ಕ್ರೀಡಾಸ್ಫೂರ್ತಿಯಿಂದ ಆಟವಾಡಿ-ಶಾಸಕ ನಾಡಗೌಡ

ಕ್ರೀಡಾಸ್ಫೂರ್ತಿಯಿಂದ ಆಟವಾಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ಬಿಸಿಲಿನ ತೀವ್ರತೆಯ ಮಧ್ಯೆ ಆರಂಭಗೊAಡಿರುವ ಹಾರ್ಡ ಟೆನ್ನಿಸ್‌ಬಾಲ್ ಕ್ರಿಕೇಟ್ ಟೂರ್ನಾಮೆಂಟ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಆರೋಗ್ಯದ ಕಡೆ ಲಕ್ಷö್ಯವಿಟ್ಟು ಕ್ರೀಡಾಸ್ಫೂರ್ತಿಯಿಂದ ಆಟವಾಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಎಂಬಿಎಲ್ ಗ್ರೂಪ್ಸ್ನಿಂದ ಚಾಂಪಿಯನ್ ಟ್ರೋಫಿ-2026 ಹಾರ್ಡಬಾಲ್ ಟೆನ್ನಿಸ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗೆಳೆಯರ ಬಳಗದಿಂದ ಆಯೋಜಿಸಿದ ಕ್ರಿಕೇಟ್ ಟೂರ್ನಾಮೆಂಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ ಕ್ರಿಕೇಟ್ ಪಂದ್ಯಾವಳಿ ಯಶಸ್ವಿಯಾಗಿ ಸಾಗಲಿ ಎಂದು ಶುಭಕೋರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಅಮರೇಶ ಗೂಳಿ, ಸದು ಮಠ,ಕೆಯುಸಿ ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಂತ ಚಲವಾದಿ, ಮುಖಂಡ ಹುಸೇನ್ ಮುಲ್ಲಾ,ಸಂಗಣ್ಣ ಮೇಲಿನಮನಿ, ಜಾವೇದ ಇನಾಮದಾರ,ಮೊಹ್ಮದರಫೀಕ ಶಿರೋಳ,ರಂಜಾನ್ ನದಾಫ,ಯಲ್ಲಪ್ಪ ಮ್ಯಾಗೇರಿ ಮೊದಲಾದವರು ಇದ್ದರು.

ಆಟದ ಸಮಯ ಬದಲಾವಣೆಗೆ ಒತ್ತಾಯ:
ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆ ಸಮಯವಾಗಿದ್ದು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಸಮಯದಲ್ಲಿ ಹಾರ್ಡ್ಬಾಲ್ ಟೆನ್ನಿಸ್ ಕ್ರಿಕೇಟ್ ಟೂರ್ನಾಮೆಂಟ್ ಆಯೋಜನೆ ಮಾಡಿರುವುದು ಆಟಗಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.ಕೆಲವೆಡೆ ಬಿಸಿಲಿನ ಪ್ರಖರತೆಯಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಹಗಲು ಹೊತ್ತಿನಲ್ಲಿ ಅದು ಭಾರೀ ಬಿಸಿಲಿನ ಸಮಯದಲ್ಲಿ ಕ್ರಿಕೆಟ್ ಆಟವಾಡಿಸುವುದು ಅಗತ್ಯವಿತ್ತೇ ಎಂಬ ಮಾತುಗಳು ಕೇಳಿ ಬಂದಿವೆ.ಆಟದ ಸಮಯವನ್ನು ಬದಲಾಯಿಸಬೇಕು ಎಂದು ತಂಡಗಳ ಆಟಗಾರರು ಒತ್ತಾಯಿಸಿದ್ದಾರೆ.

Latest News

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?:                ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?: ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡುವಂತೆ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ:                   ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ: ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯರಝರಿ ಜಿಪಂ ಭಾಗದ ರೈತರು ಬುಧವಾರದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಶಾಸಕರು,ಸರಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಳೆ ಕೊರತೆ ಇದೆ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ ಹೇಳಿಕೆಯನ್ನು ತಗೆದುಕೊಂಡರೋ ಗೊತ್ತಿಲ್ಲ.ಸದ್ಯಕ್ಕೆ ಮುಖ್ಯಮಂತ್ರಿಗಳು ಪತ್ರವ್ಯವಹಾರ ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದೇನೆ.ನನ್ನದು ಸಿದ್ಧಾಂತದ ಮೇಲೆ ಹೋರಾಟ ನಡೆಯುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ತಮ್ಮನ್ನು ಎದುರಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನನ್ನ ಮಾನಸಿಕ ಸ್ಥಿತಿ ಹೇಗಿದೆ ? ಎಂಬುದನ್ನು ಮತ್ತೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ.ಮಾನಸಿಕ ಚಿಕಿತ್ಸೆಯ ಬಗ್ಗೆ ಕೊಟ್ಟಿರುವ ಮಾತಿಗೆ ನಾನು