ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿಯಲ್ಲಿ ಬೆಳಗ್ಗೆ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಹೋಟೆಲ್‌ಗೆ ನುಗ್ಗಿದ ಪರಿಣಾಮ (Accident news) ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಮೃತರನ್ನು ಚಿಂತಾಮಣಿ ತಾಲೂಕಿನ ಮಾಡಿಕೆರೆಯ ಶಿವಾನಂದ, ಕೋಲಾರ ಜಿಲ್ಲೆಯ ವೆಲಗಲಬುರೆ ಗ್ರಾಮದ ಶಾಂತಕುಮಾರ್ ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಹೋಟೆಲ್ ಕಾರ್ಮಿಕರು ಎಂದು ತಿಳಿದುಬಂದಿದೆ.
ಚಿಂತಾಮಣಿಯಿಂದ ಕೋಲಾರ ಕಡೆ ಹೋಗುತ್ತಿದ್ದ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಚಾಲಕನ ಅತಿವೇಗದ ಕಾರಣ ದರ್ಶಿನಿ ಫಾಸ್ಟ್ ಫುಡ್ ಹೋಟೆಲ್ ಗೆ ನುಗ್ಗಿದೆ.
ಇದನ್ನೂ ಓದಿ: ತಪ್ಪು ಮಾಡಿದವರಿಗೆ ದೇವಿ ಶಿಕ್ಷಿಸಲಿ.. ರೇಣುಕಾಸ್ವಾಮಿ ಮಾಡಿದ್ದೂ ತಪ್ಪು: ನಿರ್ಮಾಪಕ ಉಮಾಪತಿ
ಡಿಕ್ಕಿಯ ರಭಸಕ್ಕೆ ಕ್ಯಾಷಿಯರ್ ಕುರ್ಚಿ ಯಲ್ಲಿ ಕೂತಿದ್ದ ಮಾಲೀಕ ಮತ್ತು ಅಲ್ಲಿಯೇ ತರಕಾರಿ ಹರಚ್ಚುತ್ತಿದ್ದ ಭಟ್ಟರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.