ರಾಯಚೂರು : ಖಾಸಗಿ ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ಖಾಸಗಿ ಬಸ್ ಕಂಡಕ್ಟರ್ ಮೃತಪಟ್ಟಿದ್ದಾನೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಈ ದುರ್ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಹಾರಾಪುರ ಗ್ರಾಮದ ಬಳಿ ಹೆದ್ದಾರಿಯಲ್ಲಿ ಸಂಭವಿಸಿದ್ದು, ನಿರ್ವಾಹಕ ಪುಂಡಲೀಕ (38) ಅಸುನೀಗಿದ್ದಾರೆ. ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಸಿಸಲಾಗಿದೆ.
ಬೆಂಗಳೂರಿನಿಂದ ಯಾದಗಿರಿ ಮಾರ್ಗವಾಗಿ ಹೊರಟಿದ್ದ KSRTC ಬಸ್ ಪ್ರಯಾಣಿಕರನ್ನು ಇಳಿಸುವಾಗ ಹಾರಾಪುರದಲ್ಲಿ ನಿಲ್ಲಿಸಲಾಗಿತ್ತು. ಇದೇ ವೇಳೆ ಕಲಬುರಗಿ ಜಿಲ್ಲೆಯತ್ತ ಹೊರಟಿದ್ದ ಖಾಸಗಿ ಬಸ್, ಸಾರಿಗೆ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Murder: ಹೆಂಡತಿ ಎದುರೇ ಗಂಡನನ್ನು ಕೊಚ್ಚಿ ಕೊಚ್ಚಿ ಕೊಂದ್ರು, ಪತ್ನಿಯ ಕೈವಾಡದ ಶಂಕೆ!
ಈ ಸಂದರ್ಭದಲ್ಲಿ ಡಿಕ್ಕಿಯ ರಭಸಕ್ಕೆ ಸರ್ಕಾರಿ ಬಸ್ ರಸ್ತೆ ಬದಿ ಉರುಳಿ ಬಿದ್ದಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.