ಕೋಲಾರ: ಪರಸ್ಪರ ಪ್ರೀತಿಸಿ ಒಪ್ಪಿ ಬುಧವಾರ ಬೆಳಗ್ಗೆ ಮದುವೆಯಾದ ನವಜೋಡಿ, ಮಧ್ಯಾಹ್ನ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಪರಿಣಾಮ ಕೆಜಿಎಫ್ ನಲ್ಲಿ ವಧು ಸಾವನ್ನಪ್ಪಿದ್ದ ಬೆನ್ನಲ್ಲೆ, ಇಂದು ಮದುಮಗ ಕೂಡ ಮರಣ ಹೊಂದಿದ್ದಾನೆ.
ಹೊಡೆದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವೀನ್ ಅನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಂಬರಸನಹಳ್ಳಿಯಲ್ಲಿ ಘಟನೆ ನಡೆದಿದ್ದು, ಆಂಧ್ರದ ಬೆನಪಲ್ಲಿ ಗ್ರಾಮದ ಲಿಖಿತಾ ಶ್ರೀ ಮೃತಪಟ್ಟಿದ್ದಳು. ಘಟನೆಯಲಗಲಿ ಚಂಬರಸನಹಳ್ಳಿಯ ನವೀನ್ ಸ್ಥಿತಿ ಗಂಭೀರವಾಗಿತ್ತು.
ಬುಧವಾರ ಬೆಳಗ್ಗೆ 11.30ಕ್ಕೆ ಮದುವೆ ನಡೆದಿದ್ದು ಕೆಲವೇ ಗಂಟೆಗಳಲ್ಲಿ ಗಂಡ ಹಂಡತಿ ಜಗಳ ಆಡಿಕೊಂಡಿದ್ದಾರೆ. ನಂತರ ರೂಂ ಸೇರಿದ ದಂಪತಿ ಹೊಡೆದಾಡಿಕೊಂಡಿದ್ದು ಇಬ್ಬರಿಗೂ ಗಂಭೀರ ಗಾಯಗಳಾಗಿದ್ದನ್ನು ಗಮನಿಸಿದ ನೆಂಟರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಲಿಖಿತ ಸಂಜೆ ಸಾವನಪ್ಪಿದರೆ. ನವೀನ್ ಇಂದು ಸಾವನಪ್ಪಿದ್ದಾನೆ.
ಇದನ್ನು ಓದಿ: ಮದುವೆಯಾದ ದಿನವೇ ಹೊಡೆದಾಡಿದ ದಂಪತಿ; ವಧು ದುರ್ಮರಣ, ವರನ ಸ್ಥಿತಿ ಚಿಂತಾಜನಕ!
ಒಲ್ಲದ ಮದುವೆ- ಜಗಳದ ಗೊಡವೆ: ಪರಸ್ಪರ ಸಂಬಂಧಿಕರಾಗಿದ್ದ ಲಿಖಿತ ಶ್ರೀ ಮತ್ತು ನವೀನ್ ಮದುವೆ 4 ತಿಂಗಳ ಹಿಂದೆ ನಿಶ್ಚಯ ಆಗಿತ್ತಾದರೂ ನಂತರ ಕ್ಯಾನ್ಸಲ್ ಸಹಾ ಆಗಿತ್ತು. ಆದರೆ ಸಂಬಂಧಿಕರು, ಸ್ನೇಹಿತರ ಮಧ್ಯಸ್ತಿಕೆಯಿಂದಾಗಿ ಪುನಃ ಸಂಧಾನ ನಡೆದು ಕಳೆದವಾರ ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು.
ಮದುವೆ ಶಾಸ್ತ್ರದಲ್ಲಿ ಲಿಖಿತ ಲವಲವಿಕೆಯಿಂದ ಇದ್ದರೂ ನವೀನ್ ಅನ್ಯಮನಸ್ಕನಾಗಿ ಚಿಂತಾ ಕ್ರಾಂತನಾಗಿದ್ದನಾದರೂ ಎಲ್ಲವೂ ಸರಿ ಹೋಗುತ್ತದೆ ಎಂದು ನೆಂಟರು ಅಂದುಕೊಂಡಿದ್ದರು. ಆದರೆ ಮಧ್ಯಾಹ್ನ ಊಟ ಮಾಡುವಾಗಲೇ ಆರಂಭವಾದ ಗಲಾಟೆ ಸಂಜೆ 06 ಗಂಟೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ.