ಮುದ್ದೇಬಿಹಾಳ : ತಂಬಾಕು ಮಾನವನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ವಸ್ತುವಾಗಿದ್ದು ಅದನ್ನು ತೃಜಿಸುವುದರಿಂದ ಹಣ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಎನ್.ಸಿ.ಡಿ.ಆಯ್ ಕೌನ್ಸಲರ್ ಎಮ್.ಎಸ್.ಅಂಬಿಗೇರ ಹೇಳಿದರು.
ಪಟ್ಟಣದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ನಿಮಿತ್ಯ ಶನಿವಾರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮುದ್ದೇಬಿಹಾಳ ವಲಯದ ಪಿ.ಕೆ.ನಗರ ಕಾರ್ಯಕ್ಷೇತ್ರದಲ್ಲಿ ತಾಲೂಕು ಆಸ್ಪತ್ರೆ ಎನ್‌ಸಿಡಿಯವರ ಸಹಬಾಗಿತ್ವದಲ್ಲಿ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿವರಣೆ ನೀಡಿದರು. ಸಂಸ್ಥೆಯ ಮೇಲ್ವಿಚಾರಕ ನಾಗೇಶ ಎಸ್.ಕೆ, ಒಕ್ಕೂಟದ ಅಧ್ಯಕ್ಷ ಸುನಂದಾ ಹಡಲಗೇರಿ, ಸೇವಾಪ್ರತಿನಿಧಿ ರೇಖಾ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.