ಜಮಖಂಡಿ: ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲಿ ವರ ಸಾವನಪ್ಪಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ಸಮಾರಂಭ ನಡೆದಿತ್ತು. ಎಲ್ಲರೂ ಸ್ವಸಂತೋಷದಿಂದ ಮದುವೆ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆದರೆ, ವಿಧಿಯಾಟ ಮಾತ್ರ ಬೇರೆ ಆಗಿತ್ತು.
ವಧು-ವರರು ವೇದಿಕೆಯ ಮೇಲೆ ಬಂದು ಅಕ್ಷತೆ ಬಿದ್ದ ಹದಿನೈದು ನಿಮಿಷದ ಬಳಿಕ ವರನಿಗೆ ಹೃದಯಾಘಾತವಾಗಿದೆ. ಹೃದಯಾಘಾತದಿಂದ ಕುಸಿದು ಬಿದ್ದ ವರ ಪ್ರವೀಣ ಕುರಣಿ ಸಾವನಪ್ಪಿರುವ (25) ಮೃತ ದುರ್ದೈವಿ.
ಪ್ರವೀಣ ಕುರಣಿ ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ. ಮದುವೆಯ ಸಂಭ್ರಮದಲ್ಲಿದ್ದ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.