ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು ನಿಲ್ಲಿಸಬೇಕು.ಹಾಗೊಂದು ವೇಳೆ ಸಾಕ್ಷಿ ಏನಾದರೂ ಇದ್ದರೆ ನನ್ನ ತಲೆ ನಾನೇ ತಗೆದುಕೊಳ್ಳಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆ ಅಯೋಗ್ಯನ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ.ಅಷ್ಟೇ ಅಲ್ಲದೇ ಕಾಂಗ್ರೆಸ್, ಬಿಜೆಪಿಯಲ್ಲಿರುವಾಗಲೂ ಟಿಕೇಟ್ ಕೇಳುವ ಸಂದರ್ಭ ಬಂದಾಗ ಜಿಲ್ಲೆಯ ಯಾವ ನಾಯಕನ ಮನೆಗೂ ನಾನು ಹೋಗಿಲ್ಲ.ಏಕಚವನದಲ್ಲಿ ಮಾತನಾಡಬೇಡಿ ಎಂದಿರುವುದನ್ನು ಒಪ್ಪಿಕೊಳ್ಳುತ್ತೇನೆ.ಆದರೆ ಸುಳ್ಳು ಹೇಳುವುದನ್ನು ಮೊದಲು ನಾಡಗೌಡರು ನಿಲ್ಲಿಸಬೇಕು.ನಿಮಗಷ್ಟೇ ಕಾರ್ಯಕರ್ತರು,ಹಿಂಬಾಲಕರಿದ್ದಾರೆಯೇ ನಮ್ಮ ಕಾರ್ಯಕರ್ತರು,ಹಿಂಬಾಲಕರೇನು ಸುಮ್ಮನೆ ಕೂರುತ್ತಾರೆಯೇ ಎಂದು ನಡಹಳ್ಳಿ ಹೇಳಿದರು.

ನಾಡಗೌಡರ ಮನೆತನ ಬ್ರಿಟಿಷರ ಗುಲಾಮರಾಗಿತನದಲ್ಲಿತ್ತು.1932ರಲ್ಲಿ ಹಿಂದೆ ಇದ್ದ ಎಲ್ಲ ದಾಖಲೆಗಳು ಇವರ ವಶದಲ್ಲಿದ್ದವು.ಆಗ ದಾಖಲೆಗಳನ್ನು ತಿದ್ದಿ 20 ಸಾವಿರ ಎಕರೆ ಜಮೀನು ಲಪಟಾಯಿಸಿದ್ದರು.ಬಹಿರಂಗ ಚರ್ಚೆಗೆ ಬಂದಲ್ಲಿ ಎಲ್ಲ ದಾಖಲೆಗಳನ್ನು ತೆರೆದಿಡುವುದಕ್ಕೆ ನಾನು ಸಿದ್ದನಿದ್ದೇನೆ.ನಾನು ದ್ವೇಷದ ರಾಜಕಾರಣ ಎಂದಿಗೂ ಮಾಡಿಲ್ಲ.ಟ್ರಿಬ್ಯೂನಲ್ ದಾಖಲೆಗಳು ನಿಮ್ಮ ಮನೆಗೆ ತಗೆದುಕೊಂಡು ಹೋಗಬೇಕಿತ್ತೇ ಎಂದು ಪ್ರಶ್ನಿಸಿದ ನಡಹಳ್ಳಿ, 1932ರಲ್ಲಿ ನಂತರ ದೇವರಾಜು ಅರಸು ಅವರು ಊಳುವವನೆ ಭೂ ಒಡೆಯ ಎಂದು ಕಾಯ್ದೆ ಜಾರಿಗೆ ತಂದಾಗ ನಾವು ದಾನ ಮಾಡಿದ್ದೇವೆ ಎಂದು ಹಳ್ಳಿಗಳಲ್ಲಿ ರೈತರಿಗೆ ಹೇಳಿಕೊಂಡು ನಂತರ ಅವರ ಮೇಲೆ ದೌರ್ಜನ್ಯ ನಡೆಸಿ ವಾಪಸ್ ಜಮೀನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ನಾಲತವಾಡದಲ್ಲಿ ದೇಶಮುಖ ಅಮ್ಮನವರ ಜಮೀನು ಮಾರಾಟಕ್ಕಿದೆ ಎಂದಿದ್ದರು.ಅದನ್ನು ನಮಗೆ ಪರಿಚಿತರಿರುವ ಯಲಗೂರಿನ ಶೆಟ್ಟರೊಬ್ಬರು ಖರೀದಿ ಮಾಡಿದ್ದಾರೆ.ಅದು ಬೇನಾಮಿ ಅಲ್ಲ.ಅದು ಕೂಡಾ ಟೆಂಡೆನ್ಸಿಯಲ್ಲಿದೆ ಎಂದು ನಾಡಗೌಡರು ಹೇಳುತ್ತಾರೆ.ಮತ್ತೊಂದೆಡೆ ಚುನಾವಣೆಯಲ್ಲಿ ದೇಶಮುಖರ ಮಕ್ಕಳ ಎದುರಿಗೆ ಮತ ಭಿಕ್ಷೆ ಕೇಳಲು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಳಿಕೋಟಿ ಪ್ರಜಾಸೌಧ ವಿವಾದ : ತಾಳಿಕೋಟಿಯಲ್ಲಿ ಶಾಸಕ ನಾಡಗೌಡರು ತಮ್ಮ ಹಿಂಬಾಲಕರ ಮೂಲಕ 40 ಎಕರೆ ಜಮೀನು ತಗೆದುಕೊಂಡಿದ್ದು ಅದರಲ್ಲಿ ಪ್ರಭುಗೌಡ ಮದರಕಲ್ ಎಂಬುವರು ಹಾಗೂ ಇನ್ನಿತರರು ಎರಡು ಎಕರೆ ಕೊಡುವುದಾಗಿ ಹೇಳುತ್ತಿದ್ದಾರೆ.ಆದರೆ ಆ ಜಾಗೆಯ ಅಭಿವೃದ್ಧಿಗೆ ಸರ್ಕಾರದಿಂದ 8 ಕೋಟಿ ರೂ. ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಸರ್ಕಾರದ ಹಣದಲ್ಲಿ ಇವರ ಜಮೀನು ಅಭಿವೃದ್ಧಿಗೊಳಿಸುವುದಕ್ಕೆ ನಾವು ಬಿಡುವುದಿಲ್ಲ.ನಿಮಗೆ ತಾಕತ್ತು ಇದ್ದರೆ ನನ್ನ ಮೇಲೆ ಮಾನಹಾನಿ ಕೇಸು ಹಾಕಿ ಎಂದು ಹಾಲಿ ಶಾಸಕ ನಾಡಗೌಡರಿಗೆ ಮಾಜಿ ಶಾಸಕ ನಡಹಳ್ಳಿ ಸವಾಲು ಹಾಕಿದರು.

ನಾಡಗೌಡರಿಗೆ ಊರಲ್ಲಿ ಪ್ರಜಾಸೌಧ ನಿರ್ಮಿಸಬೇಕು ಎಂಬ ಬಗ್ಗೆ ಎಳ್ಳಷ್ಟು ಆಸಕ್ತಿ ಇಲ್ಲ.ಊರಲ್ಲಿ ಆಗುವುದು ಅವರಿಗೆ ಬೇಕಾಗಿಲ್ಲ.ಪ್ರಭುಗೌಡ ಮದರಕಲ್ ಹಾಗೂ ಇನ್ನೊಂದಿಬ್ಬರ ಹೆಸರಿನಲ್ಲಿ ನಾಡಗೌಡರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಇಡೀ ತಾಳಿಕೋಟಿ ಜನ ಹೇಳುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.

ತಾಳಿಕೋಟಿ ಜನ ಮುದ್ದೇಬಿಹಾಳಕ್ಕೆ ಬರುತ್ತಿದ್ದರು.ಮೂರುವರೆ ಕಿ.ಮೀ ಹೋಗುವುದು ದೊಡ್ಡದೇ ಎನ್ನುತ್ತಿದ್ದಾರೆ.ಪ್ರಜಾಸೌಧ ನಿರ್ಮಾಣಕ್ಕೆ ಎರಡುವರೆ ಎಕರೆ ಜಮೀನು ಬೇಕು ಎಂದು ರೂಲ್ಸ್ ಇದೆಯಾ? ಯಾರು ಕೊಡುತ್ತಾರೆ ಊರಲ್ಲಿ ಅಷ್ಟು ಜಮೀನು. ಎಕರೆ ಜಮೀನು ಐದು-ಹತ್ತು ಕೋಟಿ ರೂ.ಆಗಿದೆ.ಐಬಿ,ಪುರಸಭೆ,ಕೆಇಬಿ ಜಾಗೆ ಇದೆ.ಅಲ್ಲಿ ಪ್ರಜಾಸೌಧ ಮಾಡಿ.ನನಗೆ ಧಮಕಿ ಕೊಡಲು ಬಂದರೆ ಹತ್ತು ಪಟ್ಟು ಧಮಕಿ ಕೊಡುವ ದಾಖಲಾತಿಗಳು ನನ್ನ ಬಳಿ ನಿಮ್ಮವರೇ ತಂದುಕೊಟ್ಟಿದ್ದಾರೆ.

ಮುದ್ದೇಬಿಹಾಳ,ವಿಜಯಪುರ ಮೊದಲಾದ ಹುಡ್ಕೋಗಳಲ್ಲಿ ನೀವು ಎಷ್ಟು ಹಗರಣ ಮಾಡಿದ್ದೀರಿ.ಇವರ ಅಧ್ಯಕ್ಷತೆಯಲ್ಲಿರುವ ಕೆಎಸ್‌ಡಿಎಲ್ ನಿಗಮದಲ್ಲಿ ಎಷ್ಟೆಲ್ಲ ಟೆಂಡರ್ ಅವ್ಯವಹಾರಗಳಿವೆ ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದು ನಡಹಳ್ಳಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ , ಗಿರೀಶಗೌಡ ಪಾಟೀಲ್ , ಮದನಸ್ವಾಮಿ, ಕೆಂಚಪ್ಪ ಬಿರಾದಾರ, ವೈ.ಟಿ. ಗೌಡರ, ಅಶೋಕ ರಾಥೋಡ,ಸಿದ್ದರಾಜ ಹೊಳಿ , ಬಸವರಾಜ
ಚಿತ್ತರಗಿ , ಚೇತನ ಸಂಗಮ, ಪುರಸಭೆ ಮಾಜಿ ಸದಸ್ಯೆ ಸಹನಾ ಬಡಿಗೇರ , ಸಂಗಮ್ಮ ದೇವರಳ್ಳಿ,ಅಪ್ಪಣ್ಣ ಧನ್ನೂರ , ಶ್ರೀಶೈಲ್ ದೊಡಮನಿ,ಮಲ್ಲಣ್ಣ ತಂಗಡಗಿ, ಹರೀಶ ನಾಟೀಕಾರ , ಮಹಾಂತೇಶ್ ಗಂಗನಗೌಡರ,ನಾಗೇಶ ಕವಡಿಮಟ್ಟಿ,ಸಂತೋಷ್ ಗೌಡರ ಮೊದಲಾದವರು ಇದ್ದರು.

ಕಲೆಕ್ಷನ್ ಏಜೆಂಟ್ ಸುರೇಶ ನಾಡಗೌಡ : ನಡಹಳ್ಳಿ ವಾಗ್ದಾಳಿ ನಿಮ್ಮ ಸಾಕು ಪುತ್ರ, ರಾಜಕೀಯವಾಗಿ ಕಲೆಕ್ಷನ್ ಮಾಡುವ ಸಾಕು ಪುತ್ರ. ಕಲೆಕ್ಷನ್ ಏಜೆಂಟ್ ಸುರೇಶ ನಾಡಗೌಡ ಆಗಿದ್ದಾರೆ.ತಾಲ್ಲೂಕಿನ ಎಲ್ಲ ಕೆಲಸಗಳನ್ನು ಲ್ಯಾಂಡ್ ಆರ್ಮಿಯವರಿಗೆ ಕೊಟ್ಟು ಕಲೆಕ್ಷನ್ ಎಜೆಂಟ್ ಆಗಿ ಸುರೇಶ ನಾಡಗೌಡ ಕೆಲಸ ಮಾಡುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.ಪ್ರಜಾಸೌಧ ಹೋರಾಟಕ್ಕೆ ಬಂದವರಿಗೆಲ್ಲರಿಗೂ ಪುರಸಭೆಯಿಂದ ಮುಖ್ಯಾಧಿಕಾರಿ ನೋಟಿಸ್ ಕೊಡುತ್ತಿದ್ದಾರೆ. ಅಲ್ಲಿ ಪ್ರಭುಗೌಡ ಮದರಕಲ್ ಅಂಗಡಿಕಾರರಿಗೆ ಕರೆ ಮಾಡಿ ನೀವು ಒತ್ತುವರಿ ಮಾಡಿಕೊಂಡು ಅಂಗಡಿ ಕಟ್ಟಿಕೊಂಡಿಲ್ಲವೇ ಎಂದು ಫೋನ್ ಮಾಡಿ ಹೋರಾಟಗಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಡಹಳ್ಳಿ ಹೇಳಿದರು. ಶಾಸಕ ನಾಡಗೌಡ ಒಬ್ಬ ಚಾಡಿಕೋರರು: ಕಾಂಗ್ರೆಸ್ಸಿನಲ್ಲಿದ್ದಾಗ ನಾಲ್ಕಾರು ಜನ ಶಾಸಕರು ಒಂದೆಡೆ ಸೇರಿ ಮಾತನಾಡುತ್ತಿರುವಾಗ ಅಲ್ಲಿಗೆ ನಾಡಗೌಡರು ಬಂದರೆ ಎಲ್ಲರೂ ಸುಮ್ಮನಿರಿ ಚಾಡಿಕೋರ ಬಂದರು ಎನ್ನುತ್ತಿದ್ದರು.ಚಾಡಿ ಹೇಳುವುದರಲ್ಲಿ ಇವರು ನಂ.1 ಆಗಿದ್ದಾರೆ ಎಂದು ನಡಹಳ್ಳಿ ಟೀಕಿಸಿದರು.

ಗುಲಾಮಗಿರಿತನ ಆಡಳಿತ ಕೊನೆಗೊಳಿಸುವುದಕ್ಕೆ ನಾನು ಇಲ್ಲಿಗೆ ರಾಜಕಾರಣ ಮಾಡುವುದಕ್ಕೆ ಬಂದಿದ್ದೇನೆ.ನನ್ನ ರಾಜಕಾರಣ ಯಾವತ್ತಿದ್ದರೂ ನಿಮ್ಮ ವಿರುದ್ದವೇ ? ಯಾವತ್ತಿಗೂ ನಾಡಗೌಡರೊಂದಿಗೆ ರಾಜಕಾರಣದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ.ಅಲ್ಲದೇ ತಾಳಿಕೋಟಿಯಲ್ಲಿ ಈಗ ನೀವು ಬೇನಾಮಿಯಾಗಿ ಗಳಿಸಿರುವ ಆಸ್ತಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ನಡಹಳ್ಳಿ ಹೇಳಿದರು.

Latest News

ಮಾ.20 ರಂದು ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ,ಸಾಮೂಹಿಕ ವಿವಾಹ

ಮಾ.20 ರಂದು ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.20 ರಂದು

ಮಾ.21 ರಂದು ಖಿಲಾರಹಟ್ಟಿಯಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ

ಮಾ.21 ರಂದು ಖಿಲಾರಹಟ್ಟಿಯಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಯುಗಾದಿ ಹಬ್ಬದ ನಿಮಿತ್ಯ ತಾಲೂಕಿನ ಖಿಲಾರಹಟ್ಟಿ ಗ್ರಾಮದ ಕಾಡಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ

ಮಾ.19 ರಿಂದ ಬೈಲಕೂರ ಬೈಲಾದ್ರೇಶ್ವರ ಜಾತ್ರೋತ್ಸವ

ಮಾ.19 ರಿಂದ ಬೈಲಕೂರ ಬೈಲಾದ್ರೇಶ್ವರ ಜಾತ್ರೋತ್ಸವ

ಮುದ್ದೇಬಿಹಾಳ : ತಾಲ್ಲೂಕಿನ ಬೈಲಕೂರ ಗ್ರಾಮದ ಬೈಲಾದ್ರೇಶ್ವರ ಜಾತ್ರಾ ಮಹೋತ್ಸವ ಮಾ.19 ರಿಂದ 21ರವರೆಗೆ

SSLC ಪರೀಕ್ಷೆ : ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದ ವಿದ್ಯಾರ್ಥಿನಿ

SSLC ಪರೀಕ್ಷೆ : ಶಿಕ್ಷಣ ಸಚಿವರಿಗೆ ಅಭಿನಂದನೆ ತಿಳಿಸಿದ ವಿದ್ಯಾರ್ಥಿನಿ

ಮುದ್ದೇಬಿಹಾಳ : ಪಟ್ಟಣದ ಐದು ಪರೀಕ್ಷಾ ಕೇಂದ್ರಗಳು ಸೇರಿದಂತೆ ಮುದ್ದೇಬಿಹಾಳ,ತಾಳಿಕೋಟಿ,ನಾಗರಬೆಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಮೊದಲ

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಮುದ್ದೇಬಿಹಾಳ : ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ನಡೆದ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ ಗೋನಾಳ ಪ್ರತಿಷ್ಠಾನ ಹಾಗೂ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ 16ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷರು,ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ :                   ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ : ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ಮುದ್ದೇಬಿಹಾಳ : ನಗರ ಪ್ರದೇಶಗಳಲ್ಲಾದರೆ ಸಂಸ್ಥೆಗಳು ಕೇಳಿದಷ್ಟು ಶುಲ್ಕ ಕೊಡಲು ಪಾಲಕರು ಸಿದ್ಧರಿರುತ್ತಾರೆ.ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವುದು ದೊಡ್ಡ ಮಾತಲ್ಲ.ಆದರೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಅಲ್ಲಿ ಮಕ್ಕಳಿಗೆ ಶಿಕ್ಷಣವೇ ಪ್ರಧಾನವಾಗಿ ಕೊಡುವ ಸಂಸ್ಥೆಗಳನ್ನು ಬೆಳೆಸುವುದು ಸಾಹಸದ ಕಾರ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಹೇಳಿದರು. ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ