ಮುದ್ದೇಬಿಹಾಳ : ದೇಶದ ಗಡಿ ಕಾಯುವ ಸೇವೆಯನ್ನು ಆಯ್ಕೆ ಮಾಡಿಕೊಂಡ ಆಯೇಷಾ ವಾಲೀಕಾರ, ಕಾಶೀಬಾಯಿ ಚಲವಾದಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು.
ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಗಡಿ ಕಾಯುವ ಕೆಲಸ ಸಾಮಾನ್ಯವಾದದ್ದಲ್ಲ.ಅದಕ್ಕೆ ಸಾಕಷ್ಟು ತಯಾರಿ ಬೇಕಾಗುತ್ತದೆ.ಬಡತನದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ ನಮ್ಮ ತಾಲ್ಲೂಕಿನ ಇಬ್ಬರು ಯುವತಿಯರಿಗೆ ಅಭಿನಂದಿಸುವುದಾಗಿ ಹೇಳಿದರು.
ಬಿಎಸ್‌ಎಫ್‌ಗೆ ಆಯ್ಕೆಯಾದ ಆಯೇಷಾ ವಾಲೀಕಾರ ಹಾಗೂ ಕಾಶೀಬಾಯಿ ಚಲವಾದಿ ಮಾತನಾಡಿ, ದೇಶದ ಸೇವೆ ಸಲ್ಲಿಸಲು ಬಂದ ಅವಕಾಶ ನಾವು ಸದುಪಯೋಗಪಡಿಸಿಕೊಳ್ಳುತ್ತೇವೆ.ಹೆತ್ತವರಿಗೆ,ನಮ್ಮನ್ನು ಹೊತ್ತ ಭೂಮಿಗೆ ಈ ದೇಹ ಅರ್ಪಣೆ ಎಂಬ ಭಾವನೆಯನ್ನು ಇಟ್ಟುಕೊಂಡು ದೇಶದ ಸೇವೆಗೆ ತೆರಳುತ್ತಿದ್ದೇವೆ ಎಂದರು.
ಸಿಆರ್‌ಪಿಎಫಗೆ ಆಯ್ಕೆಯಾದ ಶಿವಾನಂದ ಮಾದರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿ ಬಸಮ್ಮ ಹೋಲ್ಡರ್,ಶಿಕ್ಷಕರಾದ ಎಚ್.ಆರ್.ಬಾಗಲಕೋಟ ನಿರೂಪಿಸಿದರು.ಶಿಕ್ಷಕ ದಶರಥ ಸ್ವಾಗತಿಸಿದರು.ಬಿರಾದಾರ ಶಿಕ್ಷಕರು ವಂದಿಸಿದರು.







