Three out of the four seats held in the election went to the BJP

ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ಹುನಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLD) ನಿರ್ದೇಶಕ ಮಂಡಳಿಯ 14 ಸ್ಥಾನಗಳ ಪೈಕಿ ಹತ್ತು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ನಾಲ್ಕು ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

Join Our Telegram: https://t.me/dcgkannada

ಶನಿವಾರ ಪಟ್ಟಣದ ಶ್ರೀ ವಿಜಯಮಹಾಂತೇಶ ಪ್ರೌಢ ಶಾಲೆಯಲ್ಲಿ PLD ಬ್ಯಾಂಕ್‌ನ ನಾಲ್ಕು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ವೀರೇಶ ಸಂಗನಗೌಡ ಗೌಡರ (ಜಂಬಲದಿನ್ನಿ ಸಾಮಾನ್ಯ), ರುದ್ರಪ್ಪ ವೀರಪ್ಪ ಶೀಲವಂತರ (ಹಿರೇಶಿಂಗನಗುತ್ತಿ ಸಾಮಾನ್ಯ), ಲೀಲಾವತಿ ಸಿದ್ದನಗೌಡ ಪಾಟೀಲ(ಸೂಳೇಭಾವಿ ಸಾಮಾನ್ಯ ಮಹಿಳೆ) ಬಿಜೆಪಿ ಬೆಂಬಲಿತರು, ಇನ್ನು ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ (ನಂದವಾಡಗಿ ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
 
ಅವಿರೋಧವಾಗಿ ಆಯ್ಕೆಯಾದವರ ವಿವರ:

ಮಹಾಲಿಂಗಪ್ಪ ರಾಚಪ್ಪ ಕಾಶಪ್ಪನವರ (ಸಾಮಾನ್ಯ, ಧನ್ನೂರ), ಶಿವಕುಮಾರಯ್ಯ ಬಸಯ್ಯ ಬಿನ್ನೇದ(ಸಾಮಾನ್ಯ, ನಾಗೂರ), ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ (ಸಾಮಾನ್ಯ, ಚಿತ್ತರಗಿ), ಪ್ರಭಾಕರ ಸಿದ್ರಾಮಪ್ಪ ನಾಗರಾಳ (ಸಾಮಾನ್ಯ, ಅಮೀನಗಡ), ಸುವರ್ಣಾ ಗಂಗಪ್ಪ ಇಲಕಲ್ಲ (ಮಹಿಳಾ, ಹುನಗುಂದ), ನೂರಪ್ಪ ಮೊತಪ್ಪ ಲಮಾಣಿ(ಪರಿಶಿಷ್ಟ ಜಾತಿ, ಇಳಕಲ್), ಸೋಮೇಶ್ವರ ಹುಲ್ಲಪ್ಪ ಬಲಕುಂದಿ (ಪರಿಶಿಷ್ಟ ಪಂಗಡ, ಗುಡೂರು ಎಸ್.ಸಿ), ಖಾಜಾಸಾಬ್ ಮಹಮದ್‌ಸಾಬ್ ಮುದುಗಲ್ (ಹಿಂದುಳಿದ ವರ್ಗ ಅ,ಕರಡಿ), ಬಾಲನಗೌಡ ಹನಮಂತಗೌಡ ಪಾಟೀಲ (ಹಿಂದುಳಿದ ವರ್ಗ ಅ,ಕೂಡಲಸಂಗಮ), ಶೇಖರಪ್ಪ ಗುರಪ್ಪ ಬಾದ ವಾಡಗಿ ( ಬಿನ್‌ಸಾಲಗಾರ) ಆಯ್ಕೆಯಾಗಿದ್ದಾರೆ.

ಒಟ್ಟಾರೆಯಾಗಿ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದರೂ ಕೂಡಾ ನಂದವಾಡಗಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೊತೆಗೆ ಹತ್ತು ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದರಿಂದ ಪಿಎಲ್‌ಡಿ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಬೆಂಬಲಿಗರ ಪಾಲಾಗುವುದು ನಿಶ್ಚಿತವಾಗಿದೆ.

ಬಿಜೆಪಿ ಸಂಭ್ರಮಾಚರಣೆ:

ನಾಲ್ಕು ಸ್ಥಾನದಲ್ಲಿ ಮೂವರು ಬಿಜೆಪಿ ಬೆಂಬಲಿತರು, ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸುತ್ತಿದಂತೆ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಗುಲಾಲ ಎರಚಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಎಲ್ಲ ಚುನಾವಣೆಗೆ ದಿಕ್ಸೂಚಿ?

PLD ಬ್ಯಾಂಕ್ 4 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಲ್ವರಲ್ಲಿ ಮೂವರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿರುವುದು. ಬಿಜೆಪಿಯ ಪಾಲಿಗೆ ಈ ಗೆಲುವು ಮುಂದೆ ನಡೆಯುವ ಎಲ್ಲ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಒಂದು ವೇಳೆ ಪಿಎಲ್‌ಡಿ ಬ್ಯಾಂಕಿನ 14 ಸ್ಥಾನಕ್ಕೂ ಚುನಾವಣೆ ನಡೆದಿದ್ದರೇ ಖಂಡಿತವಾಗಲೂ 10 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸುತ್ತಿದ್ದರು ಎಂದು ಬಿಜೆಪಿ ಮುಖಂಡ ರಾಜಕುಮಾರ ಬಾದವಾಡಗಿ ಹೇಳಿದರು.

‘ನಾಚಿಗೇಡಿನ ನಾಯಕತ್ವದ ಲಕ್ಷಣ’

ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ಮತದಾರ ಯಾದಿಯನ್ನು ತನ್ನ ಮೂಗಿನ ನೇರಕ್ಕೆ ತಯಾರಿಸಿ ಮತ್ತೇ ಕೋರ್ಟ್ನಲ್ಲಿ ಹೆಚ್ಚುವರಿ ಮತದಾರರನ್ನು ಒಪ್ಪಿಗೆ ತರೋವುದು ನಾಚಿಗೇಡಿನ ನಾಯಕತ್ವದ ಲಕ್ಷಣವಾಗಿದೆ. ಆದರೂ ಸಹಿತ ಸದ್ಯ ನಾಲ್ಕು ಸ್ಥಾನಗಳಲ್ಲಿ ಮೂವರು ಬಿಜೆಪಿ ಬೆಂಬಲಿತರು ಗೆದ್ದಿರೋದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಜನರ ಒಲವು ನಮ್ಮ ಪರವಾಗಿದೆ ಎನ್ನುವುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಈಗ ಮೂವರು ಗೆದ್ದಿದ್ದಾರೆ. ಹಾಗೇನಾದರೂ ಮರಳಿ ಎಲ್ಲರನ್ನು ರಾಜೀನಾಮೆ ಕೊಡಿಸಿ ಚುನಾವಣೆ ಎದರಿಸಲಿ ನಾವು 10 ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ಪರತಗೌಡ ಪಾಟೀಲ ಹೇಳಿದರು.

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ