ಮಚ್ಚಿನಿಂದ ಹೊಡೆದಾಡಿಕೊಂಡು ಸತ್ತ ನವಜೋಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮೂರನೇ ವ್ಯಕ್ತಿ ಕೈವಾಡ ಶಂಕೆ

ಮಚ್ಚಿನಿಂದ ಹೊಡೆದಾಡಿಕೊಂಡು ಸತ್ತ ನವಜೋಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮೂರನೇ ವ್ಯಕ್ತಿ ಕೈವಾಡ ಶಂಕೆ

ಕೆಜಿಎಫ್: ಕೋಲಾರ ಜಿಲ್ಲೆಯ ಕೆಜಿಎಫ್​​ ತಾಲೂಕಿನ ಚಂಬರಸನಹಳ್ಳಿಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವ ವಧು ಹಾಗೂ ವರ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ವಧು ಲಿಖಿತಶ್ರೀ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮೃತ ಲಿಖಿತ ಶ್ರೀಯ ತಾತ ಹಾಗೂ ತಂಗಿ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ.

ಇದನ್ನು‌ ಓದಿ: ನಿನ್ನೆ ಬೆಳಗ್ಗೆ ಮದುವೆ, ಮಧ್ಯಾಹ್ನ ಜಗಳ, ಸಂಜೆ ವಧು.. ಇಂದು ವರ ಸಾವು..!

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಡ ಹೆಂಡತಿ ಇಬ್ಬರೂ ಬಹಳಷ್ಟು ಅನ್ಯೋನ್ಯವಾಗಿದ್ದವರು, ಪ್ರೀತಿಸಿ ಮದುವೆಯಾಗಿದ್ದವರು. ಇಬ್ಬರು ಹೊಡೆದಾಡಿಕೊಂಡಿರುವುದು ಅನುಮಾನ. ಯಾರೋ ಮೂರನೇ ವ್ಯಕ್ತಿ ಇದರ ಹಿಂದೆ ಇದ್ದಾರೆ ಎಂದು ನವ ವಧು ವರನ ಸಾವಿನ ಬಗ್ಗೆ ಲಿಖಿತ ಶ್ರೀ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮದುವೆಯಾದ ದಿನವೇ ಹೊಡೆದಾಡಿದ ದಂಪತಿ; ವಧು ದುರ್ಮರಣ, ವರನ ಸ್ಥಿತಿ ಚಿಂತಾಜನಕ!

ನಾವು ಮದುವೆಗೆ ಹೋಗಿದ್ದೆವು. ಇಬ್ಬರೂ ತುಂಬಾ ಖುಷಿಯಾಗಿ ಇದ್ದರು. ಅವರು ಹೊಡೆದಾಡಿಕೊಂಡಿರುವುದು ಸುಳ್ಳು. ಇಬ್ಬರನ್ನೂ ಯಾರೋ ಹೊಡೆದಿರುವ ಅನುಮಾನ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Latest News

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಬೆಂಗಳೂರು: ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿರಿಸಿ

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಕೋಲ್ಕತ್ತ: ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ: ಕೆಎಸ್ಆರ್.ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಆರೇಶಂಕರ ಕ್ರಾಸ್

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುದ್ದೇಬಿಹಾಳ : ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ, ಕೋಳೂರು, ಅಡವಿ

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಖುಷಿಯಲ್ಲಿ ಪಯಣ ಬೆಳೆಸಿದ ಕುಟುಂಬಕ್ಕೆ ಇಂದು ಬೆಳಗ್ಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟ ಜಿಲ್ಲೆಯ ಕುಳಗೇರಿ ಕ್ರಾಸ್ ಗೆ ತೆರಳುತ್ತಿರುಬ ಕುಟುಂಬ ಅಪಘಾತಕ್ಕೆ ಬಲಿಯಾಗಿದೆ. ಶ್ವೇತಾ ಎಬ ಯುವತಿ ಎರಡು ದಿನಗಳ‌ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಹೊಸ ಬಾಳ‌ ಸಂಗಾತಿ ಹಾಗೂ ಹೊಸ ಜೀವನದ ಕನಸಿನೊಂದಿಗೆ ಕಾರನ್ನೇರಿ ಪಯಣ ಬೆಳೆಸಿದ್ದಳು. ವಿಧಿಯ ಮುಂದೆ, ಅಪಘಾತದಲ್ಲಿ ಕನಸು ನುಚ್ಚು ನೂರಾಗಿದೆ. ಎರಡು ದಿನಗಳ ಹಿಂದೆ ಸಾಗರ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಲಿಂಗಸಗೂರು: ತಾಲ್ಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಬೋರವೇಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮದ ಜನರಿಗೆ ಯೋಗ್ಯವಾದ ಕೃಷ್ಣ ನದಿಯ ನೀರನ್ನು ಒದಗಿಸಬೇಕು ಎಂದು ಸಹಾಯಕ ಆಯುಕ್ತರಿಗೆಅಂಬೇಡ್ಕರ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಚಿತ್ತಾಪೂರ ಗ್ರಾಮದ ಸಂಪೂರ್ಣ ಜನರಿಗೆ ವಾಂತಿ ಬೇಧಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದರು. ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇಟಿ ನೀಡಿ, ಹತೋಟಿಗೆ ತರುವ