ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಭಾರತೀಯ ಕಿಸಾನ ಸಂಘದ ಬೆಂಬಲ

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಭಾರತೀಯ ಕಿಸಾನ ಸಂಘದ ಬೆಂಬಲ

Ad
Ad

ಬೀಳಗಿ: ಗ್ರಾಮ ಆಡಳಿತಾಧಿಕಾರಿಗಳು ಮೂರು ದಿನಗಳಿಂದ ರಾಜ್ಯಾದಂತ ತಮ್ಮ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಿರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೀವ್ರ ತೊಂದರೆಯಾಗಿದ್ದು, ಅವರ ಬೇಡಿಕೆಗಳು ನ್ಯಾಯೋಚಿತವಾಗಿದ್ದು ತಕ್ಷಣ ಸರಕಾರ ಸ್ಪಂದಿಸಬೇಕೆಂದು ಅವರ ಹೋರಾಟ ಬೆಂಬಲಿಸಿ ಆಗ್ರಹಿಸಿ ಭಾರತೀಯ ಕಿಸಾನ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ತಹಶೀಲ್ದಾರ ಕಚೇರಿ ಮುಂದೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು.

Ad
Ad

ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿಯೊಬ್ಬರ ಜನನದಿಂದ ಮರಣದವರಿಗೆ ಹಾಗೂ ಯಾವುದೇ ಕೃಷಿ ಚಟುವಟಿಕೆ ಕಾಗದ ಪತ್ರಗಳು ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುವಲ್ಲಿ ಸದಾ ಶ್ರಮಿಸುತ್ತಿದ್ದು ಕೇಂದ್ರ ಸ್ಥಾನದಲ್ಲಿ ಅವರಿಗೆ ಕಚೇರಿ ನಿರ್ಮಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ವಂಶ ವೃಕ್ಷ ಜಾತಿ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ ತಪಿಸ್ಥರಲ್ಲದ ಕಂದಾಯ ನೌಕರರ ಮೇಲೆ ಎಪ್ ಐ ಆರ್ ದಾಖಲಿಸಿದೇ ತಪಿಸ್ಥ ಅರ್ಜಿದಾರರನ್ಮು ಹೊಣೆಗಾರರನ್ನಾಗಿಸಬೇಕು ಎಂದರು.

ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವನಗೌಡ ಪಾಟೀಲ ಮಾತನಾಡಿ, ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ ತೋಟಗಾರಿಕೆ ಆಯಾ ಇಲಾಖೆಗಳಿಗೆ ವಹಿಸಬೇಕು ಹಾಗೂ ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯವನ್ನು ಮುಂದವರಿಸಬೇಕು ಎಂದರು.

ವಿಕಲಚೇತನರ ಮುಖಂಡ ಶೇಖರ ಕಾಖಂಡಕಿ ಮಾತನಾಡಿ, ಮ್ಯುಟೇಶನ್ ಅವಧಿ ಹೆಚ್ಚಿಸಿ ಪ್ರೋಟೊಕಾಲದಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈ ಬೀಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಾಬ್ ಚಾರ್ಟ ನಿಗದಿವಪಡಿಸಬೇಕು ಎಂದರು.

ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ನೌಕರರ ವರ್ಗಾವಣೆ ನಿಯಮಾವಳಿ ಅವೈಜ್ಞಾನಿಕವಾಗಿದ್ದು ಎಲ್ಲ ಇಲಾಖೆ ನೌಕರರ ನಿಯಮಾವಳಿಯಂತೆ ಅವರ ಕೇಳಿದ ಯಾವುದೇ ಅಂತರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲು ಮಾರ್ಗಸೂಚಿಸಿ ಹೊರಡಿಸಿ ಮಾನವಿಯತೇಯ ಮೆರೆಗೆ ವಯೋವೃದ್ದ ತಂದೆ ತಾಯಿ ಸೇವೆ ಮಾಡಲು ಅನೂಕೂಲ ಒದಗಿಸಬೇಕು ಮಾಜಿ ಸೈನಿಕರ ಹಾಗೂ ಕಾಯಿಲೆ ಪೀಡತ ನೌಕರರ ವರ್ಗಾವಣೆಯನ್ನು ಯಾವದೇ ಅವಧಿ ಪರಿಗಣಿಸದೇ ನೇರವಾಗಿ ವರ್ಗಾವಣೆ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪಂ. ಹಿರೇಮಠ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಬ್ಬರಾಯಗೌಡ ಪಾಟೀಲ, ಡೊಂಗ್ರೀ ನಧಾಪ, ಎಂ. ವಾಯ್. ವಡವಾಣಿ, ಸಂಗಪ್ಪ ಅಗಸರ ಅಶೋಕ ದೇವಿನವರ, ಗುರು ಅನಗವಾಡಿ, ಶ್ರೀಶೈಲ ಮೇಟಿ, ಮಂಜು ಭಾವಿ ಯಲ್ಲಾಲಿಂಗ ಕುರಿ, ಗಿರೀಶ ಮಂಟೂರ, ವಿಠ್ಠಲ ಹನುಮರ, ಈರಪ್ಪ ಗಾಣಿಗೇರ, ಅಶೋಕ ಮುಳವಾಡ ಸೇರಿದಂತೆ ಅನೇಕ ಮುಖಂಡರು ಇದ್ದರು.

Latest News

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ಮುದ್ದೇಬಿಹಾಳ : ಸಮಾಜಕ್ಕೆ ಪ್ರೇರಣೆಯಾಗುವ ಸೇವೆಯನ್ನು ನಾವೆಲ್ಲ ಮಾಡಬೇಕು ಎಂದು ಕರ್ನಾಟಕ ಕೋ ಆಪರೇಟಿವ್

ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ-ಶಂಕರ ಬಿದರಿ

ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ-ಶಂಕರ ಬಿದರಿ

ಮುದ್ದೇಬಿಹಾಳ : ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ರಂಭಾಪುರಿ ಸ್ವಾಮೀಜಿಯವರು ಸೇರಿದಂತೆ ಹಲವು ಮಠಾಧೀಶರು

ಹಸಿರು ತೋರಣ ಗೆಳೆಯರ ಬಳಗದ ಕಾಳಜಿ:ಪಕ್ಷಿಗಳಿಗೆ ನೀರು ಇಡೋಣ

ಹಸಿರು ತೋರಣ ಗೆಳೆಯರ ಬಳಗದ ಕಾಳಜಿ:ಪಕ್ಷಿಗಳಿಗೆ ನೀರು ಇಡೋಣ

ಮುದ್ದೇಬಿಹಾಳ: ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ

ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿ-ಕುಪ್ಪಸ್ತ

ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿ-ಕುಪ್ಪಸ್ತ

ನಿಡಗುಂದಿ : ಕಲಿಕಾ ಸಾಮಗ್ರಿ ಸರ್ಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ ಎಂದು

ಎಸ್.ಎಸ್.ಎಲ್.ಸಿ ಪರೀಕ್ಷೆ:ಪರೀಕ್ಷಾ ಕೇಂದ್ರವಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಮುಖ್ಯ ಅಧಿಕ್ಷಕರ ಜವಾಬ್ದಾರಿ..!

ಎಸ್.ಎಸ್.ಎಲ್.ಸಿ ಪರೀಕ್ಷೆ:ಪರೀಕ್ಷಾ ಕೇಂದ್ರವಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಮುಖ್ಯ ಅಧಿಕ್ಷಕರ ಜವಾಬ್ದಾರಿ..!

ಮುದ್ದೇಬಿಹಾಳ : ಪರೀಕ್ಷೆ ನಡೆಯುವ ಶಿಕ್ಷಣ ಸಂಸ್ಥೆ, ಪ್ರೌಢಶಾಲೆ ಮುಖ್ಯಗುರುಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಮುಖ್ಯ ಅಧೀಕ್ಷಕರಾಗಿ ಅದೇ ಶಾಲೆಯಲ್ಲಿರುವ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿದೆ.ಆದರೆ ಇಲ್ಲಿನ ತಾಲ್ಲೂಕು ಶಿಕ್ಷಣಾಧಿಕಾರಿಗಳು ನಿಯೋಜಿಸಿರುವ ಶಾಲೆಯ ವೇಳಾ ಪಟ್ಟಿಯಲ್ಲಿ ಸ್ಥಳೀಯ ಪರೀಕ್ಷಾ ಕೇಂದ್ರದ ಶಾಲೆಯ ಮುಖ್ಯಶಿಕ್ಷಕರಿಗೆ ಮುಖ್ಯ ಅಧೀಕ್ಷಕರ ಜವಾಬ್ದಾರಿಯನ್ನು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ತಾಳಿಕೋಟಿಯ ಎರಡು ಪರೀಕ್ಷಾ ಕೇಂದ್ರಗಳು ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರಗಳಿಗೆ ಆಯಾ

ಪ್ರಕಾಶ್ ರಾಜ್ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್

ಪ್ರಕಾಶ್ ರಾಜ್ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್

ಹೈದರಾಬಾದ್: ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್‌ ರಾಜ್, ನಟರಾದ ವಿಜಯ್‌ ದೇವರಕೊಂಡ, ರಾಣಾ ದಗ್ಗುಭಾಟಿ ಸೇರಿದಂತೆ 25ಕ್ಕೂ ಹೆಚ್ಚು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ 25 ನಟ,ನಟಿಯರ ವಿರುದ್ದ ತೆಲಂಗಾಣದಲ್ಲಿ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಉದ್ಯಮಿ ಫಣೀಂದ್ರ ಶರ್ಮಾ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಸಂಬ್ರಿಟಿಗಳು ಮತ್ತು ಪ್ರಭಾವಿಗಳಲ್ಲಿ ಪ್ರಣೀತಾ, ನಿಧಿ ಅಗರ್‌ವಾಲ್,