ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಕವಚ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಮಹತ್ವದ ಸುಳಿವು ದೊರಕಿದ್ದು ಶೀಘ್ರದಲ್ಲಿ ಪ್ರಕರಣವನ್ನು ಬೇಧಿಸಲಾಗುವುದು ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ್ ಹೇಳಿದರು.

ತಾಲ್ಲೂಕಿನ ಬಸರಕೋಡ ಗ್ರಾಮದ ಐತಿಹಾಸಿಕ ಶ್ರೀ ಪವಾಡ ಬಸವೇಶ್ವರ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ದೇವಸ್ಥಾನದ ಕರ್ತೃಗದ್ದುಗೆ ಮೇಲಿನ 32 ಕೆಜಿ ಬೆಳ್ಳಿಯ ಕವಚ ಕಳ್ಳತನ ಪ್ರಕರಣದ ಕುರಿತು ವಿಜಯಪುರ ಎಸ್ಪಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿoದ ಮಾಹಿತಿ ಪಡೆದುಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಹಲವು ತಂಡಗಳನ್ನು ರಚನೆ ಮಾಡಿದ್ದು ಪ್ರಕರಣದಲ್ಲಿ ಕಳ್ಳರ ಬಗ್ಗೆ ಮಹತ್ವದ ಮಾಹಿತಿ ದೊರಕಿದೆ.ಶೀಘ್ರದಲ್ಲಿ ಕಳ್ಳರನ್ನು ಪತ್ತೆ ಮಾಡಲಾಗುವುದು ಹಾಗೂ 32 ಕೆಜಿಯ ಬೆಳ್ಳಿಯ ಪ್ರತಿಮೆ ಸಹ ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಲಕ್ಷಾಂತರ ಭಕ್ತರನ್ನು ಹೊಂದಿರುವ ಪವಾಡ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆದಷ್ಟು ತ್ವರಿತವಾಗಿ ಕಳ್ಳರ ಬಂಧನವಾಗಲಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕ ಶ್ರೀಶೈಲ್ ಮೇಟಿ ಮಾತನಾಡಿ, ನಮ್ಮ ಊರಿನ ಆರಾಧ್ಯ ದೈವ ಪವಾಡ ಬಸವೇಶ್ವರರ ಬೆಳ್ಳಿ ಕವಚ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಅವರು ಹೇಳಿರುವ ಮಾತುಗಳು ನಮಗೆ ಸಮಾಧಾನ ತಂದಿವೆ.ಇಲಾಖೆ ಮೇಳೆ ಭಕ್ತರು,ಆಡಳಿತ ಮಂಡಳಿ ವಿಶ್ವಾಸ ಇರಿಸಿದ್ದೇವೆ.ಆದಷ್ಟು ಶೀಘ್ರ ಕಳ್ಳರು ಪತ್ತೆಯಾಗುವ ವಿಶ್ವಾಸ ನಮಗೂ ಇದೆ ಎಂದು ಹೇಳಿದರು.

ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಮಾತನಾಡಿ, ದೇವಾಲಯದ ಸುರಕ್ಷತಾ ದೃಷ್ಟಿಯಿಂದ ದೇವಾಲಯದಲ್ಲಿ ಇರುವ 20 ಸಿಸಿ ಕ್ಯಾಮೆರಾಗಳ ಜೊತೆಗೆ ಹೆಚ್ಚುವರಿಯಾಗಿ ಮತ್ತೆ 15 ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ದೇವಾಲಯಕ್ಕೆ ಎರಡು ಹೊಸ ಕಬ್ಬಿನ ಗೇಟಗಳನ್ನು ಗ್ರೀಲ್ ಅಳವಡಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ನೇಮಕ ಹಾಗೂ ಸ್ಟ್ರಾಂಗ್ ರೂಂ ಮಾಡಲಾಗುವುದು ಎಂದು ಹೇಳಿದರು. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ,ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ ,ಸಿಪಿಐ ಮೊಹ್ಮದಫಸಿವುದ್ದೀನ್,ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ,ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಎಸ್.ಎಸ್. ಹಂಡರಗಲ್ಲ,ಬಿ.ಎಸ್.ಬೈಲಗೊoಡ,ಮುಖoಡ ಅಪ್ಪುಧಣಿ ನಾಡಗೌಡ, ವೀರೇಶ ಮಂಕಣಿ ಮೊದಲಾದವರು ಇದ್ದರು.

ಪವಾಡ ಬಸವನ ಮೂರ್ತಿಯೇ ಬಂತೆoದು ಓಡೋಡಿ ಬಂದ ಭಕ್ತರು:
ದೇವಸ್ಥಾನಕ್ಕೆ ಐಜಿಪಿ ಅವರು ಭೇಟಿ ಕೊಡುವ ವಿಷಯ ತಿಳಿಯದೇ ಹಲವರು ಐದಾರು ಪೊಲೀಸರ ವಾಹನಗಳು ಗಡಿಬಿಡಿಯಲ್ಲಿ ದೇವಸ್ಥಾನದತ್ತ ಬಂದಿದ್ದನ್ನು ಕಂಡ ಭಕ್ತರು, ತಮ್ಮೂರಿಗೆ ಕಳ್ಳತನವಾದ ಪವಾಡ ಬಸವೇಶ್ವರನ ಬೆಳ್ಳಿ ಕವಚವೇ ಸಿಕ್ಕಿದೆ ಎಂಬ ಸುದ್ದಿ ಹರಡಿ ದೇವಸ್ಥಾನದತ್ತ ಭಕ್ತರು ಓಡೋಡಿ ಬಂದರು.ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಂಡು ದೇವರ ಮೂರ್ತಿ ದೊರೆಯಲಿದೆ ಎಂಬ ಆಶಾಭಾವವನ್ನು ಭಕ್ತರು ವ್ಯಕ್ತಪಡಿಸಿದರು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,