DKS vs HDK: ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ; ಡಿಕೆ ಶಿವಕುಮಾರ್ ವಾಗ್ದಾಳಿ

DKS vs HDK: ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ; ಡಿಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು, (ಆಗಸ್ಟ್ 10); ಮೂಡಾ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (DKS vs HDK) ಅವರ ರಾಜೀನಾಮೆಗೆ ಆಗ್ರಹಿಸಿ ಕಮಲ-ದಳ ದೋಸ್ತಿಗಳು ಬೆಂಗಳೂರಿನಿಂದ ಮೈಸೂರು ವರೆಗೆ ನಡೆಸಿದ ಪಾದಯಾತ್ರೆ ಇಂದಯ ಸಮಾರೋಪ ಕಂಡಿದೆ.

Jion Our Telegram: https://t.me/dcgkannada

ಈ ಪಾದಯಾತ್ರೆ ಆರಂಭವಾದ ಉದ್ದೇಶ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆದ್ರೂ, ಶರಪರ ಕಿತ್ತಾಡಿದ್ದು ಮಾತ್ರ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ. (DKS vs HDK) ಇವರ ನಡುವೆ ವಾಗ್ದಾಳಿ ಯಾವ ಮಟ್ಟಕ್ಕಿತ್ತೆಂದರೆ ಪಾದಯಾತ್ರೆಯ ಉದ್ದೇಶವೇ ಮರೆತು ಹೋಗಿದೆ.

ನಿನ್ನೆ ನವದೆಹಲಿಯಲ್ಲಿ ‘ಹುಷಾರು ಶಿವಕುಮಾರ್. ಗಂಡಸ್ತನದ ರಾಜಕಾರಣ ಮಾಡಿ’ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ ಎಂದು ಪ್ರಶ್ನಿಸಿ, ಇತ್ತೀಚೆಗೆ ಅವರು ಏನು ಮಾತನಾಡಿದ್ದಾರೆ ಒಮ್ಮೆ ನೆನಪಿಸಿಕೊಳ್ಳಲಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತದೆ ಎಂದಿದ್ದರು. ಅದರ ಅರ್ಥ ನನ್ನನ್ನು ಮತ್ತೆ ಜೈಲಿಗೆ ಕಳುಹಿಸುತ್ತೇನೆ ಎಂಬ ಎಚ್ಚರಿಕೇನಾ ಎಂದು ತಿವಿದಿದ್ದಾರೆ.

ಇದನ್ನೂ ಓದಿ: BJP-JDS ಪಾದಯಾತ್ರೆ ಸಮಾರೋಪಕ್ಕೂ ಮುನ್ನ ಚಾಮುಂಡಿ ಮೊರೆ ಹೋದ‌ ಸಿಎಂ ಸಿದ್ದರಾಮಯ್ಯ‌

ನಾನು ಈಗಾಗಲೇ ಜೈಲು ಕಂಡಿರೋನು. ಅದಲ್ಲದೇ ನಾನು ಜೈಲಲ್ಲಿ ಇದ್ದಾಗ ಅವರೂ ಬಂದು ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಶಾಲಿಯಾಗಿದ್ದೆ ಅಂತಾ ಖುದ್ದು ಕುಮಾರಸ್ವಾಮಿ ಕಣ್ಣಾರೇ ನೋಡಿದ್ದಾರೆ ಎಂದು ತಿರುಗೇಟು ನೀಡಿದ್ದು ಕುಮಾರಸ್ವಾಮಿ ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ ಎಂದು ಡಿಕೆಶಿ ಅವರು ಮಾತಿನಲ್ಲೇ ಡಿಚ್ಚಿ ಕೊಟ್ಟಿದ್ದಾರೆ.

Latest News

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ

3056 ಜನರಿಗೆ ನೋಟಿಸ್ ಕೊಡಲು ಸಿದ್ಧತೆ:          ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಂಟು ಹೊಸ ಮತಗಟ್ಟೆ ಸ್ಥಾಪನೆ

3056 ಜನರಿಗೆ ನೋಟಿಸ್ ಕೊಡಲು ಸಿದ್ಧತೆ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಂಟು ಹೊಸ ಮತಗಟ್ಟೆ ಸ್ಥಾಪನೆ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಳಿಕ ಕರಡು ಪಟ್ಟಿ ಪ್ರಕಟಿಸಲಾಗಿದ್ದು

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆಗಳನ್ನು,ಕಲಾವಿದರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಎಸ್.ಜಿ.ವಿ.ಸಿ ವಿದ್ಯಾಪ್ರಸಾರಕ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ ಹೇಳಿದರು. ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜಾನಪದ ಕಲೆಗಳನ್ನು ಬಲ್ಲವರು ಗ್ರಾಮೀಣ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.ಆದರೆ ಅವರಿಗೆ ಆರ್ಥಿಕ ಶಕ್ತಿ ಇಲ್ಲವಾಗಿದೆ.ಪರಿಷತ್ತಿನ ಮೂಲಕ ಆರ್ಥಿಕ ಶಕ್ತಿ ತುಂಬಲು ಸರ್ಕಾರದ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.      ಏತನ್ಮಧ್ಯೆ ಬಾವಿಗೆ ತಂದೆಯೂ ಜಿಗಿದಿದ್ದಾನೆ ಎಂದು ಹೇಳಲಾಗಿದ್ದು ಆತನ ಶವ ಶೋಧಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಗಲಿರಳು ಕಾರ್ಯಾಚರಣೆ ನಡೆಸಿದ್ದರೂ ಆತನ ಶವ ಪತ್ತೆಯಾಗಿಲ್ಲ.        ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ  ಬಾಲಕಿಯರನ್ನು ಹಿರಿಯ ಸಹೋದರಿ ರಕ್ಷಿತಾ ಬರಗಿ(15) ಹಾಗೂ ಕಿರಿಯ ಸಹೋದರಿ ಸಾಕ್ಷಿ ಬರಗಿ(10) ಎಂದು