ಶಾಸಕರು, ಮಾಜಿ ಶಾಸಕರ ಹೆಸರಿನಲ್ಲಿ ಪುಢಾರಿಗಳಿಂದ ಹಣ ವಸೂಲಿ..! ತಾಂಡಾ ಮಂದಿಯ ಆಕ್ರೋಶ (ವಿಡಿಯೋ ನೋಡಿ)

ಶಾಸಕರು, ಮಾಜಿ ಶಾಸಕರ ಹೆಸರಿನಲ್ಲಿ ಪುಢಾರಿಗಳಿಂದ ಹಣ ವಸೂಲಿ..! ತಾಂಡಾ ಮಂದಿಯ ಆಕ್ರೋಶ (ವಿಡಿಯೋ ನೋಡಿ)


ಮುದ್ದೇಬಿಹಾಳ : ತಾಲ್ಲೂಕಿನ ಕೋಳೂರು ತಾಂಡಾದಲ್ಲಿ ( Koluru tanda) ಶತಮಾನಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ವಾಸಿಸುತ್ತಿರುವ ಜಾಗೆಯ ಕುರಿತು ಗೊಂದಲ ಸೃಷ್ಟಿಸಿ ಅದರ ದುರ್ಲಾಭ ಪಡೆದುಕೊಳ್ಳಲು ಹಾಲಿ, ಮಾಜಿ ಶಾಸಕರ ಹೆಸರುಗಳನ್ನು ಬಳಸಿಕೊಂಡು ಕೆಲವು ಪುಢಾರಿಗಳು ವಸೂಲಿ ದಂಧೆಗೆ ಇಳಿದಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಂಜಾರ ಸಮಾಜದ ಮುಖಂಡ ರವಿ ನಾಯಕ ಆಗ್ರಹಿಸಿದರು.

Join Our Telegram: https://t.me/dcgkannada

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ತಾಂಡಾ ನಿವಾಸಿಗಳೊಂದಿಗೆ ಆಗಮಿಸಿದ್ದ ಅವರು ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ತಾಲ್ಲೂಕಿನ ಕೋಳೂರು ತಾಂಡಾ Koluru tanda) ನಿವಾಸಿಗಳು ತಾಂಡಾದ ಸರ್ವೆ ನಂ.167//3ಬ, 167//2, 167//1 , 169//* ರಲ್ಲಿನ ಮಾಲೀಕರುಗಳಿಗೆ ತಮ್ಮ ಸ್ವಂತ ಹಣವನ್ನು ಕೊಟ್ಟು ಅವತ್ತಿನ ಕಾಲದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಈಚೇಗೆ ಸರ್ಕಾರದ ಸುತ್ತೋಲೆಯಂತೆ ನಮ್ಮ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಇದರ ದುರುಪಯೋಗವನ್ನು ಮೂಲ ಮಾಲೀಕರೂ ಹಾಗೂ ಮಧ್ಯವರ್ತಿಗಳು ಪಡೆದುಕೊಂಡು ಇಲ್ಲಿನ ನಿವಾಸಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Hunagund: 528 ವಿದ್ಯಾರ್ಥಿಗಳಿಗೆ ಒಂದೇ ಬಸ್..!

ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಜೊತೆಗೆ ಇರುವ ಕೆಲವು ಪುಢಾರಿಗಳು ಈ ರೀತಿ ಬಡವರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದು ಜನಪ್ರತಿನಿಧಿಗಳ ಮುಖಕ್ಕೆ ಕಪ್ಪು ಮಸಿ ಬಳಿಯುವ ಕುತಂತ್ರವೂ ನಡೆದಿದೆ. ಇದಕ್ಕೆ ಹಾಲಿ, ಮಾಜಿ ಶಾಸಕರು ಆಸ್ಪದ ಕೊಡದೇ ಅಂತವರಿಗೆ ತಿಳಿವಳಿಕೆ ಹೇಳಬೇಕು ಎಂದು ಮನವಿ ಮಾಡಿದರು.

ಸರ್ಕಾರಕ್ಕೆ ಪುಕ್ಕಟೆಯಾಗಿ ಜಮೀನು ಕೊಟ್ಟಿದ್ದೇವೆ.ಅದಕ್ಕಾಗಿ ನಮಗೆ ಪರಿಹಾರ ಕೊಡಬೇಕು ಎಂದು ವಿನಾಕಾರಣ ಕೆಲವು ಪಟ್ಟಭದ್ರರು ಸರಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.ಅಧಿಕಾರಿಗಳಿಗೆ ಧಮಕಿ ಹಾಕಿ ತಮಗೆ ಸಂಬಂಧಪಡದ ಜಾಗೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸದರಿ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬಡವರಿಗೆ ಅನ್ಯಾಯ ಆಗದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಇಂತಹ ದುರ್ಮಾರ್ಗದಿಂದ ಬಡವರಿಗೆ ತೊಂದರೆ ಕೊಡುವ ಕೆಲಸ ಮುಂದುವರೆದರೆ, ನಮ್ಮ ತಾಂಡಾವನ್ನು ಕಂದಾಯ ಗ್ರಾಮ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಮೂಲ ಮಾಲೀಕರಿಗೆ ಹಣ ಕೊಟ್ಟು ಜಮೀನು ಖರೀದಿ ಮಾಡಿದ್ದು ಅವರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಸಲ್ಲಿಸಿದರು.

ತಾಂಡಾದ ಪ್ರಮುಖರಾದ ಶಾಂತಾರಾಮ ಮೇಲ್ಮನಿ, ರಾಮಸ್ವಾಮಿ ಸೀತಿಮನಿ, ಪ್ರತಾಪ ಸೀತಿಮನಿ, ತುಳಜಾರಾಮ ಚವ್ಹಾಣ, ಸಯಭಾಷ ದಿಂಡೂರ, ಮುತ್ತು ಚವ್ಹಾಣ, ಪ್ರದೀಪ ರಾಠೋಡ, ವಿಕಾಸ ಚವ್ಹಾಣ, ಶಿವಾನಂದ ರಾಠೋಡ ಮೊದಲಾದವರು ಇದ್ದರು.

ಹಾಲಿ, ಮಾಜಿ ಶಾಸಕರು ರಾಜಕಾರಣ ಮಾಡುವಾಗ ರಾಜಕಾರಣ ಮಾಡಿ.ಬಡವರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯಕ್ಕೆ ಬನ್ನಿ. ಕೆಲವರು ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡುವುದು, ರೊಕ್ಕಾ ಎತ್ತುವುದು ಮಾಡುತ್ತಿದ್ದಾರೆ. ಅನವಶ್ಯಕವಾಗಿ ಬಡವರಿಗೆ ತೊಂದರೆ ಕೊಡುತ್ತಿರುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಬಂಜಾರ ಸಮಾಜದ ಮುಖಂಡ ರವಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest News

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ

3056 ಜನರಿಗೆ ನೋಟಿಸ್ ಕೊಡಲು ಸಿದ್ಧತೆ:          ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಂಟು ಹೊಸ ಮತಗಟ್ಟೆ ಸ್ಥಾಪನೆ

3056 ಜನರಿಗೆ ನೋಟಿಸ್ ಕೊಡಲು ಸಿದ್ಧತೆ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಂಟು ಹೊಸ ಮತಗಟ್ಟೆ ಸ್ಥಾಪನೆ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಳಿಕ ಕರಡು ಪಟ್ಟಿ ಪ್ರಕಟಿಸಲಾಗಿದ್ದು

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆಗಳನ್ನು,ಕಲಾವಿದರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಎಸ್.ಜಿ.ವಿ.ಸಿ ವಿದ್ಯಾಪ್ರಸಾರಕ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ ಹೇಳಿದರು. ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜಾನಪದ ಕಲೆಗಳನ್ನು ಬಲ್ಲವರು ಗ್ರಾಮೀಣ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.ಆದರೆ ಅವರಿಗೆ ಆರ್ಥಿಕ ಶಕ್ತಿ ಇಲ್ಲವಾಗಿದೆ.ಪರಿಷತ್ತಿನ ಮೂಲಕ ಆರ್ಥಿಕ ಶಕ್ತಿ ತುಂಬಲು ಸರ್ಕಾರದ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.      ಏತನ್ಮಧ್ಯೆ ಬಾವಿಗೆ ತಂದೆಯೂ ಜಿಗಿದಿದ್ದಾನೆ ಎಂದು ಹೇಳಲಾಗಿದ್ದು ಆತನ ಶವ ಶೋಧಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಗಲಿರಳು ಕಾರ್ಯಾಚರಣೆ ನಡೆಸಿದ್ದರೂ ಆತನ ಶವ ಪತ್ತೆಯಾಗಿಲ್ಲ.        ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ  ಬಾಲಕಿಯರನ್ನು ಹಿರಿಯ ಸಹೋದರಿ ರಕ್ಷಿತಾ ಬರಗಿ(15) ಹಾಗೂ ಕಿರಿಯ ಸಹೋದರಿ ಸಾಕ್ಷಿ ಬರಗಿ(10) ಎಂದು