
ಬೆಂಗಳೂರು: ಮೂಡಾ ಹಗರಣದಲ್ಲಿ (MUDA scam) ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ಧದ ಪ್ರಾಸಿಕ್ಯೂಷನ್ (Prosecution) ಅನುಮತಿ ವಿಚಾರ ಕೋರ್ಟ್‌ನಲ್ಲಿದ್ದು, ಇತ್ತ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಜೋರಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೋಳಿ (satish jarakiholi) ಮುಂದಿನ ಸಿಎಂ ಎಂಬ ಅಭಿಯಾನ ಶುರುವಾಗಿದೆ. ಇತ್ತೀಚೆಗೆ ಸತೀಶ್ ಜಾರಕಿಹೋಳಿಯಿಂದ ರಾಹುಲ್ ಗಾಂಧಿ (rahul gandhi) ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ, ಸತೀಶ್ ಜಾರಕಿಹೋಳಿ ಮುಂದಿನ ಸಿಎಂ ಅನ್ನೋ ಅಭಿಯಾನ ಶುರುವಾಗಿದೆ.
ಒಂದು ವೇಳೆ ಸಿಎಂ ಹುದ್ದೆ ಖಾಲಿಯಾದ್ರೆ ಸತೀಶ್ ಜಾರಕಿಹೋಳಿ ಸಿಎಂ ಆಗಲಿ ಎಂದು ರಜನೀಶ್ ಆಚಾರ್ಯ ಫೌಂಡೇಶನ್ (Rajaneesh acharya foundation) ದಿನಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Murder: ಹೆಂಡತಿ ಎದುರೇ ಗಂಡನನ್ನು ಕೊಚ್ಚಿ ಕೊಚ್ಚಿ ಕೊಂದ್ರು, ಪತ್ನಿಯ ಕೈವಾಡದ ಶಂಕೆ!
ಇನ್ನು, ಈ ಜಾಹೀರಾತಿನಲ್ಲಿ ಬೆಳಗಾವಿ ಜಿಲ್ಲೆಗೆ ಮೊದಲ ಸಿಎಂ ಸ್ಥಾನ ಸತೀಶ್ ಜಾರಕಿಹೋಳಿಗೆ ಸಿಗಲಿ ಎಂದು ಶುಭ ಹಾರೈಸಿದ್ದು, ಜಾಹಿರಾತಿನಲ್ಲಿ ನರೇಂದ್ರ ಮೋದಿ (narendra modi), ರಮೇಶ್ ಜಾರಕಿಹೋಳಿ (Ramesh jarakiholi) ಪೋಟೋ ಜೊತೆ ಸತೀಶ ಜಾರಕಿಹೋಳಿ ಪೋಟೋವೂ ಪ್ರಕಟವಾಗಿದೆ.