ಕಾಮರೆಡ್ಡಿ: ಯುವಕನೊಬ್ಬ ರೀಲ್ಸ್‌ಗಾಗಿ ನಾಗರ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಮೃತಪಟ್ಟ ದುರಂತ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ. (Viral video)
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಶಿವ ಮೃತ ಯುವಕ ಎಂದು ಗುರುತಿಸಲಾಗಿದೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ನವಾಡ ಮಂಡಲದ ದೇಸಾಯಿಪೇಟ್ ಗ್ರಾಮದಲ್ಲಿ ಈ ಅವಘಡ ಬೆಳಕಿಗೆ ಬಂದಿದೆ.
ಹಾವಾಡಿಗನೊಬ್ಬನ ಮಗ ಶಿವ ಗ್ರಾಮದ ಕಾಲೋನಿಗೆ ಪ್ರವೇಶಿಸಿದ 6 ಅಡಿಯ ನಾಗರ ಹಾವನ್ನು ಹಿಡಿದು ಗ್ರಾಮದಿಂದ ಹೊರಗೆ ಬಿಡಲು ತೆಗೆದುಕೊಂಡು ಹೋಗುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದಾನೆ. ಆದರೆ, ಬಾಯಿಯೊಳಗೆ ಹೋದ ಹಾವು ಶಿವನಿಗೆ ಕಚ್ಚಿದ್ದು ಇದು ಶಿವನ ಗಮನಕ್ಕೆ ಬಂದಿರುವುದಿಲ್ಲ. ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಶಿವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಆಗ, ಆದಾಗಲೇ ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Shocking news: ಕೋಲಾರದ ಮುನಿಯಪ್ಪನ ಮೊಬೈಲ್ ನಲ್ಲಿ ಹೆಣ್ಮಕ್ಕಳ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು!
ಶಿವ ಹಾವನ್ನು ಬಾಯಲ್ಲಿ ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ.
ರೀಲ್ಸ್ ಗಾಗಿ ನಾಗರಹಾವನ್ನೇ ಕಚ್ಚಿ ನಿಂತ ಯುವಕ: ಆಮೇಲ್ ಆಗಿದ್ದು ದುರಂತ pic.twitter.com/2lueuux04t
— dcgkannada (@dcgkannada) September 7, 2024