ಮುಧೋಳ : ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಭಟ್ಟಿ (smuggling centres) ಕೇಂದ್ರದ ಮೇಲೆ ದಾಳಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕಳ್ಳಭಟ್ಟಿ ಕೇಂದ್ರಗಳನ್ನು ನಾಶಪಡಿಸಿದ್ದಾರೆ.
Join Our Telegram: https://t.me/dcgkannada
ಮಾಧ್ಯಮದಲ್ಲಿ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ದಿನವಿಡೀ ಅರಣ್ಯ ಪ್ರದೇಶದಲ್ಲಿನ ಮೂರು ಜಾಗಗಳನ್ನು ಜಾಲಾಡಿ ಕಳ್ಳಭಟ್ಟಿ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ.
ಡಿಎಫ್ಒ ಸಿ.ಜೆ.ಮಿರ್ಜಿ, ಜಮಖಂಡಿ ಎಸಿಎಫ್ ಹಾಗೂ ಮುಧೋಳ ವಲಯ ಅರಣ್ಯಾಧಿಕಾರಿ ಎಚ್.ಬಿ. ಡೋಣಿ ಅವರ ಮಾರ್ಗದರ್ಶನದಲ್ಲಿ ನಡೆದ ಕಳ್ಳಭಟ್ಟಿ ಕೇಂದ್ರಗಳ ಮೇಲಿನ ದಾಳಿ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಮೇಶ ಮೆಟಗುಡ್ಡ, ಗಸ್ತು ಅರಣ್ಯಪಾಲಕರಾದ ಚಂದ್ರಶೇಖರ ಉಪ್ಪಾರ, ಶಿವರಾಜ ಸಜ್ಜನ, ಆನಂದ ಸಾಗರ, ಗುರಪ್ಪ ಬಾಗೇವಾಡಿ, ವಾಚರ್ ಗಳಾದ ಹನಮಂತ ತಳವಾರ, ಈರಪ್ಪ ಕೋಲೂರ ಹಾಗೂ ತಿಪ್ಪಣ್ಣ ವಾಬನ್ನವರ ಪಾಲ್ಗೊಂಡಿದ್ದರು.
ಇದನ್ನೂ ಓದಿ: ವಿದ್ಯುತ್ ಪ್ರವಹಿಸಿ ಹೊಲದಲ್ಲಿ ದಂಪತಿಗಳ ದಾರುಣ ಸಾವು!
ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ರಕ್ಷಣೆಗೆ ನಮ್ಮ ಸಿಬ್ಬಂದಿ ನಿರಂತರ ಶ್ರಮ ವಹಸುವರು. ಮುಂದಿನ ದಿನಗಳಲ್ಲಿ ನಿತ್ಯ ನಿರಂತರ ದಾಳಿಯಲ್ಲಿ ತೊಡಗುವ ಮೂಲಕ ಅರಣ್ಯ ಸಂಪತ್ತು ಕಾಪಾಡಲು ಕಟಿಬದ್ಧರಾಗಿರುವುದಾಗು ಬಾಗಲಕೋಟೆ ಡಿಎಫ್ಒ ಸಿ.ಜೆ.ಮಿರ್ಜಿ ತಿಳಿಸಿದ್ದಾರೆ.
ಮುಧೋಳ ವ್ಯಾಪ್ತಿಯ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಭಟ್ಟಿ ಕೇಂದ್ರಗಳನ್ನು (smuggling centres) ಮುಂದಿನ ದಿನಗಳಲ್ಲಿ ಗಸ್ತು ಪ್ರಕ್ರಿಯೆ ಚುರುಕುಗೊಳಿಸಿ ಕಳ್ಳಭಟ್ಟಿ ಸಂಪೂರ್ಣವಾಗಿ ನಿಯಂತ್ರಿಸಲಾಗುವುದು ಎಂದು ಮುಧೋಳ ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಬಿ.ಡೋಣಿ ತಿಳಿಸಿದ್ದಾರೆ.