Viral Video : ಸಾಮಾಜಿಕ ಮಾಧ್ಯಮಗಳಲ್ಲಿ ವಿಭಿನ್ನ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವು ತಮಾಷೆಯ ಅಥವಾ ಆಶ್ಚರ್ಯಕರವಾದ ಕೆಲವು ವಿಡಿಯೋ ಒಳಗೊಂಡಿರುತ್ತವೆ. ನೀವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿದ್ದರೆ ಅಂತಹ ಅನೇಕ ವೈರಲ್ ವೀಡಿಯೊಗಳನ್ನು ನೋಡಿರುತ್ತಿರಿ.
ಇದೀಗ ಒಂದು Viral Video ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನಂತರ ನಿಮಗೆ ನಗು ತಡೆಯಲು ಸಾಧ್ಯವಾಗುವುದಿಲ್ಲ.
ಸದ್ಯ, Viral Videoದಲ್ಲಿ ಕುಟುಂಬಸ್ಥರೆಲ್ಲಾ ಒಟ್ಟಿಗೆ ಕುಳಿತು ಟಿವಿ ನೋಡುತ್ತಿರುವುದು ಕಂಡು ಬಂದಿದೆ. ಆದರೆ ಟಿವಿಯಲ್ಲಿ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿ ಪ್ಲೇ ಆಗುತ್ತಿಲ್ಲ! ಬದಲಿಗೆ ಹಾಸಿಗೆಯ ಮೇಲೆ ಕುಳಿತಿರುವ ಹುಡುಗಿಯ ಫೋನ್ ಸಂಪರ್ಕಗೊಂಡಿದೆ ಮತ್ತು ಅವಳು ಏನು ಮಾಡುತ್ತಿದ್ದರೂ ಟಿವಿಯಲ್ಲಿ ಗೋಚರಿಸುತ್ತದೆ.
ಆಹುಡುಗಿ ಹಾಸಿಗೆಯ ಮೇಲೆ ಕುಳಿತು ತನ್ನ ಗೆಳೆಯನೊಂದಿಗೆ ಮಾತನಾಡುತ್ತಿರುವುದು ಟಿವಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅದನ್ನು ಕುಟುಂಬ ಸದಸ್ಯರೂ ನೋಡುತ್ತಿದ್ದಾರೆ. ಯಾವಾಗ ಹುಡುಗಿ ಟಿವಿ ಕಡೆ ನೋಡುತ್ತಾಳೋ ಅವಳಿಗೂ ಆಶ್ಚರ್ಯವಾಗುತ್ತದೆ! ಈ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
ವೀಡಿಯೊವನ್ನು @sarcasqo ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ಪೋಸ್ಟ್ ಮಾಡುವಾಗ, ‘ಇದು ಚಂಡಮಾರುತದ ಮುಂಚಿನ ಶಾಂತತೆ’ ಎಂದು ಬರೆಯಲಾಗಿದೆ. ಸಾವಿರಾರು ಜನರು ವೀಡಿಯೊ ವೀಕ್ಷಿಸಿದ್ದಾರೆ.
Toofan ke pehle wali shanti hai yeh 💀 pic.twitter.com/LBMuEuXlyk
— 𝙎𝘼𝙍𝘾𝘼𝙎𝙌𝙊 (@sarcasqo) November 6, 2024