ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ:ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ಕೊಡಿ-ಆನಂದ ದೇವರು

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ:ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ಕೊಡಿ-ಆನಂದ ದೇವರು

ಮುದ್ದೇಬಿಹಾಳ : ಮಕ್ಕಳ ಕೈಗೆ ಮೊಬೈಲ್ ಬದಲಾಗಿ ಪುಸ್ತಕಗಳನ್ನು ಕೊಟ್ಟರೆ ಅವರು ದೇಶವೇ ಹೊರಳಿ ನೋಡುವಂತ ಸಾಧನೆ ಮಾಡಲು ಪ್ರೇರೆಪಿಸುತ್ತದೆ ಎಂದು ಜಮಖಂಡಿ ಓಲೇಮಠದ ಆನಂದ ದೇವರು ಹೇಳಿದರು.

ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯ ವತಿಯುಂದ ಶನಿವಾರ ಲಿಂ. ಅಭಿನವ ಕುಮಾರ ಚನ್ನಬಸವ ಶ್ರೀಗಳ ನುಡಿನಮನ ಮತ್ತು ರಾಜ್ಯ ಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಯುವಕರು ಗುಟ್ಖಾ , ಮಟ್ಖಾ ಚಟಕ್ಕೆ ಬಿದ್ದಿದ್ದಾರೆ. ಮಕ್ಕಳ ಕೈಯಲ್ಲಿ ಒಳ್ಳೆಯ ಪುಸ್ತಕಗಳನ್ನು ನೀಡಿ. ಆಚಾರ, ವಿಚಾರ ಸಂಸ್ಕೃತಿಗಳನ್ನು ಕಲಿಸಲು ಪಾಲಕರು ಮುಂದಾಗಬೇಕು ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಸಾನಿಧ್ಯ ವಹಿಸಿದ್ದ ಯರಝರಿಯ ಯಲ್ಲಾಲಿಂಗ ಮಠದ ಮಲ್ಲಾರಲಿಂಗ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಮಾತನಾಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದನಗೌಡ ಮಂಗಳೂರ, ಪತ್ರಕರ್ತ ಚೇತನ ಶಿವಶಿಂಪಿ, ಶಿವಾನಂದ ವಾಲಿ, ಪ್ರಶಾಂತ ಕಾಳೆ, ಎಸ್.ಎಚ್.ಲೊಟಗೇರಿ, ಚಂದ್ರಶೇಖರ ಶಿವಯೋಗಿಮಠ, ಹೇಮಾ ಬಿರಾದಾರ, ಶರಣು ಟಕ್ಕಳಕಿ, ಅನಿಲ ತೇಲಂಗಿ ಇವರುಗಳಿಗೆ ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಜೀರಲಭಾವಿಯ ನಿತ್ಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮನಗೂಳಿಯ ಪಟ್ಟಣ ಪಂಚಾಯತ ಅಧ್ಯಕ್ಷ ಎಂ.ಡಿ.ಮೆತ್ರಿ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ಜಾವಿದ ಇನಾಮದಾರ, ಮುಖಂಡರಾದ ನಿತ್ಯಾನಂದ ಹಿರೇಮಠ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಇತರರು ಇದ್ದರು. ಅಶೋಕ ಗುಂಡಿನಮನಿ ನಿರೂಪಿಸಿದರು. ರೇಖಾವತಿ ಎಂ. ಎಸ್. ವಂದಿಸಿದರು.

Latest News

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ ಪಟ್ಟಣದ ಶ್ರೀ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 11 ನೇ ರಾಜ್ಯ ಪೆಂಕಾಕ್ ಸಿಲಾಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಾದ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ ) 20 ರಿಂದ 25 ಕೆಜಿ ವಿಭಾಗದಲ್ಲಿ ಕಂಚಿನ ಪದಕ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಬೇಕು. ಪ್ರತಿಯೊಬ್ಬ ನಾಗರಿಕರಲ್ಲಿಯೂ ಇದು ನಮ್ಮ ನಗರ, ನಮ್ಮ ಓಣಿ, ನನ್ನ ಮನೆ ಎಂಬ ಹೆಮ್ಮೆ ಮೂಡಿದಾಗ ಮಾತ್ರ ಸ್ವಚ್ಛ ನಗರ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಮ್ಮ ಮೂಡುವಂತೆ ನಾವು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ