ನವದೆಹಲಿ: ದೇಶದಲ್ಲಿನ ಟೆಲಿಕಾಂ ಕ್ಷೇತ್ರ ಈಗಾಗಲೇ 5ಜಿ ಬಳಿಕ 6ಜಿ ಕಡೆಗೆ ಕೆಲಸ ಆರಂಭಿಸಿದೆ. ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ BSNL ತನ್ನ 4ಜಿ ಇಂಟರ್ನೆಟ್ ಸೇವೆಯನ್ನು ಬರುವ ಅಕ್ಟೋಬರ್‌ನಲ್ಲಿ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದಕ್ಕಾಗಿ ಈಗಾಗಲೇ ಬಹುತೇಕ ಪರೀಕ್ಷೆ ಹಾಗೂ ಪ್ರಯೋ ಗಗಳನ್ನು ಬಿಎಸ್‌ಎನ್‌ಎಲ್ ಮುಗಿಸಿದ್ದು, ಎಲ್ಲ ಪರೀಕ್ಷೆಗಳಲ್ಲಿಯೂ ಫಲಿತಾಂಶ ಸಮಾಧಾನಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BSNL 4ಜಿ ನೆಟ್‌ವರ್ಕ್‌ಗಾಗಿ ಈಗಾಗಲೇ ದೇಶಾದ್ಯಂತ 25000ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಲಾಗಿದ್ದು, ತನ್ನ 4ಜಿ ಸಿಮ್‌ಗಳನ್ನು ಬಿಎಸ್‌ಎನ್ ಗ್ರಾಹಕರಿಗೆ ವಿತರಿಸುತ್ತಿದೆ.
ಈ ನಡುವೆ 2024ರವರೆಗೆ ಬಿಎಸೆನ್ನೆಲ್ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ.