Tributes to the martyrs who were killed by terrorists in Kashmir

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮೃತರಿಗೆ ಶ್ರದ್ಧಾಂಜಲಿ

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮೃತರಿಗೆ ಶ್ರದ್ಧಾಂಜಲಿ

ವರದಿಗಾರ : ಶಿವು ರಾಠೋಡ

ಹುಣಸಗಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಭಾರತದ ಪ್ರತಿಯೊಬ್ಬ ಪ್ರಜೆಗಳು ಖಂಡಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.

ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಜನರುಜಮ್ಮು ಕಾಶ್ಮೀರ ದಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಭೆಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ಈ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸುತ್ತೇವೆ. ಜಾತಿ, ಊರು ಯಾವುದನ್ನು ಕೇಳದೆ ಧರ್ಮ ಹಿಂದು ಎಂದಿದ್ದಕೆ ಗುಂಡು ಹಾರಿಸಿ ಕೊಲ್ಲುವ ಮನಸ್ಥಿತಿಯ ಉಗ್ರರನ್ನು ಸದೆಬಡಿಯಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆoಬುದು ಸಾರ್ವಕಾಲಿಕ ಸತ್ಯ, ಅಲ್ಲಿನ ಪ್ರತ್ಯೇಕತವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈ ಘಟನೆಯಲ್ಲಿ ಬಾಗಿಯಾದ ಉಗ್ರರನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಹಾಗೂ ಆನಂದ ಬಾರಿಗಿಡದ ಮಾತನಾಡಿ, ಉಗ್ರರ ಸಂಹಾರಕ್ಕಾಗಿ ಪಕ್ಷಾತೀತವಾಗಿ ಒಗ್ಗೂಡಬೇಕು. ಉಗ್ರರನ್ನ ಮಟ್ಟಹಾಕಲು ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹಿಂದುಗಳನ್ನೇ ಗುರಿಯಾಗಿಟ್ಟು ದಾಳಿ ಮಾಡಿರುವುದು ಖಂಡನೀಯ. ಉಗ್ರರನ್ನ ಗುಂಡಿಕ್ಕಿಕೊಲ್ಲಲು ನಮ್ಮ ಸೈನಿಕರಿಗೆ ಭಗವಂತ ಶಕ್ತಿ ನೀಡಲಿ. ಈಗಾಗಲೇ ಭಾರತೀಯ ಯೋಧರು ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ. ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸುತ್ತದೆ. ಎಲ್ಲರನ್ನ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕ್ರಮ ಕೈಗೊಳ್ಳಲಿ ಎಂದರು.

ಡಾ. ಯುಸುಫ್ ಡೆಕ್ಕನ್ ಮಾತನಾಡಿ, ಉಗ್ರರಿಗೆ ಸಹಕಾರ ನೀಡುತ್ತಿರುವ ಸ್ಥಳೀಯ ದೇಶದ್ರೋಹಿಗಳನ್ನು ಮೊದಲು ಮೊಟ್ಟಹಾಕಬೇಕಾಗಿದೆ. ಉಗ್ರರಿಗೆ ಕಠಿಣವಾದ ಶಿಕ್ಷೆ ನಮ್ಮ ಸೈನಿಕರಿಂದ ಆಗಲಿ ಎಂದು ಹೇಳಿದರು.

ನಂತರ ಘಟನೆಯಲ್ಲಿ ಮೃತಪಟ್ಟವರಿಗೆ ಒಂದು ನಿಮಿಷದ ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಂದುಲಾಲ ಠವಾಣಿ, ಬಸವರಾಜ ಸಜ್ಜನ್, ಸಂಗಮೇಶ ಸಜ್ಜನ್, ಮಲ್ಲಯ್ಯ ನಂದಿಕೋಲ, ಗುಂಡು ಅಂಗಡಿ, ರೇಣುಕಾ ಪೌಜದಾರ, ಲಕ್ಷ್ಮಿ ಮೇದಾ, ಪಾರ್ವತಿ ಯಾಳವಾರ, ಆನಂದ ಬಾರಿಗಿಡದ, ವೆಂಕಟೇಶ ಅರಳಿಗಿಡದ, ರಮೇಶ ಮಿರಜಕರ್, ಮಹೇಶ ಸ್ಥಾವರಮಠ, ಶರಣಗೌಡ ಗೆಣ್ಣೂರು, ದೇವು ಬೈಚಬಾಳ, ರಮೇಶ ವಾಲಿ, ಸೇರಿದಂತೆ ಪಟ್ಟಣದ ಮುಖಂಡರು ಯುವಕರು ಪಾಲ್ಗೊಂಡಿದ್ದರು.

Latest News

6.83 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ:                                                                                                                                                           ಸ್ಥಿತಿವಂತರು, ಗ್ಯಾರಂಟಿ ಟೀಕಿಸುವವರು ಯೋಜನೆ ಬಿಟ್ಟುಕೊಡಿ – ನಾಡಗೌಡ

6.83 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ: ಸ್ಥಿತಿವಂತರು, ಗ್ಯಾರಂಟಿ ಟೀಕಿಸುವವರು ಯೋಜನೆ ಬಿಟ್ಟುಕೊಡಿ – ನಾಡಗೌಡ

ಮುದ್ದೇಬಿಹಾಳ : ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 50 ಸಾವಿರ ಕೋಟಿ ರೂ.ವೆಚ್ಚ ಮಾಡುತ್ತಿದೆ.ಗ್ಯಾರಂಟಿ

ಈ ಸಲ ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ-ಅಪ್ಪಾಜಿ ನಾಡಗೌಡ

ಈ ಸಲ ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ-ಅಪ್ಪಾಜಿ ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೆ ಇಲ್ಲ. ಅದು ಹೈಕಮಾಂಡ್ ನಿರ್ಧಾರ.ಈ ವಿಷಯದ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು

ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ

ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ

ಮಾರನಾಳ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳದಿಂದ ಶ್ರೀ ಘತ್ತರಗಿ ಭಾಗ್ಯವಂತಿಯವರೆಗೆ ಪಾದಯಾತ್ರೆಯನ್ನು ಗ್ರಾಮದೇವತೆ ಶ್ರೀ ಗದ್ಯಮದೇವಿ ದೇವಸ್ಥಾನದಿಂದ ಪ್ರಾರಂಭಿಸಿದರು. ಪ್ರತಿ ವರ್ಷದಂತೆ ಈ ವರ್ಷ ಸೇರಿ 23ನೇ ವರ್ಷ ಪಾದಯಾತ್ರೆ ಇದಾಗಿದ್ದು ಈ ಪಾದಯಾತ್ರೆಯಲ್ಲಿ ಮಾರನಾಳ ಊರಿನ ಗುರು ಹಿರಿಯರು ಯುವಕರು ಹಾಗೂ ಮಹಿಳೆಯರು ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯು ಸರಿ-ಸುಮಾರು 120 ಕಿಲೋ ಮೀಟರ್ ನಷ್ಟು ದೂರವಿದ್ಧಿ ಆದರೂ ಸಹಾ ಮಳೆ, ಗಾಳಿ, ಚಳ್ಳಿ,

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಪ್ರದೀಪನ ಕಾರ್ಯಕ್ಕೆ ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ ಚಾಲನೆ ನೀಡಿದರು. ಬಾಯ್ಲರ್ ಪ್ರದೀಪನಕ್ಕೂ ಮುನ್ನ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕಾರ್ಖಾನೆಯ ನಿರ್ದೇಶಕರಾದ ಎಚ್.ಎಲ್.ಪಾಟೀಲ್,ರಾಹುಲಗೌಡ ಪಾಟೀಲ, ಶ್ರೀನಿವಾಸ ಅರಕೇರಿ,ಅಧಿಕ ಪಾಟೀಲ, ಪ್ರಜ್ವಲ ಪಾಟೀಲ,ನಾಲತವಾಡ ಪ.ಪಂ ಸದಸ್ಯ ಪೃಥ್ವಿ ನಾಡಗೌಡ, ಅಪ್ಪು ನಾಡಗೌಡ, ಮಲ್ಲಿಕಾರ್ಜುನ ನಾಡಗೌಡ ಇದ್ದರು.