Murder Case: ಪೆಟ್ರೋಲ್ ಎರಚಿ ಯುವ ಉದ್ಯಮಿ ಕೊಲೆ ಪ್ರಕರಣ.. 2ನೇ ಆರೋಪಿ ಬಂಧಿಸಿ ಸ್ಥಳ ಮಹಜರು ಮಾಡಿದ ಖಾಕಿ‌ ಪಡೆ

Murder Case: ಪೆಟ್ರೋಲ್ ಎರಚಿ ಯುವ ಉದ್ಯಮಿ ಕೊಲೆ ಪ್ರಕರಣ.. 2ನೇ ಆರೋಪಿ ಬಂಧಿಸಿ ಸ್ಥಳ ಮಹಜರು ಮಾಡಿದ ಖಾಕಿ‌ ಪಡೆ

Ad
Ad

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮದ ಯುವ ಉದ್ಯಮಿ ರಾಹುಲ್ ಬಿರಾದಾರ ಪ್ರೇಮ ಪ್ರಕರಣದಲ್ಲಿ (Murder Case) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

Ad
Ad

ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಹಾಗೂ ಆರೋಪಿಯಾಗಿದ್ದ ಯುವತಿ ತಂದೆ ಪರಶುರಾಮ ಮದರಿ ಅವರ ಜೀಪ ಚಾಲಕ ನೀಲಕಂಠ ಹರನಾಳನನ್ನು ಶನಿವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Join Our Telegram: https://t.me/dcgkannada

ಘಟನೆಯ ಕುರಿತು ಮಾಹಿತಿ ನೀಡಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮೇ 26 ರಂದು ನಡೆದಿದ್ದ ಢವಳಗಿಯ ರಾಹುಲ್ ಬಿರಾದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿ ಜೈಲಿನಲ್ಲಿದ್ದು ಜೀಪ ಚಾಲಕ ನೀಲಕಂಠ ಹರನಾಳನನ್ನು ಬಂಧಿಸಿದ್ದೇವೆ.

ಪ್ರಕರಣದಲ್ಲಿ (Murder Case) ಯುವತಿ ಐಶ್ವರ್ಯಾ ಶಿಕ್ಷಣ ಮುಂದುವರೆಸಿರುವ ಕಾರಣ ಆಕೆಗೆ ಜಾಮೀನು ಸಿಕ್ಕಿದ್ದು ಇನ್ನುಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಸದ್ಯಕ್ಕೆ ಬಂಧಿತನಾದ ನೀಲಕಂಠನಿಂದ ಘಟನೆಯ ದಿನ ಏನೇನು ನಡೆದಿದೆ ಎಂಬುದನ್ನು ಸ್ಥಳ ಮಹಜರು ನಡೆಸಿದ್ದು ವಿಚಾರಣೆ ಮುಂದುವರೆಸಿದ್ದೇವೆ. ಘಟನೆಯ ದಿನ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Bidarakundi RMSA school: ಆ.13,14 ರಂದು ಬಿದರಕುಂದಿ ಶಾಲೆಯಲ್ಲಿ ಬಾಕಿ ಸೀಟು ಪ್ರವೇಶಕ್ಕೆ ಕೌನ್ಸಲಿಂಗ್

ನನ್ನ ಮಗನನ್ನು ಕಳೆದುಕೊಂಡು ಮೂರು ತಿಂಗಳು ಗತಿಸಿವೆ.ಆದರೆ ಕೆಲವರು ಪ್ರಕರಣದಲ್ಲಿ ನಾವು ಹಿಂದೆ ಸರಿದಿದ್ದೇವೆ ಎಂಬ ವದಂತಿ ಹರಡಿಸಿದ್ದರು. ಆದರೆ ಪೊಲೀಸರ ಮೇಲೆ ನಮಗೆ ನಂಬಿಕೆ ಇದ್ದು ಅವರು ತನಿಖೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಈ (Murder Case) ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಮಗೆ ಸಮಾಧಾನವಿಲ್ಲ. ನಾವು ಯಾರೊಂದಿಗೂ ರಾಜಿ ಆಗಿಲ್ಲ ಎಂದು ರಾಹುಲ್ ಬಿರಾದಾರನ ತಂದೆ ರಾಮನಗೌಡ ಬಿರಾದಾರ ತಿಳಿಸಿದ್ದಾರೆ.

Latest News

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ರಾಯಚೂರು: ಕನ್ನಡಿಗರಾದ ನಾವು ಕನ್ನಡ ಸಾಹಿತ್ಯ ಒಲವು ಬೆಳೆಸಿಕೊಂಡು ಭಾಷಾ ಪ್ರೇಮವನ್ನು ಮೆರೆಯುವಂತಾಗಬೇಕು ಎಂದು

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಬಳಿ ನಡೆದಿದೆ. ಆಂಜನೇಯ (35) ಪತ್ನಿ ಗಂಗಮ್ಮ (28) & ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುರಪುರ ಠಾಣೆಯಲ್ಲಿ ಈ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸೀತಾರಾಮನ್. ಕಿಸಾನ್ ಕ್ರೆಡಿಟ್ ಕಾರ್ಯ ಸಾಲದ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್? ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಭಾರತ ಸರ್ಕಾರವು ರೈತರಿಗೆ ಕೃಷಿ ಮತ್ತು