ಉತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ-ಡಾ.ರಂಗನಾಥ ವೈದ್ಯ

ಉತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ-ಡಾ.ರಂಗನಾಥ ವೈದ್ಯ

ಮುದ್ದೇಬಿಹಾಳ : ಸಾರ್ವಜನಿಕರಿಗೆ ನಮ್ಮಿಂದ ಸಾಧ್ಯವಷ್ಟರ ಮಟ್ಟಿಗೆ ಉತ್ತಮ ಸೇವೆ ನೀಡಲು ಶ್ರಮಿಸುತ್ತೇವೆ.ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಬರೆದುಕೊಡುವುದು ಅನಿವಾರ್ಯವಾಗುತ್ತದೆ.ಇಂತಹ ಸಮಯದಲ್ಲಿ ನಾಗರಿಕರು ಆರೋಗ್ಯ ಇಲಾಖೆ ವೈದ್ಯರು,ಸಿಬ್ಬಂದಿಯೊAದಿಗೆ ಸಂಯಮದಿAದ ನಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ.ರಂಗನಾಥ ವೈದ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ರಕ್ಷಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಮೊದಲಿನಂತೆ ಈಗ ವೈದ್ಯಕೀಯ ಸೇವೆ ಅಷ್ಟೊಂದು ಸುಲಭದ್ದಾಗಿಲ್ಲ.ಆದರೆ ಸರ್ಕಾರ ಒದಗಿಸಿರುವ ಸೌಲಭ್ಯಗಳಿಂದ ಜನರಿಗೆ ಉತ್ತಮ ಸೇವೆ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ, ಅತ್ಯಂತ ಕ್ರಿಯಾಶೀಲ ಹಾಗೂ ಪ್ರಸೂತಿ ವಿಭಾಗದಲ್ಲಿ ಉತ್ತಮ ಹೆಸರು ಮಾಡಿರುವ ಡಾ.ರಂಗನಾಥ ಅವರು ನಮ್ಮ ಆಸ್ಪತ್ರೆಗೆ ಆಗಮಿಸಿರುವುದು ಸಂತಸದ ಸಂಗತಿಯಾಗಿದ್ದು ಬಡವರಿಗೆ ಒಳ್ಳೆಯ ಸೇವೆ ನೀಡಲು ಮತ್ತಷ್ಟು ಶ್ರಮಿಸುತ್ತೇವೆ ಎಂದರು.

ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ.ವಿಜಯಕುಮಾರ ಗೂಳಿ ಮಾತನಾಡಿ,ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಏನೆಲ್ಲಾ ಸೇವೆ ಲಭ್ಯವಿದೆಯೋ ಅದನ್ನು ಒದಗಿಸುವುದಕ್ಕೆ ಆರೋಗ್ಯ ಇಲಾಖೆಯೊಂದಿಗೆ ನಾವೆಲ್ಲ ಕೈಜೋಡಿಸುತ್ತೇವೆ.ಇನ್ನೂ ಅಗತ್ಯವಿರುವ ಅನುದಾನವನ್ನು ಶಾಸಕರ ಗಮನಕ್ಕೆ ತಂದು ಒದಗಿಸಲು ಪ್ರಯತ್ನಿಸುತ್ತೇವೆ.ಆದರೆ ಸರ್ಕಾರಿ ಆಸ್ಪತ್ರೆಯ ಹೆಸರು ಒಳ್ಳೆಯ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ವೈದ್ಯಕೀಯ ಸಿಬ್ಬಂದಿ ಮೇಲಿದೆ ಎಂದರು.

ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಖ್ಯಾತ ಪ್ರಸೂತಿ ತಜ್ಞ ಡಾ.ರಂಗನಾಥ ವೈದ್ಯರವರು ಆಗಮಿಸಿರುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲವಾಗಲಿದೆ.50-60 ಸಾವಿರ ರೂ.ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ಹೆರಿಗೆ ಮಾಡಿಸಿಕೊಂಡು ಬರುವ ಶಕ್ತಿ ಇಲ್ಲದವರಿಗೆ ಮುದ್ದೇಬಿಹಾಳ ಆಸ್ಪತ್ರೆಯ ಪ್ರಸೂತಿ ವಿಭಾಗ ಸಂಜೀವಿನಿಯAತೆ ಕೆಲಸ ಮಾಡಲಿದೆ.ಮುದ್ದೇಬಿಹಾಳದ ಸುತ್ತಮುತ್ತಲಿನ ಜನರು ಹೆರಿಗೆಗಾಗಿ ವಿಜಯಪುರ,ಬಾಗಲಕೋಟೆಗೆ ತೆರಳುವ ಬದಲು ತಾಲ್ಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಇನ್ನು ಮುಂದೆ ದೊರೆಯುವ ಆಶಾಭಾವನೆ ವ್ಯಕ್ತವಾಗಿದೆ.ಸಾರ್ವಜನಿಕರು ಸರಕಾರಿ ಆಸ್ಪತ್ರೆ ವೈದ್ಯರು,ಸಿಬ್ಬಂದಿಯೊAದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು.ಉತ್ತಮ ವೈದ್ಯರು ಲಭ್ಯವಿದ್ದು ಉತ್ತಮ ಆಸ್ಪತ್ರೆ ಪ್ರಶಸ್ತಿ ಮುದ್ದೇಬಿಹಾಳ ಸಾರ್ವಜನಿಕ ಆಸ್ಪತ್ರೆ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.

ಡಾ.ಶಿವಾನಂದ ನಾಡಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಕ್ಷತಾ ಚಲವಾದಿ, ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ವಿಠ್ಠಲ ಕಿಲಾರಟ್ಟಿ, ಶುಶ್ರೂಷಕ ಸಂಘದ ಮುಖಂಡ ಶಿವಣ್ಣ ಮಾಗಿ ಮಾತನಾಡಿದರು. ಆರೋಗ್ಯ ರಕ್ಷಾ ಸಮೀತಿ ನಾಮನಿರ್ದೇಶಿತ ಸದಸ್ಯರಾದ ಶಿವನಗೌಡ ಪಾಟೀಲ, ಮಹ್ಮದರಫೀಕ ಶಿರೋಳ,ಸದು ಮಠ,ಅಂಬರೀಶ ಬಿರಾದಾರ,ಮಾಬೂಬಿ ಬಾಗವಾನ,ಡಾ.ಕೌಸರ,ಇಲಾಖೆ ನೌಕರರರಾದ ಮೊಮ್ಮದರಫಿಕ ಬಾಗವಾನ, ಅಯ್ಯಮ್ಮ ಕೊಣ್ಣೂರ , ಬಸವರಾಜ ಹಾವೇರಿ, ಬಸವರಾಜ ಬಡಿಗೇರ, ಯಲಗೂರೇಶ ತೊನಶ್ಯಾಳ , ರೇಖಾ ಜಾಯಗೊಂಡ, ಸಂತೋಷ ಅಂಗಡಗೇರಿ, ವೀರೇಶ್ ಜಿಂಜಿಗಡ್ಡಿ ,ರಾಜು ರಾಥೋಡ, ಪ್ರವೀಣ್ ಓದಿ, ಬಗಲಿ, ವಿ ವಿ.ಪವಾಡಶೆಟ್ಟಿ ಮಾಂತೇಶ ಹಿರೇಮಠ ಪಾಲ್ಗೊಂಡಿದ್ದರು.

Latest News

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವೆಡೆ

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ;                                                                                          ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮಹಿಳಾ ಆಯೋಗದ ಅಧ್ಯಕ್ಷೆ ಹೆಸರು ದುರುಪಯೋಗ ಮಾಡಿಲ್ಲ; ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ‘ಡಿ’ ದರ್ಜೆ ಸಿಬ್ಬಂದಿ ಕುಸುಮಾ

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ:                          ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ: ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಾರ್ಗಿಲ್ ವೀರಯೋಧರ ಸ್ಮಾರಕ

ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾದ ಮುದ್ದೇಬಿಹಾಳ ಮತಕ್ಷೇತ್ರದ ನಿಯೋಗ

ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾದ ಮುದ್ದೇಬಿಹಾಳ ಮತಕ್ಷೇತ್ರದ ನಿಯೋಗ

ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನಿಂದ ಕಾಂಗ್ರೆಸ್ ಪಕ್ಷದ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ತೆರಳಿದ ನಿಯೋಗವು ಖರ್ಗೆ ಅವರನ್ನು ಭೇಟಿಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ನಿಯೋಗದ ಉಸ್ತುವಾರಿ ವಹಿಸಿದ್ದ ವಾಯ್.ಎಚ್.ವಿಜಯಕರ್

ಸಿದ್ಧರಾಮಯ್ಯ ಸರಕಾರದಲ್ಲಿ ನಾಡಗೌಡರು ಮಂತ್ರಿಯಾಗಬೇಕಿತ್ತು-ಸಿಎo ಡಿಕೆಶಿ

ಸಿದ್ಧರಾಮಯ್ಯ ಸರಕಾರದಲ್ಲಿ ನಾಡಗೌಡರು ಮಂತ್ರಿಯಾಗಬೇಕಿತ್ತು-ಸಿಎo ಡಿಕೆಶಿ

ಮುದ್ದೇಬಿಹಾಳ : ಸಿದ್ಧರಾಮಯ್ಯನವರ ಸರ್ಕಾರದಲ್ಲಿಯೇ ಈ ಹಿಂದೆ ನಿಮ್ಮ ಶಾಸಕ ಸಿ.ಎಸ್.ನಾಡಗೌಡರ ಹೆಸರು ಮಂತ್ರಿ ಸ್ಥಾನಕ್ಕೆ ಅಂತಿಮಗೊoಡಿತ್ತು.ಆದರೆ ಕೊನೆ ಗಳಿಗೆಯಲ್ಲಿ ಎಸ್.ಆರ್.ಪಾಟೀಲರ ಹೆಸರು ಘೋಷಣೆಯಾಯಿತು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರ ಬೆಂಬಲಿಗರು ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಸಿಎಂ ಕಚೇರಿಗೆ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು,ಬೆಂಬಲಿಗರನ್ನುದ್ದೇಶಿಸಿ ಸಿಎಂ ಡಿಕೆಶಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.ನಿಮ್ಮ ಆಸೆ,ವಿಚಾರ ನಾನು ಅರಿತಿದ್ದೇನೆ.ನಾಡಗೌಡರ ಬಗ್ಗೆ ಯಾರು