ಡಿಸಿಜಿ ನ್ಯೂಸ್ ಪರಿಣಾಮ: ಆಯ್ಕೆಯಾದ ವಿದ್ಯಾರ್ಥಿಗಳ ಕಣ್ಣಲ್ಲಿ ಆನಂದ ಭಾಷ್ಪ..! ತಂದೆ ಇಲ್ಲದ ವಿದ್ಯಾರ್ಥಿಗೂ ಸಿಕ್ತು ಉಚಿತ ಶಿಕ್ಷಣದ ಅವಕಾಶ

ಡಿಸಿಜಿ ನ್ಯೂಸ್ ಪರಿಣಾಮ: ಆಯ್ಕೆಯಾದ ವಿದ್ಯಾರ್ಥಿಗಳ ಕಣ್ಣಲ್ಲಿ ಆನಂದ ಭಾಷ್ಪ..! ತಂದೆ ಇಲ್ಲದ ವಿದ್ಯಾರ್ಥಿಗೂ ಸಿಕ್ತು ಉಚಿತ ಶಿಕ್ಷಣದ ಅವಕಾಶ

ಮುದ್ದೇಬಿಹಾಳ : ಟ್ಯಾಲೆಂಟ್ ಸರ್ಚ್ ಎಕ್ಸಾಂ ಪರೀಕ್ಷೆಯಫಲಿತಾಂಶ ಹಲವು ವಿಶೇಷ ಪ್ರತಿಭೆಗಳನ್ನು ಹೊರತಂದಿದೆ.ಅದರಲ್ಲೂ ಕಡುಬಡತನದಲ್ಲಿದ್ದ ವಿದ್ಯಾರ್ಥಿಗೂ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡುವ ಮೂಲಕ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ವಂದಾಲದ ಕಾರ್ತಿಕ ಬೆನ್ನೂರ ಎಂಬ ವಿದ್ಯಾರ್ಥಿ ಮೊದಲ ಟಾಪ್ 20ರ ನಂತರದ ಸ್ಥಾನವನ್ನು ಪಡೆದುಕೊಂಡಿದ್ದ ಈತ ತಂದೆಯನ್ನು ಕಳೆದುಕೊಂಡಿದ್ದು ಮುಂದಿನ ಶಿಕ್ಷಣವನ್ನು ಓದಲು ಬಡತನ ಅಡ್ಡಿಯಾಗಿತ್ತು. ಆತನಿಗೆ ಈ ಪರೀಕ್ಷೆಯಲ್ಲಿ 21ನೇ ಸ್ಥಾನ ಬಂದಿತ್ತು.ಇದನ್ನು ಗಮನಿಸಿದ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಹಾಗೂ ಮಾರ್ಗದರ್ಶಕರಾದ ನಾಗರಾಜಗೌಡ ಬಿರಾಜದಾರ ಅವರು, ವಿದ್ಯಾರ್ಥಿ ಕಾರ್ತಿಕನ ತಾಯಿ ಹೊರಗುತ್ತಿಗೆಯಲ್ಲಿ ಅಲ್ಪವೇತನದಲ್ಲಿ ಕೆಲಸ ಮಾಡುತ್ತಿದ್ದು ಆತನಿಗೆ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ತೀರ್ಮಾನ ಪ್ರಕಟಿಸಿದರಲ್ಲದೇ ಕಾರ್ತಿಕ್‌ನ ಎರಡು ವರ್ಷದ ಶಿಕ್ಷಣ ಉಚಿತವಾಗಿ ನೀಡುವುದಾಗಿ ಪ್ರಕಟಿಸಿದ್ದು ಸಂಸ್ಥೆಯ ಸಾಮಾಜಿಕ ಕಳಕಳಿಗೆ ಮಾದರಿಯಾಯಿತು.

ಆಯ್ಕೆಯಾದ ವಿದ್ಯಾರ್ಥಿಗಳಿಂದ ಆನಂದ ಭಾಷ್ಪ : ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ಮೊದಲ 20 ಸ್ಥಾನಗಳಲ್ಲಿ ಆಯ್ಕೆಯಾದ ಕೆಲವು ವಿದ್ಯಾರ್ಥಿಗಳು ಖುಷಿ ತಡೆಯದೇ ಆನಂದ ಭಾಷ್ಪ ಸುರಿಸಿದರು. ಲಿಂಗಸೂರಿನ ವಿದ್ಯಾರ್ಥಿನಿ ನಿಖಿತಾ ಮಾತನಾಡಿ, ಅಪ್ಪ ವಕೀಲಿ ವೃತ್ತಿ ಮಾಡುತ್ತಾರೆ.ಆದರೆ ಅವರ ಆಸೆಯಂತೆ ನಾನು ವೈದ್ಯಳಾಗುತ್ತೇನೆ.ಆಕ್ಸಫರ್ಡ್ ಸಂಸ್ಥೆಯಲ್ಲಿ ಓದುವುದಕ್ಕೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಮಾಡಿಕೊಳ್ಳುತ್ತೇನೆ ಎಂದರು.ಟಾಪರ್‌ಗಳಾದ ಶಹಾಪೂರದ ಅಮನ್, ಕಾರ್ತಿಕ್ ಬೆನ್ನೂರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಯ್ಕೆಯಾದ ಹಲವು ಬಡ ವಿದ್ಯಾರ್ಥಿಗಳ ಕಣ್ಣಲ್ಲಿ ನೀರು ಜೀನುಗಿತು.ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆಯಿAದ ಟ್ಯಾಲೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ ಸಾರ್ವತ್ರಿಕವಾಗಿ ಕೊಟ್ಟ ವಿದ್ಯಾರ್ಥಿವೇತನದ ಮಾತು ಸಂಸ್ಥೆಯವರು ಉಳಿಸಿಕೊಂಡು ಪಾಲಕರ ನಂಬಿಕೆಗೆ ಪಾತ್ರರಾದರು ಎಂಬ ಮಾತುಗಳು ಕೇಳಿ ಬಂದವು.

ವರದಿ ಮಾಡಿದ್ದು ನಿಮ್ಮ ಡಿಸಿಜಿ ನ್ಯೂಸ್ :
ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ನಡೆಸಿದ್ದ ಸಂಸ್ಥೆಯವರು ಅಂದು 3550 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದರೂ ಬಹುಮಾನಕ್ಕೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ.ಇದನ್ನು ನಿಮ್ಮ ಡಿಸಿಜಿ ನ್ಯೂಸ್ ವರದಿ ಮಾಡಿತ್ತು.ಅಲ್ಲದೇ ಸಾರ್ವತ್ರಿಕವಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಕಿವಿಮಾತನ್ನು ಸಂಸ್ಥೆಯವರ ಗಮನಕ್ಕೆ ತಂದಿತ್ತು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಅವರು ಪ್ರತ್ಯೇಕ ಸಮಾರಂಭವ,ಸ್ಪರ್ಧೆ ಏರ್ಪಡಿಸಿ ಯಾರಿಗೂ ಅನ್ಯಾಯವಾಗದಂತೆ ವಿದ್ಯಾರ್ಥಿಗಳ ಸ್ನೇಹಿ ನಿರ್ಧಾರ ಕೈಗೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Latest News

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ನೂತನ

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?;                                                                           ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?; ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಮುದ್ದೇಬಿಹಾಳ : ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT: ಭಾರತೀಯ ರೈಲ್ವೆ ಇಲಾಖೆಯು ಬರೋಬ್ಬರಿ 32 ಸಾವಿರ ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಕುರಿತು ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. Join Our Telegram: https://t.me/dcgkannada ಆರಂಭಿಕ ವೇತನವು 18000 ರೂ. ಇರುತ್ತದೆ. ಸದ್ಯದಲ್ಲಿಯೇ ಅರ್ಜಿ ಸ್ವೀಕೃತಿಯು ಆರಂಭವಾಗಲಿದೆ. ನಂತರ ಪರೀಕ್ಷೆ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ. 2024 ನೇ