ಮುಧೋಳ : ಅ.26ರೊಳಗೆ ಎಲ್ಲ ಕಾರ್ಖಾನೆಗಳು 2022ರ ಹೆಚ್ಚುವರಿ 62ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತಮುಖಂಡರು ಬುಧವಾರ ನಡೆದ ಸಭೆಯಲ್ಲಿ ಕಾರ್ಖಾನೆಗಳಿಗೆ ಗಡವು ನೀಡಿದರು.
ನಗರದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನಗೆ ನೀಡಬೇಕಿದ್ದ 62 ರೂ.ವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪಾವತಿಸಿದ್ದಾರೆ. ಇನ್ನುಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಪಾವತಿಸಬೇಕು ಎಂದು ಸಭೆಯ ಮೂಲಕ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸಂದೇಶ ರವಾಣಿಸಿದರು.
ಒಂದು ವೇಳೆ ಬಾಕಿ ಹಣ ನೀಡದೆ ಇದ್ದರೆ 26ರಂದು ಮುಂದಿನ ಹೋರಾಟದ ರೂಪರೇಷೆಗಳ ಮತ್ತೊಂದು ಸುತ್ತಿನ ಸಭೆ ಸೇರೋಣ ಎಂದು ನಿರ್ಧರಿಸಿದರು.
ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ. ಹನಮಂತ ನಬಾಬ. ಸುರೇಶ ಚಿಂಚಲಿ. ನಾಗೇಶ ಗೊಲಶೇಟ್ಟಿ. ಸುಭಾಸ ಶಿರಬೂರ. ಮಹೇಶಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.