ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿರುವ (Accident) ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ಶನಿವಾರ ಈ ಘಟನೆ ನಡೆದಿದೆ.
ಆದರೆ ವಾಂತಿಯ ಪರಿಣಾಮ ಈ ಅಪಘಾತದ ವೇಳೆ ಕಾರಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Join Our Telegram: https://t.me/dcgkannada
ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ದರ್ಶನ ಪಡೆದಿದ್ದ ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್ ರಹಿಮಾನ್ ಮುಲ್ಲಾ ಅವರೊಂದಿಗೆ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಊರಿಗೆ ಹಿಂದಿರುಗುತ್ತಿದ್ದರು.
ಈ ವೇಳೆ ಕಾರಿನಲ್ಲಿ ಕಾವ್ಯಾ ಎಂಬವರಿಗೆ ವಾಂತಿ ಬಂದಿತ್ತು. ತಕ್ಷಣವೇ ಕಾರನ್ನು ನಿಲ್ಲಿಸಿ ಕಾವ್ಯಾಗೆ ಉಪಚರಿಸಲು ಎಲ್ಲರೂ ಕಾರಿನಿಂದ ಕೆಳಗಡೆ ಇಳಿದಿದ್ದರು. ಈ ವೇಳೆಗೆ ಕಾರಿನ ಚಾಲಕನೂ ಕೆಳಗಿಳಿದು ಮೂತ್ರ ವಿಸರ್ಜನೆಗಾಗಿ ಅಲ್ಲಿಂದ ಕೆಲ ದೂರ ತೆರಳಿದ್ದಾರೆ.
ಇದನ್ನೂ ಓದಿ: Rahul vs Modi: ಪ್ರಧಾನಿ ಮೋದಿಗೆ ವಾರ್ನಿಂಗ್ ಕೊಟ್ಟ ರಾಹುಲ್ ಗಾಂಧಿ!
ಇದೇ ವೇಳೆ ಕಂಟೇನರ್ ಲಾರಿಯೊಂದು ಬಂದು ಇದಕ್ಕಿಂದಂತೆ ಕಾರಿನ ಮೇಲೆ ಮಗುಚಿ ಬಿದ್ದಿದೆ. ಇದರಿಂದಾಗಿ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಅದೃಷ್ಟವಶಾತ್ ಕಾರಿನಿಂದ ಎಲ್ಲರೂ ಇಳಿದಿದ್ದರಿಂದ ಯಾರಿಗೂ ಹಾನಿಯಾಗಿಲ್ಲ ಎಂದು ವರದಿಯಾಗಿದೆ.