ಕೊಪ್ಪಳ: ಟಿಬಿ ಡ್ಯಾಮ್ (Tungabhadra dam) ಗೆ ಎಲ್ಲಾ 5 ಸ್ವಾಪ್ ಲಾಗ್ ಗೇಟ್ ಗಳನ್ನ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದ್ದು, ಸತತ ಮೂರು ದಿನಗಳ ಪರಿಶ್ರಮದ ಫಲವಾಗಿ ಶನಿವಾರ ಸಂಜೆ ಡ್ಯಾಮ್ ನ 19ನೇ ಗೇಟ್ ಗೆ ಸ್ಟಾಪ್ ಲಾಗ್ ಗೇಟ್ ಕೂರಿಸಲಾಗಿದೆ.
ಈ ಮೂಲಕ ಡ್ಯಾಂ ನಿಂದ ಹರಿದುಹೋಗುತ್ತಿದ್ದ ಅಪಾರ ಪ್ರಮಾಣದ ನೀಗವ ಸಂರಕ್ಷಿಸುವಲ್ಲಿ ಕನ್ನಯ್ಯ ನಾಯ್ಡು ಮತ್ತು ತಂಡ ಯಶಸ್ವಿಯಾಗಿದೆ.
Join Our Telegram: https://t.me/dcgkannada
ಟಿಬಿ ಡ್ಯಾಮ್ (Tungabhadra dam) ನ ಗೇಟ್ ನಂಬರ್ 19 ಮುರಿದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಆತಂಕ ಮನೆ ಮಾಡಿತ್ತು. ಗೇಟ್ ರಿಪೇರಿ ಕಾರ್ಯ ಮಾಡಲು ಜಲಾಶಯದ ಅರ್ಧದಷ್ಟು ನೀರನ್ನ ಖಾಲಿ ಮಾಡಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ಸುಮಾರು 90 ಟಿಎಂಸಿ ನೀರನ್ನು ಉಳಿಸಿಕೊಳ್ಳುವಲ್ಲಿ ತಜ್ಞರ ತಂಡ ಸಕ್ಸಸ್ ಆಗಿದೆ.
ಇದನ್ನೂ ಓದಿ: Death News: ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ದುರ್ಮರಣ..! (ವಿಡಿಯೋ ನೋಡಿ)
ಭಾರತದಲ್ಲಿಯೇ ಈ ರೀತಿಯ ಸ್ಟಾಪ್ ಲಾಲ್ ಗೇಟ್ ಅಳವಡಿಕೆ ವಿಧಾನ ಇದೇ ಮೊದಲ ಪ್ರಯತ್ನವಾಗಿದೆ. ಇದೀಗ ಈ ಕಾರ್ಯಾಚರಣೆ ಯಶಸ್ವಿಯಾಗಿರೋದು ಸರ್ಕಾರ, ರೈತರು ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಖುಷಿ ತಂದಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವಾಗಿದೆ. ಸದ್ಯಕ್ಕೆ ಜಲಾಶಯದ ನೀರನ್ನ ಉಳಿಸಿಕೊಳ್ಳುವಲ್ಲಿ ಉಪಯುಕ್ತವಾಗಿದೆ.
ಮುಂದಿನ ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ ಇಳಿಮುಖವಾದ ನಂತರ ಪೂರ್ಣ ಪ್ರಮಾಣದ ಗೇಟ್ ಅಳವಡಿಕೆ ಕಾಮಗಾರಿ ಕೈಗೊಳ್ಳಬೇಕಿದೆ. ಒಟ್ಟಾರೆ, ನೀರು ಪೋಲಾಗುವುದನ್ನು ತಡೆಯುವಲ್ಲಿ ತಂತ್ರಜ್ಞರ ತಂಡ ಯಶಸ್ಸು ಕಂಡಿದೆ.