ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಕ್ಷಣೆ ಕೋರಿ ಭಾರತಕ್ಕೆ ಬಂದ್ರು! (ವಿಡಿಯೋ ನೋಡಿ)

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಕ್ಷಣೆ ಕೋರಿ ಭಾರತಕ್ಕೆ ಬಂದ್ರು! (ವಿಡಿಯೋ ನೋಡಿ)

ನವದೆಹಲಿ: ಸರ್ಕಾರಿ ಉದ್ಯೋಗ ಮೀಸಲಾತಿ ಯೋಜನೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಬಾಂಗ್ಲಾ ದೇಶದಾದ್ಯಂತ ಭಾರೀ ಹಿಂಸಾಚಾರ ನಡೆಯುತ್ತಿದೆ. ಈ ನಡುವೆ ಇಂದು ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಕ್ಷಣೆಕೋರಿ ಭಾರತಕ್ಕೆ ಬಂದಿದ್ದಾರೆಂದು ವರದಿಯಾಗಿದ್ದು, ಅತ್ತ ಬಾಂಗ್ಲಾದೇಶದ ಅಧಿಕಾರ ಸೇನೆಯ ತೆಕ್ಕೆಗೆ ಸೇರಿದೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಸುದ್ದಿಗೋಷ್ಠಿ ನಡೆಸಿ ವಿಚಾರವನ್ನು ಘೋಷಣೆ ಮಾಡಿದ್ದಾರೆ.

ಶೇಖ್ ಹಸೀನಾ ರಾಜೀನಾಮೆ ನೀಡಿರುವ ಹಿನ್ನೆಲೆ ಸೇನೆಯ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆಯಾಗಲಿದೆ. ಬಾಂಗ್ಲಾದ ಅರಾಜಕತೆ ಅಂತ್ಯಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಭಾರೀ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ರಾಜಧಾನಿಯಿಂದ ಪಲಾಯನ ಮಾಡಿದ್ದಾರೆ. ಇದೀಗ ದೇಶದ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಂಡು ಮಧ್ಯಂತರ ಸರ್ಕಾರವನ್ನು ರಚಿಸುತ್ತೇವೆ. ದೇಶಕ್ಕೆ ಶಾಂತಿಯನ್ನು ಹಿಂದಿರುಗಿಸುತ್ತೇವೆ, ಹಿಂಸಾಚಾರವನ್ನು ನಿಲ್ಲಿಸುವಂತೆ ನಾವು ನಾಗರಿಕರನ್ನು ಕೇಳುತ್ತೇವೆ.

ಕಳೆದ ಕೆಲವು ವಾರಗಳಲ್ಲಿ ನಡೆದ ಎಲ್ಲಾ ಹತ್ಯೆಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮಧ್ಯಂತರ ಸರ್ಕಾರವನ್ನು ರಚಿಸಲು ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ. ದೇಶದಲ್ಲಿ ಕರ್ಫ್ಯೂ ಅಥವಾ ಯಾವುದೇ ತುರ್ತು ಪರಿಸ್ಥಿತಿಯ ಅಗತ್ಯವಿಲ್ಲ. ಇಂದು ರಾತ್ರಿಯೊಳಗೆ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ದೇಶ ತೊರೆದಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸುರಕ್ಷತೆಗಾಗಿ ಇದೀಗ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿ ಪ್ರಕಾರ, ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೂಡಲೇ ಬಾಂಗ್ಲಾ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ಶೇಖ್ ಹಸೀನಾ ಅವರು ಭಾರತದ ತ್ರಿಪುರಾದ ರಾಜಧಾನಿ ಅಗರ್ತಲಾಗೆ ಬಂದಿಳಿದ್ದಾರೆ.

ಭಾರತದ ಅಗರ್ತಲಾವು ಬಾಂಗ್ಲಾ ರಾಜಧಾನಿ ಢಾಕಾಗೆ ತೀರ ಹತ್ತಿರವಾದ ನಗರ. ಇಲ್ಲಿಗೆ ಶೇಖ್ ಹಸೀನಾ ತಮ್ಮ ಸಹೋದರಿಯೊಂದಿಗೆ ಬಾಂಗ್ಲಾದೇಶದ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Latest News

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ನೀಟ್

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ಮುದ್ದೇಬಿಹಾಳ : ಹುನಗುಂದ ತಾಲ್ಲೂಕಿನಿಂದ ತಂಗಡಗಿ ಮುಖಾಂತರ ತಾಳಿಕೋಟಿಯವರೆಗೆ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು

ಅಶೋಕ ಚಟ್ಟೇರ ಅಧ್ಯಕ್ಷರಾಗಿ ಆಯ್ಕೆ : ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಅಶೋಕ ಚಟ್ಟೇರ ಅಧ್ಯಕ್ಷರಾಗಿ ಆಯ್ಕೆ : ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕು ಬಣಜಿಗ ಸಮಾಜದ ನೂತನ ಕಾರ್ಯಕಾರಿಣಿ ಮಂಡಳಿಯನ್ನು ಸರ್ವಾನುಮತದಿಂದ ಭಾನುವಾರ ಆಯ್ಕೆ

ದೇವದುರ್ಗ ಉದ್ಯೋಗ ಖಾತ್ರಿ ಅಕ್ರಮ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ದೇವದುರ್ಗ ಉದ್ಯೋಗ ಖಾತ್ರಿ ಅಕ್ರಮ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ರಾಯಚೂರು,ಜೂ 15- ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ನಾರಾಯಣಪುರ: ಕೊಡೇಕಲ್ ಪಟ್ಟಣದ ಸರರ್ಕಾರಿ ಪ್ರೌಢಶಾಲೆಯಲ್ಲಿ ವಲಯ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸುರುಪುರ ಬಿಇಒ ಯಲ್ಲಪ್ಪ ಕಾಡ್ಲೂರ ಮಾತನಾಡಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತವರಣ ನಿರ್ಮಾಣದ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವದು ಹಾಗೂ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸೇರಿ ಅನುದಾನಿತ ಶಾಲೆಗಳಲ್ಲಿ ಸಿಗುವ ಬಿಸಿಯೂಟ, ಸಮವಸ್ತ್ರ ಪಠ್ಯಪುಸ್ತಕಗಳ ವಿತರಣೆ ಸೇರಿ

ಬಿಜೆಪಿ ಸರ್ಕಾರಕ್ಕೆ 11 ವರ್ಷ: ಕೇಂದ್ರ ಸರ್ಕಾರದಿಂದಲೂ ಐದು ಕೆ.ಜಿ ಅಕ್ಕಿ- ಪಂಪಣ್ಣವರ

ಬಿಜೆಪಿ ಸರ್ಕಾರಕ್ಕೆ 11 ವರ್ಷ: ಕೇಂದ್ರ ಸರ್ಕಾರದಿಂದಲೂ ಐದು ಕೆ.ಜಿ ಅಕ್ಕಿ- ಪಂಪಣ್ಣವರ

ಮುದ್ದೇಬಿಹಾಳ : ಜನೌಷಧಿ ಕೇಂದ್ರಗಳು, ಉಚಿತ ಅಕ್ಕಿ ಕೊಡುವ ಯೋಜನೆ, ಆಯುಷ್ಮಾನ್ ಆರೋಗ್ಯ ಕಾರ್ಡ ಇಂತಹ ನೂರಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಬಿಜೆಪಿ ಸರ್ಕಾರ ಕೇಂದ್ರದಲ್ಲಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಐದು ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆ ಕಲ್ಪಿಸುವ ಯೋಜನೆಯನ್ನು ಮೋದಿ