ಮುದ್ದೇಬಿಹಾಳ : ತಾಲ್ಲೂಕು ಬಣಜಿಗ ಸಮಾಜದ ನೂತನ ಕಾರ್ಯಕಾರಿಣಿ ಮಂಡಳಿಯನ್ನು ಸರ್ವಾನುಮತದಿಂದ ಭಾನುವಾರ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಎಂ.ಎಸ್.ನಾವದಗಿ ವಕೀಲರು, ಅಧ್ಯಕ್ಷರಾಗಿ ಅಶೋಕ ಚಟ್ಟೇರ, ಉಪಾಧ್ಯಕ್ಷರಾಗಿ ಬಿ.ಎಸ್.ಚಿನಿವಾರ ಹಾಗೂ ವಿಜಯ ಬೆಲ್ಲದ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಬಳ್ಳೊಳ್ಳಿ, ಖಜಾಂಚಿಯಾಗಿ ಸಂತೋಷ ನಾಯನೇಗಲಿ, ಯುವ ಘಟಕದ ಅಧ್ಯಕ್ಷರಾಗಿ ಶಂಕರ ಕಡಿ, ಉಪಾಧ್ಯಕ್ಷರಾಗಿ ಬಸವರಾಜ ದಡ್ಡಿ ವಕೀಲರು, ಪ್ರಧಾನ ಕಾರ್ಯದರ್ಶಿಯಾಗಿ ಸುಚೀತ ಚಳಗೇರಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಶೋಭಾ ನಾಗಠಾಣ, ಉಪಾಧ್ಯಕ್ಷರಾಗಿ ಕವಿತಾ ದಡ್ಡಿ , ಪ್ರದಾನ ಕಾರ್ಯದರ್ಶಿಗಳಾಗಿ ರೇಖಾ ಗಡೇದ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ವಹಿಸಿದ್ದರು. ಮುಖಂಡರಾದ ಬಸವರಾಜ ನಾವದಗಿ, ರುದ್ರೇಶ ಕಿತ್ತೂರ, ದಾನಪ್ಪ ನಾಗಠಾಣ, ಎಸ್. ಎಸ್. ಹುನಗುಂದ, ರಾಜು ಜೋಳದ, ಸಂಗಮೇಶ ನಾವದಗಿ, ಡಿ.ಎಸ್.ಚಳಗೇರಿ, ಲೋಹಿತ ನಾಲತವಾಡ, ಉಮೇಶ ತಾರನಾಳ, ಸರೋಜಾ ಕೋರಿ, ಜ್ಯೋತಿ ದಡ್ಡಿ ಮೊದಲಾದವರು ಇದ್ದರು.







