ನಾಲತವಾಡ : ಕರ್ನಾಟಕ ರಾಜ್ಯ ದೇವಾಂಗ ಸಂಘ ಬೆಂಗಳೂರು ಹಾಗೂ ದೇವಾಂಗ ಸಮಾಜ ಹಾಗೂ ಶ್ರೀಮಧು ರಾಮಲಿಂಗ ಚೌಡೇಶ್ವರಿ ದೇವಸ್ಥಾನ ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ದೇವಾಂಗ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಾಲತವಾಡ ಪಟ್ಟಣದ ವಿದ್ಯಾರ್ಥಿನಿ ಅಶ್ವಿನಿ ಬಸವರಾಜ ರುದ್ರಗಂಟಿ (ಕುಳಿತವರಲ್ಲಿ ಎಡದಿಂದ ನಾಲ್ಕನೆಯವರು)ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಂಪಿ ಹೇಮಕೂಟ ಗಾಯತ್ರಿಪೀಠದ ದಯಾನಂದಪುರಿ ಸ್ವಾಮೀಜಿ,ಯೋಗಾನಂದ ಸ್ವಾಮೀಜಿ,ಮಂಗಳೂರಿನ ಡಾ.ಧರ್ಮಪಾಲನಾಥ ಸ್ವಾಮೀಜಿ,ರಾಜ್ಯಸಭಾ ಸದಸ್ಯ ಕೆ.ನಾರಾಯಣ,ಸಂಸದ ಬ್ರಿಜೇಶ ಚೌಟ,ಶಾಸಕ ವೇದವ್ಯಾಸ ಕಾಮತ, ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ,ಮಾಜಿ ಶಾಸಕ ಎಂ.ಡಿ.ಲಕ್ಷ್ಮಿ ನಾರಾಯಣ, ಪಿ.ಆರ್.ಗಿರಿಯಪ್ಪ ಮೊದಲಾದವರು ಇದ್ದರು.