ಬೆಂಗಳೂರು: ಸರಕಾರದ ರಾಜಭವನ ಹಾಗೂ ನಡುವಿನ ತಿಕ್ಕಾಟದ ಮುಂದುವರಿದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಐದು ವಿಧೇಯಕವನ್ನು ವಾಪಸು ಕಳುಹಿಸಿದ್ದ ರಾಜ್ಯಪಾಲರು, ಇದೀಗ ಮೂರು ವಿಧೇಯಕಗಳಿಗೆ ಸಹಿಹಾಕಿದ್ದು, ಎರಡು ವಿಧೇಯಕವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.
ರಾಜ್ಯ ಸರಕಾರ ಒಟ್ಟು 11 ಮಸೂದೆಗಳಿಗೆ ಅಂಕಿತ ಕೋರಿ ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ, ಎಲ್ಲವನ್ನೂ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಸರಕಾರಕ್ಕೆ ವಾಪಸ್ ಕಳುಹಿಸಿದ್ದರು. ಈ ಪೈಕಿ ಐದು ಮಸೂದೆಗಳನ್ನು ಮರುಪರಿಶೀಲಿಸಿ, ಹೆಚ್ಚಿನ ವಿವರಣೆಗಳನ್ನು ಲಗತ್ತಿಸಿ ಮತ್ತೆ ರಾಜಭವನಕ್ಕೆ ರವಾನಿಸಲಾಗಿತ್ತು.
ಇದೀಗ ಈ ಪೈಕಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023, ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ-2024, ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024 ಮಸೂದೆಗಳಿಗೆ ರಾಜ್ಯಪಾಲರು ಅಸ್ತು ಎಂದಿದ್ದಾರೆ.
ಇದನ್ನೂ ಓದಿ: Viral video: ತಾಯಿ ರಕ್ಷಿಸಲು ಆಟೋ ರಿಕ್ಷಾವನ್ನೇ ಎತ್ತಿದ ಕಡಲತೀರದ ಧೀರ ಬಾಲಕಿ! (ವಿಡಿಯೋ ನೋಡಿ)
ಇನ್ನುಳಿದಂತೆ, ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ -2024 ಅನ್ನು ಮುಂಬರುವ ಅಧಿವೇಶನದ ವಿಧಾನ ಮಂಡಲದ ಸಂದರ್ಭದಲ್ಲಿ ಹಿಂಪಡೆಯಲು ಮತ್ತು ವಿಧಾನಸಭೆಯ ವಿಧೇಯಕ 27ಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರನ್ನು ಕೋರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.