Budget Breaking: Great news for farmers Central Govt

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ.

ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸೀತಾರಾಮನ್. ಕಿಸಾನ್ ಕ್ರೆಡಿಟ್ ಕಾರ್ಯ ಸಾಲದ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್?

ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಭಾರತ ಸರ್ಕಾರವು ರೈತರಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಾಲ ಒದಗಿಸಲು ಪ್ರಾರಂಭಿಸಿದ ಒಂದು ಯೋಜನೆಯಾಗಿದೆ. ಇದನ್ನು 1998 ರಲ್ಲಿ ಪರಿಚಯಿಸಲಾಯಿತು.

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಉದ್ದೇಶಗಳು:

  • ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವುದು.
  • ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು.
  • ರೈತರ ಆದಾಯವನ್ನು ಹೆಚ್ಚಿಸುವುದು.
  • ರೈತರನ್ನು ಸಾಲದ ಸುಳಿಯಿಂದ ಪಾರು ಮಾಡುವುದು.

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು:

  • ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಿರುತ್ತದೆ.
  • ಯಾವುದೇ ರೀತಿಯ ಭದ್ರತೆ ನೀಡುವ ಅಗತ್ಯವಿಲ್ಲ.
  • ಸಾಲವನ್ನು ಮರುಪಾವತಿಸಲು ರೈತರಿಗೆ ಸಾಕಷ್ಟು ಸಮಯಾವಕಾಶವಿರುತ್ತದೆ.
  • ಈ ಕಾರ್ಡ್ ಬಳಸಿ ಬಿತ್ತನೆ ಬೀಜಗಳು, ಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಹತೆಗಳು:

  • ನೀವು ರೈತರಾಗಿರಬೇಕು.
  • ನಿಮಗೆ ಸ್ವಂತ ಜಮೀನು ಇರಬೇಕು ಅಥವಾ ನೀವು ಗೇಣಿದಾರರಾಗಿರಬೇಕು.
  • ನಿಮ್ಮ ವಯಸ್ಸು 18 ರಿಂದ 75 ವರ್ಷಗಳ ನಡುವೆ ಇರಬೇಕು.

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ನೀವು ಹತ್ತಿರದ ಬ್ಯಾಂಕ್ ಅಥವಾ ಕೃಷಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
  • ಅರ್ಜಿಯೊಂದಿಗೆ ನಿಮ್ಮ ಜಮೀನಿನ ದಾಖಲೆಗಳು, ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಬೇಕು.
    ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಬಹಳ ಉಪಯುಕ್ತವಾದ ಯೋಜನೆ. ಈ ಯೋಜನೆಯಡಿ ಸಾಲ ಪಡೆದು ತಮ್ಮ ಕೃಷಿಯನ್ನು ಅಭಿವೃದ್ಧಿಪಡಿಸಬಹುದು.

ದಾಖಲೆ: ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸುತ್ತಿದ್ದಾರೆ. 2019ರಲ್ಲಿ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಪೂರ್ಣಾವಧಿ ಹಣಕಾಸು ಸಚಿವೆಯಾಗಿ ನೇಮಕವಾದ ನಿರ್ಮಲಾ ಸೀತಾರಾಮನ್ ಅವರು ಒಟ್ಟು 7 ಪೂರ್ಣಾವಧಿ 2024ರ ಫೆಬ್ರವರಿಯಲ್ಲಿ ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.

Latest News

ಇ.ಆರ್.ಟಿ ಅನುಷ್ಠಾನ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ

ಇ.ಆರ್.ಟಿ ಅನುಷ್ಠಾನ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ

ಧಾರವಾಡ, ಜೂನ್‌16: ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಧಾರವಾಡ, ಜೂನ್‌ 16: ಮಳೆಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಾರ್ವಜನಿಕ ಸ್ನೇಹಿಯಾಗಿ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ನೀಟ್

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ಮುದ್ದೇಬಿಹಾಳ : ಹುನಗುಂದ ತಾಲ್ಲೂಕಿನಿಂದ ತಂಗಡಗಿ ಮುಖಾಂತರ ತಾಳಿಕೋಟಿಯವರೆಗೆ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು

ಬಸವಸಾಗರ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ನಾರಾಯಣಪುರ: ಬಸವಸಾಗರವು ಶೇ.83 ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಕ್ರಸ್ಟ್ ಗೇಟ್‌ಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಕ್ರಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ಹಾಗೂ ಎಂಪಿಸಿಎಲ್ ಖಾಸಗಿ ಜಲವಿದ್ಯುತ್ ಸ್ಥಾವರದಿಂದ 3 ಸಾವಿರ ಕ್ಯೂಸೆಕ್ ಸೇರಿ 8 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಒಳಹರಿವು ಸದ್ಯ 20 ಸಾವಿರ ಕ್ಯೂಸೆಕ್‌ನಷ್ಟಿದೆ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ನಾರಾಯಣಪುರ: ನಾರಾಯಣಪುರ ಮಾರ್ಗವಾಗಿ ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹಾಗೂ ಕೊಡೇಕಲ್ ಮಾರ್ಗವಾಗಿ ತಾಳಿಕೋಟಿಗೆ ಹೊಸ ಬಸ್ ಸಂಚಾರ ಶನಿವಾರ ಯಾದಗಿರಿ ಸಾರಿಗೆ ಡಿಸಿ (ಡಿವಿಜನಲ್ ಕಂಟ್ರೋಲರ್) ಅವರಿಗೆ ಬರೆದ ಮನವಿಯನ್ನು ಸಾರಿಗೆ ನಿಯಂತ್ರಕ ಐ.ಎ ಕರಣಿ ಅವರಿಗೆ ಗ್ರಾಮಸ್ಥರ ಸಲ್ಲಿಸಿದರು. ಈ ವೇಳೆ ಮುಖಂಡ ಸಂಗಮೇಶ ತಾಳಿಕೋಟಿ ಮಾತನಾಡಿ ಜಿಲ್ಲೆಯ ಗಡಿಗ್ರಾಮವಾಗಿರುವನಾರಾಯಣಪುರ ಸೇರಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರಿಗೆ ರಾತ್ರಿ ವೇಳೆ ನಾರಾಯಣಪುರ ಮಾರ್ಗವಾಗಿ ಬಸ್ಸುಗಳ ಸಂಚಾರ ಇಲ್ಲದೆ