ಮುದ್ದೇಬಿಹಾಳ : ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಕುಟುಂಬದವರು ಪರಿಶ್ರಮದಿಂದ ಗಳಿಸಿದ ಆಸ್ತಿಯನ್ನು ದಾನ ಮಾಡುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಸರ್ಕಾರಿ ಕೈಗಾರಿಕಾ ಹಾಗೂ ಉದ್ಯೋಗ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಮ್ಮ ಚಿನಿವಾರ ಅವರು ಬಂಥನಾಳ ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಶಿಕ್ಷಣಕ್ಕಾಗಿ ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿದರು.ಬಂಗಾರಮ್ಮ ಸಜ್ಜನ ಹಾಗೂ ಅತಾಲಟ್ಟಿ ಗೌಡ್ರು ದಾನವಾಗಿ ಕೊಡದಿದ್ದರೆ ಇಂದು ಬಿಎಲ್‌ಡಿಇ ಸಂಸ್ಥೆಯೇ ಆರಂಭವಾಗುತ್ತಿರಲಿಲ್ಲ.ಸಾಕಷ್ಟು ಜನ ಯರ‍್ಯಾರ ಆಸ್ತಿ ಎತ್ತಿ ಹಾಕಿದ್ದಾರೋ ಆ ಭಗವಂತನಿಗೆ ಗೊತ್ತಿದೆ.ಸಮಾಜದಲ್ಲಿ ನಮ್ಮ ನುಡಿಗಳು ಕೇವಲ ಭಾಷಣ, ಉಪದೇಶಗಳಿಗೆ ಸಿಮೀತವಾಗಬಾರದು ಎಂದು ಹೇಳಿದರಲ್ಲದೇ ಸರಕಾರಿ ಸಂಸ್ಥೆಗಳಿAದ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ.ಕಂಪೌAಡ ಹಾಗೂ ಮೆಲ್ಮಹಡಿ ನಿರ್ಮಾಣಕ್ಕೆ ಎರಡು ಕೋಟಿ ಬಿಡುಗಡೆ ಮಾಡಲು,ಹೊಸ ಟ್ರೇಡ್‌ಗಳನ್ನು ತರಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಕೈಗಾರಿಕೆ ಮತ್ತು ಉದ್ಯೋಗ ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ಬಸವಪ್ರಭು ಹಿರೇಮಠ ಮಾತನಾಡಿ, ನಾಡಗೌಡರು ಕಾರ್ಮಿಕ ಮಂತ್ರಿ ಇದ್ದಾಗ ನಾಲತವಾಡದಲ್ಲಿ ಮಹಿಳಾ ಐಟಿಐ ತಂದಿದ್ದರು.ಇದೀಗ ಪುರುಷರ ಐಟಿಐ ಕಾಲೇಜು ತರುವ ಮೂಲಕ ರಾಜ್ಯದಲ್ಲಿ ಒಂದೇ ತಾಲ್ಲೂಕಿನಲ್ಲಿ ಮಹಿಳಾ ಹಾಗೂ ಪುರುಷರ ಐಟಿಐ ಕಾಲೇಜು ಆರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕೌಶಲ್ಯ ಹೆಚ್ಚಿಸಲು ರಾಜ್ಯದಲ್ಲಿ ಶೇ.30 ರಷ್ಟು ಇರುವ ವಿದ್ಯಾರ್ಥಿ ಸಮೂಹಕ್ಕೆ ಐಟಿಐ ಕೇಂದ್ರಗಳು ಆಸರೆಯಾಗಲಿವೆ ಎಂದರು.
ಜೈನ ಸಮಾಜದ ಮುಖಂಡ ಸತೀಶ ಓಸ್ವಾಲ್ ಮಾತನಾಡಿ, ಓಸ್ವಾಲ್ ಕುಟುಂಬದವರ ದಾನದ ಫಲವಾಗಿ ಮುದ್ದೇಬಿಹಾಳಕ್ಕೆ ಐಟಿಐ ಕಾಲೇಜು ಬಂದಿದೆ.ಪಾರ್ವತಿಬಾಯಿ ಓಸ್ವಾಲ್ ಅವರು ತಮ್ಮ 3.2 ಎಕರೆ ಜಮೀನು ನೀಡಿದ್ದು ಅದರ ಮೌಲ್ಯ ಇಂದು 8-10 ಕೋಟಿ ರೂ.ಮೌಲ್ಯ ಇದೆ ಎಂದರು.
ಕಾರ್ಯಕ್ರಮದಲ್ಲಿ ಭೂದಾನಿಗಳಾದ ಪಾರ್ವತಿಬಾಯಿ ಓಸ್ವಾಲ್, ಪ್ರಾಚಾರ್ಯ ಎಸ್.ಎಸ್.ಅವರಾದಿ,ಓಸ್ವಾಲ್ ಕುಟುಂಬದ ಸದಸ್ಯರಾದ ಡಾ.ಡಿ.ಬಿ.ಓಸ್ವಾಲ್,ನರೇಂದ್ರ ಓಸ್ವಾಲ್,ಮೋಹನ ಓಸ್ವಾಲ್,ವಿಲಾಸ ಓಸ್ವಾಲ್,ಮುಖಂಡರಾದ ಎಂ.ಬಿ.ನಾವದಗಿ,ಅಬ್ದುಲಗಫೂರ ಮಕಾನದಾರ,ಬಿಇಓ ಎಂ.ಎಸ್.ಬಡದಾನಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಉದ್ಯಮಿ ಶರಣು ಸಜ್ಜನ,ಪಿಡಬ್ಲೂö್ಯಡಿ ಎಇಇ ಎ.ಬಿ.ರೆಡ್ಡಿ,ರಮೇಶ ಓಸ್ವಾಲ್,ವಾಯ್.ಎಚ್.ವಿಜಯಕರ್ ಇದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಪೂಜಪ್ಪ ಪೂಜಾರಿ ವಂದಿಸಿದರು.







