ಹುಬ್ಬಳ್ಳಿ: ಮೊಬೈಲ್ ಬಳಕೆ ಮಾಡಬೇಡ ಎಂದು ಪಾಲಕರು ತಿಳಿ ಹೇಳಿದ್ದಕ್ಕೆ ಬಾಲಕ ಆತ್ಮಹತ್ಯೆ (Suicide news) ಮಾಡಿಕೊಂಡಿದ್ದಾನೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಹೌದು, ಅತಿಯಾಗಿ ಮೊಬೈಲ್ ಬಳಕೆ ಬೇಡ ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದು ಬಾಲಕನೋರ್ವ ಆತ್ಮಹತ್ಯೆ (Suicide news) ಮಾಡಿಕೊಂಡ ಘಟನೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿ ಸೋಮವಾರ ಸಂಭವಿಸಿದೆ.
ಸಮೃದ್ಧ (13) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಸರಿಯಾಗಿ ವಿದ್ಯಾಭ್ಯಾಸ ಮಾಡಬೇಕು. ಅದಕ್ಕಾಗಿ ಮೊಬೈಲ್ ಬಳಕೆ ಬಿಡು ಎಂದು ಪಾಲಕರು ಬುದ್ಧಿಮಾತು ಹೇಳಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಬಾಲಕ ನೇಣಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: Death news: ಮಹಿಳಾ ಪಿಎಸ್‌ಐ ಗಾಯತ್ರಿ ನಿಧನ
ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.