್ತದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.