ಮುದ್ದೇಬಿಹಾಳ : ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ (ಗೌಂಡಿ, ಎಲೆಕ್ಟ್ರಿಷಿಯನ್, ಕಾರಪೇಂಟರ್ ವೆಲ್ಡಿಂಗ್, ಪ್ಲಂಬರ್, ಪೇಂಟರ್) ವಿತರಿಸಲು ಕಾರ್ಮಿಕ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಯಿಂದ ನೋಂದಣಿಯಾದ ಫಲಾನುಭವಿಗಳಿಗೆ ಸುರಕ್ಷಾ ಕಿಟ್ ವಿತರಿಸಲಾಗುವುದು.
ಫಲಾನುಭವಿಗಳು ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ, ಫಲಾನುಭವಿಯ ಎರಡು ಭಾವಚಿತ್ರ ಹಾಗೂ ದ್ವಿಪ್ರತಿಗಳಲ್ಲಿ ಅ.24ರೊಳಗೆ ಕಾರ್ಮಿಕರ ನಿರೀಕ್ಷಕರ ಕಚೇರಿ, ಹುಡ್ಕೋ ಕಾಲನಿ, 21ನೇ ಕ್ರಾಸ್, ಮುದ್ದೇಬಿಹಾಳ ಇಲ್ಲಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಕಾರ್ಮಿಕ ನಿರೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







