ಸಿಂಜೆಂಟಾ ಕಂಪನಿ ಅನ್ಯಾಯದ ವಿರುದ್ಧ ಕಾರ್ಮಿಕನ ಏಕಾಂಗಿ ಹೋರಾಟ!

ಸಿಂಜೆಂಟಾ ಕಂಪನಿ ಅನ್ಯಾಯದ ವಿರುದ್ಧ ಕಾರ್ಮಿಕನ ಏಕಾಂಗಿ ಹೋರಾಟ!

Ad
Ad



ಮುದ್ದೇಬಿಹಾಳ : ತಾಲ್ಲೂಕಿನ ಬಳಬಟ್ಟಿ ನಿವಾಸಿ ಬುಡ್ಡೇಸಾಬ ಚಪ್ಪರಬಂದ ಸಿಂಜೆಂಟಾ ಕಂಪನಿಯ (Syngenta Company) ಮೋಸದ ವಿರುದ್ಧ ಕಾರ್ಮಿಕ ಇಲಾಖೆಯ ಆಯುಕ್ತರಿಗೆ, ಇಲ್ಲಿನ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Ad
Ad

ಈ ಕುರಿತು ಸಲ್ಲಿಸಿದ ಮನವಿಯಲ್ಲಿ ಮೂರು ವರ್ಷಗಳ ಕಾಲ “ಸಿಂಜೆಂಟಾ” (Syngenta Company) ಎಂಬ ಖಾಸಗಿ ಕಂಪನಿಯಲ್ಲಿ ಎಂ.ಡಿ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಕರ್ನಾಟಕದ ಕಂಪನಿಯ ನನ್ನ ಮೇಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನನ್ನು ದಿನಾಂಕ 06-03-2024 ರಂದು ನನಗೆ ನೋಟಿಸ್ ಪಿರಿಯಡ್ ನೀಡದೇ, ಕಾರ್ಮಿಕ ಕಾಯ್ದೆ ನಿಯಮಗಳನ್ನು ಅನುಸರಿಸದೇ ಹಾಗೂ ನನ್ನಿಂದ ರಾಜೀನಾಮೆ ಪಡೆಯದೇ ಏಕಾಏಕಿ ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Join Our Telegram: https://t.me/dcgkannada

ಈ ಕ್ರಮವನ್ನು ಪ್ರಶ್ನಿಸಿ ವಿಜಯಪುರ ಜಿಲ್ಲಾ ಕಾರ್ಮಿಕ ಸಂಧಾನಾಧಿಕಾರಿಗಳಿಗೆ ದೂರನ್ನು ನೀಡಿದ್ದೇನೆ.ನನ್ನ ದೂರಿನನ್ವಯ ಸಂಧಾನಾಧಿಕಾರಿಗಳು ಕಂಪನಿಯವರಿಗೆ ಮೊದಲನೇ ನೋಟಿಸ್‌ನ್ನು 27-3-2024 ರಂದು ಜಾರಿ ಮಾಡಿ ಅದರಲ್ಲಿ ದಿನಾಂಕ 15-4-2024 ರಂದು ಸಂಧಾನ ಸಭೆ ನಿಗದಿ ಮಾಡಿದ್ದರು.ಅದು ಕಂಪನಿಯ ಅಧಿಕಾರಿಗಳು ಹಾಗೂ ಅರ್ಜಿದಾರನಾದ ನನ್ನ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದದ್ದರಿಂದ ಅದು ವಿಫಲವಾಯಿತು.

ಇದನ್ನೂ ಓದಿ: ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ! ಮೊಟ್ಟೆ ಕೊಟ್ಟು ಕಿತ್ತುಕೊಂಡವರನ್ನು ಮನೆಗೆ ಕಳುಹಿಸಿದ ಸಚಿವೆ ಹೆಬ್ಬಾಳ್ಕರ್ ಈಗ ಏನು ಮಾಡ್ತಾರೆ? (ವಿಡಿಯೋ ನೋಡಿ)

ನಂತರ ಎರಡನೇ ಸಭೆಯನ್ನು 24-5-2024 ರಂದು ಮತ್ತೆ ಸಂಧಾನಕ್ಕೆ ಕರೆಯಲಾಯಿತು.ಅಂದಿನ ದಿನ ಕಂಪನಿಯವರು ಕೆಲಸ ಮತ್ತು ಬಾಕಿ ಇರುವ ಎರಡೂವರೆ ತಿಂಗಳ ಸಂಬಳ ನೀಡುತ್ತೇವೆ. ಆದರೆ ಪ್ರೋತ್ಸಾಹಕ ಹಣ(ಇನ್ಸೆಂಟಿವ್) ನೀಡುವುದಿಲ್ಲ ಎಂದು ವಾದ ಮಾಡಿದರು. ಎಲ್ಲ ವಿಚಾರಗಳನ್ನು ಗಮನಿಸಿದ ಮಾನ್ಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು,ಸಭೆಯಲ್ಲಿ ನಡೆದ ವಿಚಾರಗಳ ಬಗ್ಗೆ ಪತ್ರವೊಂದನ್ನು ಬರೆದರು.ಅದಕ್ಕೆ ಸಿಂಜೆಂಟಾ ಕಂಪನಿಯ ಅಧಿಕಾರಿಗಳು ಸಹಿ ಮಾಡಲು ಧಿಕ್ಕರಿಸಿ ವಾಪಸ್ ಹೋದರು.

ಮತ್ತೆ ಸಂಧಾನ ಅಧಿಕಾರಿಗಳು 24-6-2024 ರಂದು ಆ ಸಂಧಾನ ಸಭೆಗೆ ಕಂಪನಿಯವರು ಬಾರದೇ ಮ್ಯಾನಪವರ್ ಎಂಬ ಏಜೆನ್ಸಿಯವರನ್ನು ಕಳುಹಿಸಿ ನಿಮಗೆ ಕೆಲಸ ನೀಡಲಾಗುವುದಿಲ್ಲ.ನಿಮ್ಮ ಬಾಕಿ ಇರುವ ಪ್ರೋತ್ಸಾಹಕ ಹಣವನ್ನು ಮಾತ್ರ ನೀಡುತ್ತೇವೆ ಎಂದು ಸೂಚಿಸಿದರು.

ಆಗ ನನ್ನ ಸಂಬಳವನ್ನಾದರೂ ಇವರಿಂದ ಪಡೆದುಕೊಂಡು ಇವರು ತಪ್ಪು ಮಾಡಿದ್ದನ್ನು ಸಾಬೀತುಪಡಿಸುವಲ್ಲಿ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಅದರಂತೆ ದೀರ್ಘ ಕಾಲದ ನಂತರ ಅಂದರೆ 30-6-2024 ರಂದು ಮ್ಯಾನಪವರ್ ಏಜೆನ್ಸಿಯವರು ಬಂದು ಮೂರುವರೆ ತಿಂಗಳ ಸಂಬಳ ಮತ್ತು ನನ್ನ ಪ್ರೋತ್ಸಾಹಕ ಹಣವನ್ನು ಚೆಕ್(ಚೆಕ್ ನಂ.664898) ರೂಪದಲ್ಲಿ ನೀಡಿದ್ದಾರೆ.

ಈ ಪ್ರಕ್ರಿಯೆಯನ್ನು ವಿಜಯಪುರ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕೇವಲ ನನ್ನ ಸಂಬಳ ಮತ್ತು ಪ್ರೋತ್ಸಾಹಕ ಹಣವನ್ನು ಕೊಡಿಸುವ ಪ್ರಕ್ರಿಯೆ ಎಂದು ಪರಿಗಣಿಸಿ ಕಂಪನಿಯವರಿಗೆ ನನ್ನ ಕೆಲಸವನ್ನು ಮರಳಿ ನೀಡಲು ಸೂಚಿಸಬೇಕು. ಏಕಾಏಕಿ ಕೆಲಸದಿಂದ ತಗೆದು ಹಾಕಿದ್ದರಿಂದ ನನ್ನ ಕುಟುಂಬದ ಉಪಜೀವನ ನಡೆಸಲು ಕಷ್ಟಕರವಾಗಿತ್ತು. ಸದರಿ ವಿಷಯವಾಗಿ ಕಂಪನಿಯಿಂದ ನನಗಾದ ಅನ್ಯಾಯವನ್ನು ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು, ಉಸ್ತುವಾರಿ ಸಚಿವರು,ಕಾರ್ಮಿಕ ಇಲಾಖೆಯ ಆಯುಕ್ತರು ಇವರೆಲ್ಲರ ಗಮನಕ್ಕೆ ತಂದಿರುತ್ತೇನೆ. ಮಾನ್ಯ ದಯಾಳುಗಳಾದ ತಾವು ನನಗಾದ ಈ ಅನ್ಯಾಯವನ್ನು ಸರಿಪಡಿಸಿ ಕೆಲಸ ಕೊಡಿಸಬೇಕು ಇಲ್ಲದಿದ್ದಲ್ಲಿ ಸಿಂಜೆಂಟಾ ಕಂಪನಿಯ ಅಧಿಕಾರಿಗಳ ಏಕಚಕ್ರಾಧಿಪತ್ಯದ ಆಡಳಿತದ ವಿರುದ್ಧ ಮಾನ್ಯ ಘನ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಪಡೆದುಕೊಳ್ಳಲು ಅಧಿಕೃತವಾಗಿ ಇಲಾಖೆಯಿಂದ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿಕೊಳ್ಳುವುದಾಗಿ ತಹಶೀಲ್ದಾರ್‌ಗೆ ಶನಿವಾರ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500