Ekadanta, come home to spend the Vighna of the devotees

ಭಕ್ತರ ವಿಘ್ನ ಕಳೆಯಲು ಮನೆಗೆ ಬಾ ಏಕದಂತ

ಭಕ್ತರ ವಿಘ್ನ ಕಳೆಯಲು ಮನೆಗೆ ಬಾ ಏಕದಂತ

ವಿಷೇಶ ಲೇಖನ: ರೇವಣಸಿದ್ದ ಬಗಲಿ

ಭಾರತೀಯರು ಹಬ್ಬ ಪ್ರೀಯರು. ಗಣೇಶ ಚತುರ್ಥಿ ಅನ್ನುವದು ರಾಷ್ಟ್ರೀಯ ಹಬ್ಬ. ಬ್ರೀಟಿಷರಿಗೆ ಭಾರತವನ್ನು ಬಿಟ್ಟು ತೊಲಗಿಸಲು ಅಂದು ನಮ್ಮ ನೆಚ್ಚಿನ ರಾಷ್ಟ್ರಾಭಿಮಾನಿಯಾದ ಬಾಲಗಂಗಾಧರ ತಿಲಕ ರವರು ಭಾರತೀಯರನ್ನು ಒಂದುಗೂಡಿಸುವ ಸಲ್ಲುವಾಗಿ ಈ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸುವ ಉತ್ಸವವನ್ನು ಪ್ರಾರಂಭಿಸಿದರು.

ಇನ್ನಷ್ಟು ‌ಸುದ್ದಿಗಳಿಗಾಗಿ ನಮ್ಮ‌ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಅಂದಿನಿಂದ ರಾಷ್ಟ್ರ ವ್ಯಾಪಿಯಾಗಿ ಪ್ರತಿವರ್ಷವೂ ಭಾದ್ರಪದ ಮಾಸದ ಚತುರ್ಥಿಯಂದು ಶಿವ-ಗೌರಿಸುತ್ತನಾದ ಗಣಪತಿಯನ್ನು ನಗರ-ಗ್ರಾಮೀಣ ಪ್ರದೇಶವೆನ್ನದೇ ಎಲ್ಲಡೇಯೂ ಭಕ್ತಿ ಪೂರ್ವಕವಾಗಿ ಆರಾಧನೆ ಮಾಡುವುದು ಜೋರಾಗಿರುತ್ತದೆ.

ಗಣೇಶ ಚತುರ್ಥಿ ಬಂದರೆ ಸಾಕು ಪಟ್ಟಣವೇಲ್ಲ ವಿಘ್ನೇಶನ ಆರಾಧನೆಯಲ್ಲಿ ಮಗ್ನಗೊಳುವದು. ಅದರಲ್ಲೂ ಚಿಕ್ಕ ಪುಟ್ಟ ಮಕ್ಕಳಿಗಂತು ಗಣೇಶ ಕೂರಿಸುವದು ಒಂದು ಸಡಗರ ಹಾಗೂ ಸಂಭ್ರಮದ ಹಬ್ಬವಾಗಿದೆ. ಪ್ರತಿ ವರ್ಷವೂ ಪಟ್ಟಣದಲ್ಲಿ ನೂರಾರೂ ಕಡೆಗಳಲ್ಲಿ ವಿಘ್ನ ನಿವಾರಕನನ್ನು ಕೂಡಿಸುವದು ಸರ್ವೆ ಸಾಮಾನ್ಯ.

ಈ ಬಾರಿಯೂ ವ್ಯಾಪಾರಿ ನಗರಿ ಚಡಚಣ ಪಟ್ಟಣದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಗಣೇಶನ ಮೂರ್ತಿಯನ್ನು ಮನೆ, ಗಲ್ಲಿ, ಸರ್ಕಾರಿ ಕಛೇರಿ, ಸಂಘ-ಸಂಸ್ಥೆ, ಪ್ರಮುಖ ಬಿದಿಗಳಲ್ಲಿ ಐದು ದಿನ, ಏಳು ದಿನ, ಒಂಬತ್ತು ದಿನ ಹೀಗೆ ಆಯಾ ಮಂಡಳಿಗಳು ಪ್ರತಿಷ್ಠಾಪಿಸಿ ಮೋದಕ ಪ್ರೀಯ ಗಣೇಶನಿಗೆ ವಿಶೇಷ ತಿಂಡಿ ಕಡಬು, ಲಾಡು, ಗರಿಕೆ, ಹಣ್ಣು ಹಂಪಲ್‌ಗಳು ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಲಾಗುವುದು.

ಭಾದ್ರಪದ ಶುಕ್ಲದ ಚೌತಿಯಂದು ಹಸ್ತಾ ನಕ್ಷತ್ರವಿರುವ ದಿನವೇ ಗಣೇಶ ಚತುರ್ಥಿ ದಿವಸ. ಈ ದಿವಸ ಶಿವ-ಗೌರಿ ದಂಪತಿಗಳಿಗೆ ವಿನಾಯಕನಾಗಿ ಜನಿಸಿದ ಗಣೇಶನ ಹುಟ್ಟಿದ ದಿನ. ಈ ದಿನವನ್ನು ಕರ್ನಾಟಕ, ಮಹಾರಾಷ್ಟ್ರ ಎನ್ನದೇ ಭಾರತದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಗಣೇಶನನ್ನು ಕೂರಿಸಿ, ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.

ನಮ್ಮ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಂತು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಗಣೇಶನನ್ನು ಕೂರಿಸಿ, ನಿತ್ಯವೂ ರಾತ್ರಿ ಒಂದೊಂದು ತರಹದ ಮನರಂಜನೆ, ನಾಟಕ, ಡ್ಯಾನ್ಸ್, ಹಾಡು, ಮಿಮಿಕ್ರೀಗಳು ಗಣೇಶ ಮಂಡಳಿಯವರು ಆಯೋಜಿಸುತ್ತಾ ಜನರನ್ನು ಭೇದ-ಭಾವವಿಲ್ಲದೇ ಒಂದೂಗೂಡಿಸುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಸಂಭ್ರಮಿಸುವ ಜತೆಯಲ್ಲಿ ಕೊನೆಯ ದಿನದಂದು ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಯೆಯೂ ಮಾಡುವವರು.

ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಗಣಪತಿ ಊರೋಳಗಡೆ ಕುಳಿತರೆ, ಜನರು ತಮ್ಮ ಮನೆಗಳಲ್ಲಿ ಪುಟ್ಟ ಪುಟ್ಟ ವಿನಾಯಕನ್ನು ಕೂರಿಸಿ ಹಬ್ಬವನ್ನು ಎಲ್ಲ ಹಬ್ಬಕ್ಕಿಂತ ವಿಜೃಂಭಣೆಯಿಂದ ಆಚರಿಸುವರು.

ಈ ಬಾರಿ ಪ್ರತಿಯೊಬ್ಬರೂ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗಣಪನ ಮೂರ್ತಿ ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿ, ಶಾಂತಿಯುತ ಹಬ್ಬವನ್ನು ಆಚರಣೆ ಮಾಡುವಂತಾಗಲಿ ಎನ್ನುವದು ನನ್ನ ಆಶಯ.

Latest News

ಮುದ್ದೇಬಿಹಾಳ : ಆ.22 ರಂದು ಜಾನಪದ ಪರಿಷತ್ ಘಟಕ ಉದ್ಘಾಟನೆ

ಮುದ್ದೇಬಿಹಾಳ : ಆ.22 ರಂದು ಜಾನಪದ ಪರಿಷತ್ ಘಟಕ ಉದ್ಘಾಟನೆ

ಮುದ್ದೇಬಿಹಾಳ : ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ,ಜನಪದ ಕರಗ

‘ಕಾಲುವೆಗೆ ನೀರು ಬಿಡಿ,ಇಲ್ಲವೇ ಸಾಯಲು ವಿಷ ಕೊಡಿ’

‘ಕಾಲುವೆಗೆ ನೀರು ಬಿಡಿ,ಇಲ್ಲವೇ ಸಾಯಲು ವಿಷ ಕೊಡಿ’

ಮುದ್ದೇಬಿಹಾಳ : ಬರಗಾಲ ಬಿದ್ದಿದೆ.ಹೊಲದಲ್ಲಿ ಬಿತ್ತಿರುವ ಬೆಳೆಗಳು ಒಣಗಿ ಹೋಗುತ್ತಿವೆ.ದನ-ಕರುಗಳಿಗೆ ಕುಡಿಯಲು ನೀರಿಲ್ಲ. ಹೊಲಕ್ಕೆ

ಕಲಾವಿದ,ಶಿಕ್ಷಕ ಗೋಪಾಲ ಹೂಗಾರ ಮಾದರಿ ನಡೆ: ಜನುಮದಿನದ ನಿಮಿತ್ಯ  ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್

ಕಲಾವಿದ,ಶಿಕ್ಷಕ ಗೋಪಾಲ ಹೂಗಾರ ಮಾದರಿ ನಡೆ: ಜನುಮದಿನದ ನಿಮಿತ್ಯ ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್

ಮುದ್ದೇಬಿಹಾಳ : ಹಾಸ್ಯ ಕಲಾವಿದ ,ಶಿಕ್ಷಕ ಗೋಪಾಲ ಎನ್.ಹೂಗಾರ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುವ

ಹೈಕೋರ್ಟ್ ಕದ ತಟ್ಟಿದ್ದ ನಾಲ್ವರಿಗೂ ಗೆಲುವು:       ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆ ಫಲಿತಾಂಶ ಪ್ರಕಟ

ಹೈಕೋರ್ಟ್ ಕದ ತಟ್ಟಿದ್ದ ನಾಲ್ವರಿಗೂ ಗೆಲುವು: ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆ ಫಲಿತಾಂಶ ಪ್ರಕಟ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯ ಫಲಿತಾಂಶ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪೊಲೀಸ  ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಎಎಸ್ಐ ಎಂ.ಪಿ.ಹೋಕಳೆ, ಪೊಲೀಸ ಸಿಬ್ಬಂದಿ ಬಸವರಾಜ ಸಜ್ಜನ ಹಾಗೂ ತಂಗಡಗಿ ಗ್ರಾಮದ ವಿಕಾಸ ಕಮಲಾಪೂರ ಹಾಗೂ ಬಂಡಿನಾಥ ಕಮಲಾಪೂರ ,ರವಿ ಹಾಲ್ಯಾಳ ಅವರನ್ನು ಸನ್ಮಾನಿಸಲಾಯಿತು. ಎಎಸ್ಐ ಎಂ.ಪಿ.ಹೋಕಳೆ ಧ್ವಜಾರೋಹಣ ಮಾಡಿದರು.ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ, ಮುಖಂಡರಾದ ರಾಜುಗೌಡ ಕೊಂಗಿ,ಸ್ನೇಹಸಿರಿ ಸೇವಾ ಸಂಘದ ಸಂಚಾಲಕ ಬಸವರಾಜ ನಿಡಗುಂದಿ ಸೇರಿದಂತೆ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು ಸರ್ಕಾರದ ಹೆಸರಿಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ದೇವರ ದಯೆಯಿಂದ ಮಹಾರಾಷ್ಟçದಲ್ಲಿ ಮಳೆಯಾಗಿ ಆಲಮಟ್ಟಿ ಡ್ಯಾಂಗೆ ನೀರು ಬಂದಿದೆ. ಕುಡಿಯಲು, ಜಾನುವಾರುಗಳಿಗೆ,ಸ್ವಲ್ಪ ಬೆಳೆಗಳಿಗೆ ಬಳಸಿಕೊಳ್ಳಲು ಅನುಕೂಲವಾಗಿದೆ.ಆದರೆ ಕೆಲವರು ನೆಪಕ್ಕೋಸ್ಕರ ಆಡಳಿತ