ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ ಯೋಜನೆಗೆ ಸರ್ವೈಲೆನ್ಸ್ ಎಂದು ಹೆಸರಿಟ್ಟಿದ್ದಾರೆ.ದೇಶದಲ್ಲಿ ಪೊಲೀಸರು ತನಿಖೆ ನಡೆಸುವಂತೆ ನಮ್ಮ ಮತವನ್ನು ನಾವು ಪಡೆದುಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ.ಇದು ನಮ್ಮ ಪರಿಸ್ಥಿತಿ ಬಂದಿದೆ.ಸಾಮಾನ್ಯ ಪ್ರಜೆಯಾಗಿ ನ್ಯಾಯಬದ್ಧ ಹಕ್ಕು ಇರುವುದನ್ನು ಪ್ರಶ್ನೆ ಮಾಡಿ ನೀನು ಯೋಗ್ಯನಿದ್ದಿಯೋ ಇಲ್ಲವೋ ಎಂಬುದನ್ನು ತಿಳಿಸಬೇಕು ಎಂಬುವುದೇ ವಿರ‍್ಯಾಸವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಡವರ ಪರ ಕಾರ್ಯಕ್ರಮಗಳನ್ನು ಕೊಟ್ಟಿರುವುದು,ಈಚೇಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ.ಅದಕ್ಕಾಗಿ ಅಡ್ಡಮತದಾನ ಮಾಡಿದವರನ್ನು ಪತ್ತೆ ಹಚ್ಚುವುದಕ್ಕೆ ಧರ್ಮಸ್ಥಳದಲ್ಲಿ ಆಣೆ ಬೇಡ ಎಂದು ಅವರೇ ಹೇಳುತ್ತಿದ್ದಾರೆ ಎಂದು ಹೇಳಿದರು.

ಇನ್ನೆರಡು ತಿಂಗಳೊಳಗೆ ಪಂಚಾಯಿತಿ,ತಾಪO,ಜಿಪO,ಪುರಸಭೆ ಚುನಾವಣೆ ನಡೆಯಲಿವೆ.ಆಗಸ್ಟ್ ಕೊನೆಯಲ್ಲಿ ಚುನಾವಣೆ ಘೋಷಣೆಯಾಗಲಿವೆ.ಮತದಾರರ ಪಟ್ಟಿಯಲ್ಲಿ ಈ ಹಿಂದೆ ಹೇಗಿತ್ತು ಹಾಗೆಯೇ ಹೆಸರು ಬರೆಯಬೇಕು. ನನ್ನ ಕಾರ್ಯಕರ್ತರು ನನ್ನ ಜೀವಾಳ,ಬೆನ್ನೆಲುಬಾಗಿ ನಿಂತಿದ್ದಾರೆ.ಇತಿಹಾಸ ಮರೆಯುವಂತಹದ್ದಲ್ಲ.ಎಸ್‌ಆಯ್‌ಆರ್ ಅಲಕ್ಷ ಮಾಡಬೇಡಿ.ನಾಳೆ ಬರುವ ಮಕ್ಕಳಿಗೆ ಇದೊಂದೇ ಪಕ್ಷ ಆಗಿದೆ.ವಲಸೆ ಹೋದವರನ್ನು ಕರೆಯಿಸಿ ಎನ್ರೋಲಮೇಂಟ್ ಮಾಡಿಸಿ ಎಲೆಕ್ಷನ್ ಆಯೋಗಕ್ಕೆ,ಮೋದಿಯವರಿಗೆ ಸವಾಲು ಇಡಿ ಎಂದು ಹೇಳಿದರು.

2002ರಲ್ಲಿ ಏನಿದೆ ಅದನ್ನೆ ಬರೆಯಿಸಿ.ವಾರ್ಡನಲ್ಲಿ ಅಲ್ಪಸಂಖ್ಯಾತರು ದುಡಿಯುವುದಕ್ಕೆ ಬೇರೆಡೆ ಹೋಗುತ್ತಾರೆ.ಹಳ್ಳಿಯಲ್ಲಿ ಹೊಲಕ್ಕೆ ದುಡಿಯಲು ಹೋಗುತ್ತಾರೆ.ಆದ್ದರಿಂದ ಇದರ ಕುರಿತು ಜಾಗೃತಿ ಮೂಡಿಸಬೇಕು.ಎಸ್.ಐ.ಆರ್ ಅರ್ಜಿಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು.ದಿನಾಂಕ ಮತ್ತೆ ವಿಸ್ತರಣೆಯಾಗುವುದಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ,ಕೆಪಿಸಿಸಿಯಿಂದ ಆಗಮಿಸಿದ್ದ ಪೃಥ್ವಿರಾಜ,ರಜತ್ ತಾಂಬೆ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮತ್ತಿತರರು ಇದ್ದರು.

Latest News

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ;                                                                                          ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ; ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ‘ಡಿ’ ದರ್ಜೆ ಸಿಬ್ಬಂದಿ ಕುಸುಮಾ

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ:                          ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ: ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಾರ್ಗಿಲ್ ವೀರಯೋಧರ ಸ್ಮಾರಕ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮುದ್ದೇಬಿಹಾಳ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹೆಸರು ಹೇಳಿಕೊಂಡು ಸ್ಥಳೀಯ

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

ತಾಳಿಕೋಟಿ : ತಾಲ್ಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಮುದ್ದೇಬಿಹಾಳ ಹಾಗೂ ನಾಲತವಾಡ ಸಾರ್ವಜನಿಕ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ. ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಭಾರ ಅಧಿಕಾರದಲ್ಲಿದ್ದ ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಡಳಿತ ಪ್ರಭಾರ ಹುದ್ದೆಗೆ ವರ್ಗಾಯಿಸಿದ್ದು ಅಲ್ಲಿ ಪ್ರಭಾರ ಹುದ್ದೆಯಲ್ಲಿದ್ದ ಪ್ರಸೂತಿ ತಜ್ಞ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಮುದ್ದೇಬಿಹಾಳ : ಹುಚ್ಚು ನಾಯಿಯೊಂದು ಮನೆಯ ಮುಂದೆ ಮಲಗಿದ್ದ ರೈತನ ಮೇಲೆ ಭೀಕರವಾಗಿ ದಾಳಿ ಮಾಡಿ ಕಚ್ಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕಂದಗನೂರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕಂದಗನೂರ ಗ್ರಾಮದ ರೈತ ಮಕ್ತುಮಸಾಬ ರಹಿಮಾನಸಾಬ ಮೂಕಿಹಾಳ(೬೮) ಹುಚ್ಚು ನಾಯಿ ಕಡಿತದಿಂದ ಗಾಯಗೊಂಡಿರುವ ವ್ಯಕ್ತಿ.ಮನೆ ಮುಂದೆ ಮಲಗಿದ್ದಾಗ ಎಲ್ಲಿಂದಲೋ ಬಂದಿದ್ದ ಹುಚ್ಚು ನಾಯಿ ದಾಳಿ ಮಾಡಿದೆ.ಮನಬಂದAತೆ ರೈತನ ಹೊಟ್ಟೆ ಪಕ್ಕದಲ್ಲಿ,ಕೈಗೆ ಭೀಕರವಾಗಿ ಕಚ್ಚಿದೆ.ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಮಕ್ತುಮಸಾಬನನ್ನು ಮುದ್ದೇಬಿಹಾಳ ಸರಕಾರಿ