ಇಳಕಲ್ಲ: ಹಬ್ಬಗಳನ್ನು ಖಷಿಯಾಗಿರಲು ಆಚರಣೆ ಮಾಡಬೇಕು ವಿನಃ ಸ್ವಾರ್ಥದಿಂದ ಸಮಾಜದ ಸ್ವಾಸ್ಥ ಕೆಡಿಸುವಂತೆ ಇರಬಾರದು. ಅಂಥವರಿಂದ ಎಚ್ಚರಿಕೆಯಿಂದ ಇರಬೇಕು. ಸಮಾಜದಲ್ಲಿ ಶಾಂತಿ ಕದಡುವವರನ್ನು ಇಲಾಖೆ ಬಿಡುವುದಿಲ್ಲ ಎಂದು ಸಿಪಿಐ ಸುನೀಲ್ ಸವದಿ ಹೇಳಿದರು.
ಇಳಕಲ್ಲ ನಗರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮುಖಾಂತರ ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು
ಸಾಮಾಜಿಕ ಮಾಧ್ಯಮಗಳು ಕ್ರಿಯಾಶೀಲವಾಗಿದೆ. ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಕೆಲವರು ಹಳೆಯ ಪೋಟೊ ಮತ್ತು ವಿಡಿಯೋಗಳನ್ನು ಹಬ್ಬದ ಸಂದರ್ಭದಲ್ಲಿ ಬಳಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಾರೆ. ಇಂತಹ ವಿಷಯ ಗಮನಕ್ಕೆ ಬಂದರೆ ಅದಕ್ಕೆ ಪ್ರತಿಕ್ರಿಯೆ ಮಾಡದೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಹೇಳಿದರು.
ಪಿಎಸ್ಐ ಎಸ್ ಆರ್ ನಾಯಕ
ಪ್ರಾಸ್ತಾವಿಕವಾಗಿ ಮಾತನಾಡಿ, ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಇಲಾಖೆಯ ನಿಯಮಗಳನ್ನು ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಸಭೆಯಲ್ಲಿ ಅಹ್ಮದ ಉಸ್ಮಾನಗಣಿ, ಮಹ್ಮದ ಯೂಸುಫ್ ಬಾಗವಾನ, ಮಹ್ಮದ ಸಾಬ್ ಖಾಜೀ, ಬಾಗವಾನ,ಮಹೀಬೂಬ ದೋಟಿಹಾಳ,ಮಹೀಬೂಬ ಗೂಡೇಕಾರ,ಸೈಯದ ಸೀರಾಜ್ ಖಾಜೀ,ಸುಲೇಮಾನ ಚೋಪದಾರ,ಮಾಂತಪ್ಪಚೆನ್ನಿ,ಚಂದ್ರಾಪಟ್ಟಣ್ಣ,ಮಂಜುನಾಥ ಸಪ್ಪರದ,ಸಾಮಾಜಿಕ ಹೋರಾಟಗಾರ್ತಿ ಲಕ್ಷ್ಮೀಭಾಯಿ ಗಾಜೀ,
ಇಳಕಲ್ಲ ನಗರದ
ಹಿಂದೂ–ಮುಸ್ಲಿಂ ಸಮಾಜದ ಮುಖಂಡರು ಇದ್ದರು.