Aim high and achieve

ಉನ್ನತ ಗುರಿ ಇಟ್ಟುಕೊಂಡು ಸಾಧನೆ ಮಾಡಿ

ಉನ್ನತ ಗುರಿ ಇಟ್ಟುಕೊಂಡು ಸಾಧನೆ ಮಾಡಿ

ಮುದ್ದೇಬಿಹಾಳ : ಭೋವಿ ವಡ್ಡರ ಸಮಾಜದಲ್ಲಿ ಸಾಂಪ್ರದಾಯಿಕ ಕುಲಕಸುಬು ಪ್ರಧಾನವಾಗಿದ್ದರೂ ಸಮಾಜದ ಬಾಂಧವರ ಮಕ್ಕಳು ಶೈಕ್ಷಣಿಕವಾಗಿಯೂ ಉನ್ನತ ಗುರಿ ಇಟ್ಟುಕೊಂಡು ಸಾಧನೆ ತೋರಬೇಕು ಎಂದು ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ ತಾಲೂಕಾ ಘಟಕದ ಉಪಾಧ್ಯಕ್ಷ ಹಣಮಂತ ಯ.ಭೈರವಾಡಗಿ ಹೇಳಿದರು.

ತಾಲೂಕಿನ ಢವಳಗಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಢವಳಗಿ ಗ್ರಾಮದ ವಡ್ಡರ ಸಮಾಜ ಹಾಗೂ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಮುದ್ದೇಬಿಹಾಳ ತಾಲೂಕಾ ಘಟಕದ ವತಿಯಿಂದ ಈಚೇಗೆ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ 2025 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.ಶಿಕ್ಷಣದಿಂದ ಸಾಮಾಜಿಕವಾಗಿ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.

ಭೋವಿ ವಡ್ಡರ ಸಮಾಜದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಾದ ಅಭಿಷೇಕ ಲೋ. ಮುರಾಳ, ಸ್ವಪ್ನಾ ರಾ. ಭೈರವಾಡಗಿ, ಹಣಮಂತಿ ನಾ. ವಡ್ಡರ, ಅಭಿಷೇಕ ಲ. ನಡವಿನಮನಿ, ವೆಂಕಟೇಶ ಗ. ಗೌಂಡಿ, ಸಂಜನಾ ಪ್ರ. ಗೌಂಡಿ, ಲಕ್ಷ್ಮಿ ಮ. ವಡ್ಡರ , ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ನಾಗಮ್ಮ ಭೀ ಗುಜ್ಜಲ, ಅಕ್ಷತಾ ವಿ ಬಂಡಿವಡ್ಡರ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಮಾಜಿ ಸದಸ್ಯ ರವಿ ಢವಳಗಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಕಾಶ ಭೈರವಾಡಗಿ, ನಾಗಪ್ಪ ಢವಳಗಿ, ರಾಜು ಭೈರವಾಡಗಿ, ಕಾಶಪ್ಪ ಭೈರವಾಡಗಿ, ಹಣಮಂತ ಮುತ್ತಗಿ, ರಾಜು ಢವಳಗಿ, ಗಿರೀಶ್ ಭೈರವಾಡಗಿ, ನಾಗರಾಜ ಭೈರವಾಡಗಿ,ರಾಮು ವಡ್ಡರ ಲಕ್ಷ್ಮಣ ಭೈರವಾಡಗಿ,ರಾಜ್ಯ ಕಾರ್ಯದರ್ಶಿ ಹಣಮಂತ ಭೀ ಬೆಳಗಲ್ಲ, ಪ್ರಶಾಂತ ಭೈರವಾಡಗಿ, ಹಣಮಂತ ಢವಳಗಿ, ಬಾಬು ಭೋವಿ, ಬಸವರಾಜ ಆಲಕುಂಟಿ ಇದ್ದರು.

Latest News

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ನೀಟ್

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ಮುದ್ದೇಬಿಹಾಳ : ಹುನಗುಂದ ತಾಲ್ಲೂಕಿನಿಂದ ತಂಗಡಗಿ ಮುಖಾಂತರ ತಾಳಿಕೋಟಿಯವರೆಗೆ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು

ಅಶೋಕ ಚಟ್ಟೇರ ಅಧ್ಯಕ್ಷರಾಗಿ ಆಯ್ಕೆ : ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಅಶೋಕ ಚಟ್ಟೇರ ಅಧ್ಯಕ್ಷರಾಗಿ ಆಯ್ಕೆ : ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕು ಬಣಜಿಗ ಸಮಾಜದ ನೂತನ ಕಾರ್ಯಕಾರಿಣಿ ಮಂಡಳಿಯನ್ನು ಸರ್ವಾನುಮತದಿಂದ ಭಾನುವಾರ ಆಯ್ಕೆ

ದೇವದುರ್ಗ ಉದ್ಯೋಗ ಖಾತ್ರಿ ಅಕ್ರಮ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ದೇವದುರ್ಗ ಉದ್ಯೋಗ ಖಾತ್ರಿ ಅಕ್ರಮ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ರಾಯಚೂರು,ಜೂ 15- ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ನಾರಾಯಣಪುರ: ಕೊಡೇಕಲ್ ಪಟ್ಟಣದ ಸರರ್ಕಾರಿ ಪ್ರೌಢಶಾಲೆಯಲ್ಲಿ ವಲಯ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರುಪುರ ಬಿಇಒ ಯಲ್ಲಪ್ಪ ಕಾಡ್ಲೂರ ಮಾತನಾಡಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತವರಣ ನಿರ್ಮಾಣದ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವದು ಹಾಗೂ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸೇರಿ ಅನುದಾನಿತ ಶಾಲೆಗಳಲ್ಲಿ ಸಿಗುವ ಬಿಸಿಯೂಟ, ಸಮವಸ್ತ್ರ ಪಠ್ಯಪುಸ್ತಕಗಳ ವಿತರಣೆ ಸೇರಿ

ಬಿಜೆಪಿ ಸರ್ಕಾರಕ್ಕೆ 11 ವರ್ಷ: ಕೇಂದ್ರ ಸರ್ಕಾರದಿಂದಲೂ ಐದು ಕೆ.ಜಿ ಅಕ್ಕಿ- ಪಂಪಣ್ಣವರ

ಬಿಜೆಪಿ ಸರ್ಕಾರಕ್ಕೆ 11 ವರ್ಷ: ಕೇಂದ್ರ ಸರ್ಕಾರದಿಂದಲೂ ಐದು ಕೆ.ಜಿ ಅಕ್ಕಿ- ಪಂಪಣ್ಣವರ

ಮುದ್ದೇಬಿಹಾಳ : ಜನೌಷಧಿ ಕೇಂದ್ರಗಳು, ಉಚಿತ ಅಕ್ಕಿ ಕೊಡುವ ಯೋಜನೆ, ಆಯುಷ್ಮಾನ್ ಆರೋಗ್ಯ ಕಾರ್ಡ ಇಂತಹ ನೂರಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಬಿಜೆಪಿ ಸರ್ಕಾರ ಕೇಂದ್ರದಲ್ಲಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಐದು ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆ ಕಲ್ಪಿಸುವ ಯೋಜನೆಯನ್ನು ಮೋದಿ