ವಿದ್ಯೆ ಅರಿಸಿಬಂದವರಿಗೆ ಬದುಕು ಕೊಡುವ ಗುಣ ಯಾದವಾಡದ ಮಣ್ಣಿಗಿದೆ: ಪಂಚಗಾರ
ಮುಧೋಳ: ವಿದ್ಯೆ ಅರಿಸಿಕೊಂಡು ಬಂದವರಿಗೆ ಅಪ್ಪಿಕೊಂಡು ಬದುಕು ಕಟ್ಟಿಕೊಳ್ಳಲು ಅಪ್ಪಿಕೊಂಡ ಮಣ್ಣಿನ ಗುಣ ಯಾದವಾಡದ ಮಣ್ಣಿನಲ್ಲಿದೆ ಇದೊಂದು ಒಂದು ಶಕ್ತಿ ಕೇಂದ್ರ, ಕವಿಪುಂಗವರು ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಭೂಮಿ ಇಲ್ಲಿ ವಿದ್ಯೆ ಅರಿಸಿ ಬಂದ ಅದೆಷ್ಟೋ ವಿದ್ಯಾರ್ಥಿಗಳು ಇಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು ಸ್ಮರಣೀಯವಾದುದು ಎಂದು ನಿವೃತ್ತ ಪ್ರಾಚಾರ್ಯ ಎನ್.ಎಸ್. ಪಂಚಗಾರ ಹೇಳಿದರು.
ಸಮೀಪದ ಯಾದವಾಡ ಪಟ್ಟಣದ ಚನ್ನಬಸಪ್ಪ ಹುಬ್ಬಳ್ಳಿ ಮುತ್ಯಾ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಜಿ.ಎನ್.ಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ೨೦೦೦ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಲ್ಲಿ ಕಲಿತ ಎಲ್ಲರೂ ಪುಣ್ಯವಂತರು ಹೆತ್ತ ಮಕ್ಕಳು ಕೂಡಾ ಗೌರವಿಸದ ಈ ಕಾಲ ಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ನಮ್ಮನ್ನು ನಡೆಸಿಕೊಂಡ ರೀತಿ ಅದ್ಭುತ, ಅದನ್ನು ಮಾತಿನಲ್ಲಿ ವರ್ಣಿಸಲ ಸಾಧ್ಯ ಎಂದು ಭಾವುಕರಾದರು.
ಪತ್ರಕರ್ತ ವೆಂಕಟೇಶ ಗುಡೆಪ್ಪನವರ, ಶಿಕ್ಷಕಿ ಮಹಾದೇವಿ ವಕ್ಕುಂದ, ಅಣ್ಣಪ್ಪ ಗಾಣಗೇರ, ಶ್ರೀಶೈಲ್ ಶಂಕರಶೆಟ್ಟಿ, ಮಂಜುನಾಥ ಗಾಣಗೇರ, ಮಾತನಾಡಿ ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ, ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರೌಢಶಾಲಾ ಶಿಕ್ಷಕರನ್ನಂತೂ ಮೆರೆಯಲು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಂಪನ್ಮೂಲ ಶಿಕ್ಷಕ ಎಸ್.ಎಸ್. ಬಳೂರಗಿ ಮಾತನಾಡಿ ಜಿ.ಎನ್.ಎಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಬದುಕು, ಸಮಾಜದಲ್ಲಿ ಛಲ, ಹಿಂಜರಿಕೆಯಿಲ್ಲದೇ ಮುನ್ನಡೆಯಲು ಸಾಧ್ಯ ಎಂದರು.
ಹುಬ್ಬಳ್ಲಿ ಮಠದ ಶ್ರೀ ಚನ್ನಬಸಪ್ಪ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ ಎಸ್.ಸಿ.ಗಾಣಗಿ, ಎಂ.ಗೋಪಾಲ, ಪಿ.ಬಿ.ದೇಶಪಾಂಡೆ, ಪಿ.ಎಸ್.ಕಲ್ಯಾಣಿ, ಜಿ.ಎಚ್.ಕಾಂಬಳೆ, ಹನಮಂತ ಮಾದರ ಶಿಕ್ಷಕರು ಮಾತನಾಡುವುದುರ ಜೊತಗೆ ಹಾಡು ಹಾಡಿ ರಂಜಿಸಿದರು. ಎನ್.ಡಿ.ಅತ್ತಾರ ಎಸ್.ಪಿ.ಗಾಣಗಿ, ಎಸ್.ಎಸ್.ಹೊಸಮನಿ, ಆಯ್,ಎಚ್.ಪಠಾಣ, ಪತ್ರಕರ್ತ ವೆಂಕಟೇಶ ಗುಡೆಪ್ಪನವರ, ಶಿಕ್ಷಕಿ ಮಹಾದೇವಿ ವಕ್ಕುಂದ ಶ್ರೀಶೈಲ್ ಶಂಕರಶೆಟ್ಟಿ, ಮಂಜುನಾಥ ಗಾಣಗೇರ, ಲಲಿತಾ ಶೆಗುಣಸಿ, ಸುಮನ್ ಚನ್ನಾಳ, ಡಾ.ಇಂದಿರಾ ಪಾಲಬಾವಿ ಮಾತನಾಡಿದರು.
ಬಿ.ಜಿ.ಕಾಗವಾಡ, ವಿಠ್ಠಲ ಮೇತ್ರಿ, ಯಶವಂತ ತೊಂಡಕಟ್ಟಿ, ವಿಲಾಸ ಬಂಡಿ, ಹಣಮಂತ ಕೆಂಜೋಳ ಸೇರಿದಂತೆ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಸನ್ಮಾನಿಸಿಲಾಯಿತು. ಎಲ್ಲ ವೃತ್ತಿಯಲ್ಲಿರುವ ಹಾಗೂ ನಿವೃತ್ತ ಶಿಕ್ಷಕ ಹಾಗೂ ಶಿಕ್ಷಕೇತರ ಶಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ, ಆಟಗಳು ಜರುಗಿದವು, ಶಿಕ್ಷಕರನ್ನು ಮೆರವಣಿಗೆಯ ಮೂಲಕ ಕಾರ್ಯಕ್ರಮದ ಹಾಲ್‌ಗೆ ಪುಷ್ಪಾರ್ಚನೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು ತದನಂತರದಲ್ಲಿ ಎಲ್ಲರಿಗೂ ಸಾಮೂಹಿಕ ಬೋಜನ ಕೂಟ ಏರ್ಪಡಿಸಲಾಯಿತು. ಅನ್ವರ ಜಿಡ್ಡಿಮನಿ, ಸ್ವಾಗತಿಸಿ, ಮಹಾದೇವಿ ವಕ್ಕುಂದ ಪ್ರಶಾಂತ ಚಿಕ್ಕೇಗೌಡರ ನಿರೂಪಿಸಿ ವೀಣಾ ತಿರ್ಲಾಪುರ ವಂದಿಸಿದರು. ಎಲ್‌ಇಡಿ ಪರದೆಯ ಮೇಲೆ ಬಿತ್ತರಿಸಿದ ಇಂದಿನ ಹಾಗೂ ಹಳೆಯ ನೆನಪುಗಳು ಭಾವುಕರಾಗುವಂತೆ ಮಾಡಿದವು. ಬಸವರಾಜ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
“ನಮ್ಮ ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿರುವುದು ನಮ್ಮ ಶಿಕ್ಷಕ ವೃತ್ತಿಗೆ ಹೆಮ್ಮೆ ತಂದಿದೆ. ಶಿಷ್ಯರು ಉನ್ನತ ಮಟ್ಟಕ್ಕೆ ಬೆಳೆದಾಗ ಗುರುವಿಗೆ ಸಂತಸ, ಸಾರ್ಥಕ ಭಾವ ಬರುತ್ತದೆ”.
ಎಸ್.ಎಸ್.ಬಳೂರಗಿ ಗಣಿತ ಶಿಕ್ಷಕರು