ಎಸ್.ಎಸ್.ಎಲ್.ಸಿ ಟಾಪರ್‌’ಳಿಗೆ ಶಾಸಕರ ಗೌರವ: ನಾಗರಬೆಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ-ನಾಡಗೌಡ ಶ್ಲಾಘನೆ

ಎಸ್.ಎಸ್.ಎಲ್.ಸಿ ಟಾಪರ್‌’ಳಿಗೆ ಶಾಸಕರ ಗೌರವ: ನಾಗರಬೆಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ-ನಾಡಗೌಡ ಶ್ಲಾಘನೆ

ಮುದ್ದೇಬಿಹಾಳ : ಯಾವುದೇ ಒಂದು ಸಾಧನೆ ಇರಲಿ ಅಲ್ಲಿ ಆತ್ಮಸ್ಥೆರ್ಯ ಪ್ರಮುಖ ಪಾತ್ರ ವಹಿಸುತ್ತದೆ. ಈಗಿನ ಹೆಣ್ಣು ಮಕ್ಕಳು ಮಾಡುವ ಸಾಧನೆಯನ್ನು ಪುರುಷ ಪ್ರಧಾನ ಸಮಾಜ ತಲೆ ಎತ್ತಿ ನೋಡುವಂತೆ ಆಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ತಾಲ್ಲೂಕಿನ ನಾಗರಬೆಟ್ಟ ಆಕ್ಸ್ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮರು ಮೌಲ್ಯಮಾಪನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ಗಳಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಹಾಗೂ ಎಕ್ಸಪರ್ಟ್ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದಕ್ಕೆ ವಿದ್ಯಾರ್ಥಿಗಳ ಸಾಧನೆಯೇ ಕಾರಣವಾಗಿದೆ.ಹೆಣ್ಣು ಮಕ್ಕಳು ಸಮಾಜದಲ್ಲಿ ಹಿಂಜಯರಿಯದೇ ಸಾಧನೆ ಮಾಡಬೇಕು.ಎಲ್ಲಿಯವರೆಗೆ ತಾವು ಶೈಕ್ಷಣಿಕವಾಗಿ ಗುರಿ ಹೊಂದಿದ್ದೀರೋ ಅಲ್ಲಿಯವರೆಗೂ ರಾಜ್ಯ ಮತ್ತು ರಾಷ್ಟçಮಟ್ಟದ ಸಾಧನೆ ತಮ್ಮದಾಗಲಿ ಎಂದು ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬದುಕು ರೂಪಿಸುವ ಶಿಕ್ಷಣ ನೀಡುತ್ತಿದ್ದೇವೆ.ನಮ್ಮಲ್ಲಿ ಗುಣಮಟ್ಟದ ಹಾಗೂ ಅತ್ಯುನ್ನತ ಶೈಕ್ಷಣಿಕ ಮಾರ್ಗದರ್ಶನ ದೊರೆಯುತ್ತಿರುವುದರಿಂದಲೇ ಪಾಲಕರು,ವಿದ್ಯಾರ್ಥಿಗಳು ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ನಿರಂತರ ರಾಜ್ಯಮಟ್ಟದ ಸಾಧನೆ ಸುಲಭವಾದ ಮಾತಲ್ಲ ಎಂದು ಹೇಳಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಾಲತವಾಡದ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ,ಎರಡನೇ ಸ್ಥಾನ ಪಡೆದುಕೊಂಡ ಕುದುರಿಸಾಲವಾಡಗಿಯ ಅಪೂರ್ವಾ ಮೂಲಿಮನಿ ಅವರನ್ನು ಸಂಸ್ಥೆಯಿAದ ಸನ್ಮಾನಿಸಲಾಯಿತು.ಶಾಸಕರು ಇಬ್ಬರು ಸಾಧಕ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ.ಪ್ರೋತ್ಸಾಹಧನದ ಚೆಕ್ ನೀಡಿದರು.ನಾಲತವಾಡದ ಗಣ್ಯರಾದ ಶಿವಪ್ಪಗೌಡ ತಾತರಡ್ಡಿ,ಎ.ಜಿ.ಗಂಗನಗೌಡ್ರ(ಗುOಡುಸಾಹುಕಾರ), ರಾಯನಗೌಡ ತಾತರಡ್ಡಿ, ಪ್ರಾಚಾರ್ಯ ಇಸ್ಮಾಯಿಲ್ ಮನಿಯಾರ,ಎನ್.ಎ.ಬಿರಾಜದಾರ,ವಿಜಯಕುಮಾರ ಪಾಟೀಲ,ರೇವಣಸಿದ್ದ ಚಲವಾದಿ, ರಾಜಶೇಖರ ಹಿರೇಮಠ,ಪ್ರಮೋದ ಯರಗುಂಟಿ,ಮAಜುನಾಥ ಮಂಕಣಿ, ಸಾಧಕರ ಪಾಲಕರಾದ ಡಾ.ಸಿದ್ದನಗೌಡ ಪಾಟೀಲ, ಸಿದ್ದನಗೌಡ ಮೂಲಿಮನಿ, ಸಂಗಣ್ಣ ಪತ್ತಾರ, ಜೆ.ಡಿ.ಮುಲ್ಲಾ ಮೊದಲಾದವರು ಇದ್ದರು.

ಎಂ.ಎಸ್.ಪಾಟೀಲರು ಒಬ್ಬ ತತ್ವಜ್ಞಾನಿ-ಶಾಸಕ ನಾಡಗೌಡರ ಪ್ರಶಂಸೆ ಶೈಕ್ಷಣಿಕ ಕ್ಷೇತ್ರದಲ್ಲಿ ಸತತ ಸಾಧನೆ ಮಾಡುತ್ತಿರುವ ನಾಗರಬೆಟ್ಟದ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಂ.ಎಸ್.ಪಾಟೀಲರು ತಾವು ಉನ್ನತ ವಿದ್ಯಾಭ್ಯಾಸ ಮಾಡದೇ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಪ್ರಾಥಮಿಕ ಹಂತದಲ್ಲೇ ಖ್ಯಾತಿ ಪಡೆದಿರುವ ಈ ಸಂಸ್ಥೆಯಿOದ ದೇಶ ನಾನಾ ಕಡೆಗಳಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ನಿಜಕ್ಕೂ ಅವರೊಬ್ಬ ತತ್ವಜ್ಞಾನಿ ಎಂದು ಬಣ್ಣಿಸಿದರಲ್ಲದೇ ಸಂಸ್ಥೆಯ ಸಾಧನೆ ಮುಂದುವರೆಯಲಿ ಎಂದು ಶಾಸಕ ನಾಡಗೌಡರು ಪ್ರಶಂಸೆ ವ್ಯಕ್ತಪಡಿಸಿದರು.

ನಾವು ಯಾವುದೇ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಳ್ಳುವುದಿಲ್ಲ.ಸಾಧನೆ ಮಾಡಿದ ವಿದ್ಯಾರ್ಥಿಗಳು ಯಾವುದೇ ಸಂಸ್ಥೆಯವರಾದರೂ ಅವರನ್ನು ಅಭಿನಂದಿಸುವುದು ನಮ್ಮ ಧರ್ಮ.ಪಾಲಕರು,ವಿದ್ಯಾರ್ಥಿಗಳು ನಮ್ಮಲ್ಲಿ ದೊರೆಯುವ ಶಿಕ್ಷಣ ನೋಡಿ ಬರುತ್ತಾರೆಯೇ ಹೊರತು ಯಾವುದೇ ಆಸೆ,ಆಮಿಷಗಳಿಗೆ ಒಳಗಾಗಿ ಪ್ರವೇಶ ಪಡೆದುಕೊಳ್ಳುವುದಿಲ್ಲ.ಕೆಲವರು ನಮ್ಮ ಸಂಸ್ಥೆಯ ಕುರಿತು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ.ಅದಕ್ಕೆಲ್ಲ ಕಿವಿಗೊಡುವುದಿಲ್ಲ.
–ಅಮೀತಗೌಡ ಎಂ.ಪಾಟೀಲ,ಆಡಳಿತಾಧಿಕಾರಿ, ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ,ನಾಗರಬೆಟ್ಟ

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ